Gadag Lakkundi  
ರಾಜ್ಯ

ಐತಿಹಾಸಿಕ ಸ್ಥಳ ಲಕ್ಕುಂಡಿಯಲ್ಲಿ ಉತ್ಖನನ ಆರಂಭ.

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಐತಿಹಾಸಿಕ ಸ್ಥಳ, ದೇವಸ್ಥಾನಗಳ ಸ್ವರ್ಗ, ಶಿಲ್ಪಕಲೆಗಳ ತೊಟ್ಟಿಲು. ಇಂದ್ರನ ಅಮರಾವತಿಗೂ ಮಿಗಿಲಾಗಿ ತನ್ನ ಒಡಲೊಳಗೆ ಅನೇಕ ಸಂಪತ್ತನ್ನು ಇಟ್ಟುಕೊಂಡಿರುವ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಶುಕ್ರವಾರದಿಂದ ಉತ್ಖನನ ಆರಂಭವಾಗಿದೆ. ಇತ್ತೀಚೆಗೆ ಬಂಗಾರದ ನಿಧಿ ಸಿಕ್ಕಿದ್ದರಿಂದ ದೇಶಾದ್ಯಂತ ಜನರ ಗಮನ ಲಕ್ಕುಂಡಿ ಕಡೆಗೆ ಸೆಳೆದಿತ್ತು. ಅದರ ಬೆನ್ನಲ್ಲೇ ಉತ್ಖನನ ಆರಂಭ ಆಗಿದ್ದರಿಂದ ಅಧಿಕಾರಿಗಳಲ್ಲಿ, ಜನರಲ್ಲಿ, ಜನ ಪ್ರತಿನಿಧಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿದೆ. ಉತ್ಖನನ ಕಾರ್ಯಕ್ಕೆ ಈಗಾಗಲೇ ಸರ್ಕಾರ 25 ಲಕ್ಷ ಅನುದಾನ ಬಿಡುಗಡೆ ಮಾಡಿದೆ.
ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಮತ್ತು ಲಕ್ಕುಂಡಿ ಪ್ರಾಧಿಕಾರ ನೇತೃತ್ವದಲ್ಲಿ ಶುಕ್ರವಾರ ಉತ್ಖನನಕ್ಕೆ ಚಾಲನೆ ನೀಡಲಾಯಿತು. ಪುರಾತತ್ವ ಇಲಾಖೆ ನಿವೃತ್ತ ಅಧೀಕ್ಷಕ ಹಾಗೂ ಉತ್ಖನನ ನಿರ್ದೇಶಕ ಟಿ.ಎಂ ಕೇಶವ ನೇತೃತ್ವದಲ್ಲಿ ಉತ್ಖನನ ಆರಂಭವಾಯಿತು. ಗ್ರಾಮದ ಕೋಟೇ ವೀರಭದ್ರೇಶ್ವರ ದೇವಸ್ಥಾನ ಹಾಗೂ ಸಿದ್ದರ ಬಾವಿ ಮಧ್ಯದ ಜಾಗೆಯಲ್ಲಿ 10 ಚದರ ಮೀಟರ್​ ವ್ಯಾಪ್ತಿಯಲ್ಲಿ ಮೊದಲ ಹಂತದ ಉತ್ಖನನ ನಡೆಸಲು ಆರಂಭಿಸಲಾಯಿತು.
ಉತ್ಖನನ ಆರಂಭಕ್ಕೂ ಮುನ್ನ ಸ್ಥವನ್ನು ಸ್ವಚ್ಚಗೊಳಿಸಲಾಯಿತು. ಜತೆಗೆ ವಿಶೇಷ ಭೂಸ್ವಾಧಿನ ಮೂಲಕ ಲಕ್ಕುಂಡಿ ಪ್ರಾಧಿಕಾರ ವಶಪಡಿಸಿಕೊಂಡ 5000 ಚದರ ಅಡಿ ಜಾಗೆಯಲ್ಲಿ ಇದ್ದ ಖಾಸಗಿ ಸಂಸ್ಥೆಯ ಶಾಲಾ ಕಟ್ಟವನ್ನು ತೆರವುಗೊಳಿಲಾಯಿತು. ಉತ್ಖನನ ಸ್ಥಳದಲ್ಲಿ ಇತ್ತೀಚೆಗೆ ಸಿಎಂ ಕಾರ್ಯಕ್ರಮ ನಿಮಿತ್ಯ ಹಾಕಿದ್ದ 1 ಅಡಿ ಮಣ್ಣು ಯಂತ್ರಗಳ ಸಹಾಯದಿಂದ ತೆಗೆಯಲಾಇತು. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಉತ್ಖನನ ಪರಿಕರಿಗಳಾದ ಗಾರೆ, ಪಿಕಾಸಿ, ಬುಟ್ಟಿ, ದಾರ ಸೇರಿದಂತೆ ವಿವಿಧ ಪರಿಕಾರಗಳಿಗೆ ಪೂಜೆ ಪುನಸ್ಕಾರ ನೆರವೇರಿಸಿ, ಉತ್ಖನನ ಕಾರ್ಯ ಆರಂಭಿಸಲಾಯಿತು. ಮುಂದಿನ ಮೂರರಿಂದ ನಾಲ್ಕು ತಿಂಗಳ ಕಾಲ ಈ ಕಾರ್ಯ ನಡೆಯಲಿದೆ. ಅಷ್ಟೇ ಕುತೂಹಲವನ್ನು ಮೂಡಿಸಿದೆ.
ಕಳೆದ ಶನಿವಾರ ಜಿಲ್ಲೆಯ ಲಕ್ಕುಂಡಿಯಲ್ಲಿ 470 ಗ್ರಾಂ ನಿಧಿ ಸಿಕ್ಕ ಬೆನ್ನಲ್ಲೇ ದೇಶಾದ್ಯಂತ ಐತಿಹಾಸಿಕ ಸ್ಥಳ ಲಕ್ಕುಂಡಿ ಗ್ರಾಮದ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಈಗ ಉತ್ಖನನ ಆರಂಭ ಆಗಿದ್ದು ಜನರಲ್ಲಿ ಮತ್ತಷ್ಟು ಕುತೂಹಲ ಮೂಡಿದೆ. ಐತಿಹಾಸಿಕ ಕುರುಹುಗಳು, ಶಿಲನ್ಯಾಸಗಳು, ಆಭರಣಗಳಂತ ವಸ್ತುಗಳು ಸಿಗಬಹುದು ಎಂದು ಪ್ರವಾಸೋದ್ಯಮ, ಪುರಾತತ್ವ ಇಲಾಖಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಒಂದು ದಿನಕ್ಕೆ ಕೇವಲ 10 ಸೆಂಟಿಮೀಟರ್​ ಮಾತ್ರ ಉತ್ಖನನ ನಡೆಸಲು ಪುರಾತತ್ವ ಇಲಾಖೆ ಅನುಮತಿ ನಿಡಿದೆ. ಉತ್ಖನನ ಕಾರ್ಯವು ಸೂಕ್ಷ$್ಮವಾದ ಕೆಲಸ ಆಗಿರುವುದರಿಂದ ಸೂಕ್ಷ$್ಮ ಕೆತ್ತನೆಯ ಸಾಮಗ್ರಿಗಳನ್ನು ಬಳಸಿ ಕಾರ್ಯವನ್ನು ಆರಂಭಿಸಲಾಗಿದೆ. ಉತ್ಖನನ ವೇಳೆ ಪ್ರತಿ ಹಂತದಲ್ಲೂ ಸ್ಥಳದ ಮಣ್ಣು ಪರೀಕ್ಷಿಸುವ ಕಾರ್ಯ ನಡೆಯಲಿದೆ.
ಪುರಾತತ್ವ ಇಲಾಖೆ ನಿವೃತ್ತ ಅಧಿಕಾರಿ ಹಾಗೂ ಉತ್ಖನನ ನಿರ್ದೇಶಕ, ವಿಜ್ಞಾನಿ ಟಿ.ಎಂ ಕೇಶವ, ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿ ಆರ್​ ಸೈಜೇಶ್ವರ , ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಕೊಟ್ರೇಶ್ವರ ವಿಭೂತಿ, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಮಾಜಿ ಜಿಪಂ ಅಧ್ಯಕ್ಷ ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ, ಪೊಲೀಸ್​ ವರಿಷ್ಠಾಧಿಕಾರಿ ರೋಹನ್​ ಜಗದೀಶ್​ ಇತರರು ಇದ್ದರು.
ಕಾಮಿರ್ಕರಿಗೆ ತರಬೇತಿ:
ಉತ್ಖನನ ಆರಂಭಕ್ಕೂ ಮುನ್ನ ಉತ್ಖನನ ಕುರಿತ್ಖುನನ ಕಾಮಿರ್ಕರಿಗೆ ಅಧಿಕಾರಿಗಳು ಹೇಗೆ ಕಾರ್ಯ ಮಾಡಬೇಕು ಎಂದು ಪುರಾತತ್ವ ಅಧಿಕಾರಿಗಳು ಮಾಹಿತಿ ನೀಡಿದರು. 20 ಜನ ಕಾಮಿರ್ಕರಿಗೆ ಸ್ಥಳದಲ್ಲಿ ಮಣ್ಣು ಹೇಗೆ ತೆಗೆಯಬೇಕು ಎಂದು ಕಾರ್ಯಾಗಾರ ನಡೆಸಲಾಯಿತು. ಪ್ರಾಚಿನ ವಸ್ತುಗಳ ಬಗೆಗೆ ಉತ್ಖನನ ಮಾಡುವ ಬಗ್ಗೆ ಕಾಮಿರ್ಕರಿಗೆ ಇಂಚಿಂಚು ಮಾಹಿತಿ ನೀಡಿದರು. ಭೂಮಿ ಅಗೆಯುವಾಗ ಅನುಸರಿಸಬೇಕಾದ ಸೂಕ್ಷ$್ಮತೆ ಕುರಿತು ಅರಿವು ಮೂಡಿಸಲಾಯಿತು.
ಪ್ರತಿದಿನ ಉತ್ಖನನ ಹೇಗೆ?
ಪ್ರತಿದಿನ ಬೆಳಗ್ಗೆ 8 ರಿಂದ 11 ಗಂಟೆ ವರೆಗೆ ಉತ್ಖನನ ಕಾರ್ಯ ನಡೆಯಲಿದೆ. ಅಲ್ಪೋಪಹಾರ ನಂತರ 12 ರಿಂದ 1.30 ವರೆಗೂ ಮತ್ತು ಮಧ್ಯಾಹ್ನ 2 ರಿಂದ 3 ಗಂಟೆ ವರೆಗೂ ಉತ್ಖನನ ನಡೆಯಲಿದೆ. ಸ್ಥಳದಲ್ಲಿ ಎರಡೂ ಸಿ.ಸಿ. ಕೆಮಾರ ಅಳವಡಿಸಲಾಗಿದೆ. ಸ್ಥಳದಲ್ಲಿ ಪೊಲೀಸ್​ ಇಲಾಖೆ ಸಿಬ್ಬಂದಿ, ಗೃಹ ರಕ್ಷಕ ದಳ ಹಾಗೂ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ. ಪ್ರತಿ ದಿನ ಉತ್ಖನನ ಬಗ್ಗೆ ಸ್ಥಳಿಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ವರದಿ ನೀಡಲಿದ್ದಾರೆ.
ಹತ್ತಿರದಲ್ಲೇ ಠಂಕಸಾಲೆ ಇತ್ತು:
ಕೋಟೆ ವಿರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲೇ ಉತ್ಖನನ ಏಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಲಕ್ಕುಂಡಿನ ಗ್ರಾಮಸ್ಥರ ಪ್ರಕಾರ ಈ ಪ್ರದೇಶದಲ್ಲಿ ನಾಣ್ಯಗಳನ್ನು ತಯಾರಿಸುವ ಠಂಕಸಾಲೆ ಇತ್ತು. ವೀರಭದ್ರೇಶ್ವರ ದೇವಸ್ಥಾನದಿಂದ ಮುಂಭಾಗದ ಸಿದ್ದರ ಬಾವಿ, ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ನೆಲ ಮಾರ್ಗದಲ್ಲಿ ಸಂಪರ್ಕ ಕಲ್ಪಿಸಲಾಗಿತ್ತು. ಈ ಪ್ರದೇಶವನ್ನು ಅಚ್ಚಪ್ಪನ ಬಯಲು ಎಂದು ಕರಿಯುತ್ತಾರೆ. ಬಂಗಾರದ ನಾಣ್ಯಗಳಿಗೆ ಇಲ್ಲಿ ಅಚ್ಚು, ಮುದ್ರಣ ಮಾಡಲಾಗತಿತ್ತು. ಇದೇ ಕಾರಣಕ್ಕೆ ಕೋಟೆ ವಿರಭದ್ರೇಶ್ವರ ದೇವಸ್ಥಾನ ಮುಂಭಾಗ ಇಂದು ಉತ್ಖನನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈ ಹಿಂದೆ ನಡೆದಿತ್ತು ಉತ್ಖನನ:
ಈ ಹಿಂದೆಯೂ ಲಕ್ಕುಂಡಿಯಲ್ಲಿ 2003 ರಲ್ಲಿ ಉತ್ಖನನ ಕಾರ್ಯ ನಡೆದಿತ್ತು. ಇದೀಗ 22 ವರ್ಷಗಳ ನಂತ ಮತ್ತೆ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ. ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬಳಿಕ ಇದೀಗ ಉತ್ಖನನ ಸಾಕಷ್ಟು ಕುತುಹೂಲ ಕೆರಳಿದೆ. ಈಗಲೂ ಸಹ ಮನೆ ನಿಮಾಣ ಮತ್ತು ಉತರೆ ಕಟ್ಟಡ ನಿರ್ಮಾಣ ಸಂಸದರ್ಭದಲ್ಲಿ ಭೂಮಿ ಅಗೆಯುವಾಗ ತಾಮ್ರದ ಬಿಂದಿ, ನಾಣ್ಯಗಳು, ಬೆಳ್ಳಿ ಬಂಗಾರದ ವಸ್ತುಗಳು ಸಿಗುವುದು ಸಾಮಾನ್ಯ.ಇದೀಗ ಉತ್ಖನನ ಮಾಡಿದರೆ ಇನ್ನೂ ಹಲವು ಮೌಲ್ಯಯುತ ವಸ್ತುಗಳು ದೊರೆಯವಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಟ್​
ಕೋಟೆ ವೀರಭದ್ರೇಶ ದೇವಸ್ಥಾನ ಸುತ್ತಲೂ ಕೋಟೆ ಇದೆ. ಇಲ್ಲಿ ಬಂಗಾರ ಸಿಗಬಹುದು ಎಂದು ಅನಿಸುತ್ತದೆ. ರಾಜ್ಯಕ್ಕೆ ಲಕ್ಕುಂಡಿ ಉತ್ಖನನ ಕಾರ್ಯ ಮಾದರಿ ಆಗಲಿದ್ದು, ಲಕ್ಕುಂಡಿ ಗ್ರಾಮಸ್ಥರು ತುಂಬ ಸಹಕಾರ ನೀಡುತ್ತಿದ್ದಾರೆ.
ಸಿದ್ದು ಪಾಟೀಲ, ಲಕ್ಕುಂಡಿ ಪ್ರಾಧಿಕಾರದ ಸದಸ್ಯ
ಕೋಟ್​:
ಲಕ್ಕುಂಡಿಯಲ್ಲಿ ಸಂಪತ್ತು ಇದ್ದೇ ಇದೆ ಎಂದು ಪುರಾತತ್ವ ಅಧಿಕಾರಿಳು ಹೇಳುತ್ತಾರೆ. ಸಮರ್ಪಕವಾಗುಇ, ಸರಿಯಾದ ಸ್ಥಳದಲ್ಲಿ ಉತ್ಖನನ ನಡೆಸಿದರೆ ಭೂಮಿಯಲ್ಲಿರುವ ಐತಿಹಾಸಿಕ ಕುರುಹುಗಳು, ಸಂಪತ್ತು ದೊರೆಯುವುದು ಖಂಡಿತ. ರಾಜ್ಯಕ್ಕೆ ಲಕ್ಕುಂಡಿ ಹೆಸರುವಾಸಿ ಆಗಲಿದೆ.
ಶರಣು ಗೋಗೇರಿ, ಲಕ್ಕುಂಡಿ ಪ್ರಾಧಿಕಾರದ ಆಯುಕ್ತ.
ಕೋಟ್​:
ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರು ಸಕಾರಾತ್ಮ ಬೆಳವಣಿಗೆಯಿಂದ ರಾಜ್ಯದಲ್ಲಿ ಈ ಗ್ರಾಮ ಉತ್ತಮ ಪ್ರವಾಸಿ ತಾಣ ಆಗಲಿದೆ. 101 ದೇವಸ್ಥಾನ, 101 ಕಲ್ಯಾಣಿಗಳ ತವರೂರು ಅಷ್ಟೇ ಅಲ್ಲದೇ, ಇತಿಹಾಸದಲ್ಲಿ ಸಂಪತ್ತು ಭರಿತ ನಾಡಾಗಿತ್ತು ಎಂದು ಉಲ್ಲೇಖಗಳಿವೆ. ಇದು ಭವಿಷ್ಯದಲ್ಲಿ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ ಆಗಲಿದೆ.
ಕೋಟ್ರೇಶ ವಿಭೂತಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ