ಬೆನಕಟ್ಟಿ ಗ್ರಾಮದಲ್ಲಿ ಬತ್ತಿ ಹೋಗಿರುವ ಕೆರೆಯನ್ನು ಎಚ್.ಲವಕುಮಾರ, ಪಿಡಿಒ ಅಮಿತ ನಾಯ್ಕ, ಎಸ್.ಎನ್.ಕಡಹಳ್ಳಿ, ಶಂಕರ ಬಾರ್ಕಿ, ಮರೆಪ್ಪ ಕೌಜಲಗಿ, ಅಶೋಕ ಯರಝರ್ವಿ, ಸುಬ್ರಾಯ ನಾಯ್ಕರ ವಿಸಿದರು.
ಬೆನಕಟ್ಟಿ: ಗ್ರಾಮೀಣ ಭಾಗದಲ್ಲಿ ಬತ್ತಿ ಹೋಗಿರುವ ಕೆರೆಗಳನ್ನು ಪುನರುಜ್ಜೀವನಗೊಳಿಸಿ, ಸುಂದರ ತಾಣವನ್ನಾಗಿ ಪರಿವರ್ತಿಸುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಉದ್ದೇಶವಾಗಿದೆ ಎಂದು ಜಿಲ್ಲಾ ನಿರ್ದೇಶಕ ಎಚ್.ಲವಕುಮಾರ ತಿಳಿಸಿದರು.
ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿ, ಕೆರೆಯಲ್ಲಿನ ಹೂಳನ್ನು ತೆಗೆದು, ಸ್ವಚ್ಛಗೊಳಿಸಿ, ನೀರು ಸಂಗ್ರಹಿಸುವುದರಿಂದ ಗ್ರಾಮದ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಕೆರೆ ಬದಿಯ ಶುದ್ಧವಾದ ಪರಿಸರ ಮಕ್ಕಳಿಗೆ ಆಟವಾಡಲು ಹಾಗೂ ಸಾರ್ವಜನಿಕರಿಗೆ ವಿಶ್ರಾಂತಿ ಪಡೆಯಲು ಸುಂದರ ತಾಣವಾಗುತ್ತಿದೆ ಎಂದರು. ಮದ್ಲೂರ ಗ್ರಾಪಂ ಪಿಡಿಒ ಅಮಿತ ನಾಯ್ಕ ಮಾತನಾಡಿದರು. ಗ್ರಾಪಂ ಸದಸ್ಯ ಅಶೋಕ ಯರಝರ್ವಿ, ಪ್ರಕಾಶ ಕಲ್ಲೇದ, ಶಂಕರ ಬಾರ್ಕಿ, ಮಲ್ಲಿಕಾರ್ಜುನ ರೇವಣ್ಣವರ, ರಾಜು ಗಯ್ಯಾಳಿ, ಎ.ಐ.ಶಿರಸಂಗಿ, ಮಲ್ಲಿಕಾರ್ಜುನ ಲಕ್ಕಪ್ಪಣ್ಣವರ, ಕಾರ್ಯದರ್ಶಿ ಎಸ್.ಎನ್.ಕಡಹಳ್ಳಿ, ಪಂಚಪ್ಪ ಮಾತಾರಿ, ಮರೆಪ್ಪ ಕೌಜಲಗಿ, ಬೀರಪ್ಪ ದೇವರಮನಿ, ಮಹಾದೇವಿ ಲಕ್ಕಪ್ಪಣ್ಣವರ, ರುದ್ರವ್ವ ಹೊಸೂರ, ಮರೆವ್ವ ಕಂಬಳಿ, ಸುಬ್ರಾಯ ನಾಯ್ಕ ಇತರರಿದ್ದರು.