ಕಲಬುರಗಿಯಲ್ಲಿ ಏರ್ಪಡಿಸಿದ್ದ ಕಾವ್ಯ ಮಹಿಳಾ ಸಮ್ಮೇಳನದಲ್ಲಿ ಸಾಧಕಿಯರಿಗೆ ವಾತ್ಸಲ್ಯಕಾವ್ಯ ಪುರಸ್ಕಾರ ಪ್ರದಾನ ಮಾಡಲಾಯಿತು. ಡಾ.ಶಕುಂತಲಾ ಪಾಟೀಲ್​, ಡಾ.ಜಯಶ್ರೀ ಜಂಗಮಶೆಟ್ಟಿ, ನಂದಿನಿ, ಡಾ.ಅಮರೇಶ್ವರಿ ಚಿಂಚನಸೂರ, ರೇಣುಕಾ ಡಾಂಗೆ ಇತರರಿದ್ದರು. 
ರಾಜ್ಯ

ಅಕಾಡೆಮಿಗಳಲ್ಲಿಲ್ಲ ಸ್ತ್ರೀ ಪ್ರಾತಿನಿಧ್ಯ

ಪ್ರಮುಖ ಮುಖ್ಯಾಂಶಗಳು

  • ಸಮ್ಮೇಳನಾಧ್ಯೆ ಶಕುಂತಲಾ ಪಾಟೀಲ್​ ಕಳವಳ
  • ಕಾವ್ಯ ಮಹಿಳಾ ಸಮ್ಮೇಳನ
ಕಲಬುರಗಿ: ಸಮಾಜ ಪ್ರಗತಿಗೆ ಸಿವಾದಿ ಸಾಹಿತ್ಯ ಪೂರಕವಾಗಿದ್ದು, ಜಿಲ್ಲೆಯಲ್ಲಿ ಮಹಿಳಾ ಬರಹಗಾರರ ಕೊರತೆಯಿಲ್ಲ. ವೇದಿಕೆ ಕೊರತೆ ಕಾಡುತ್ತಿದೆ ಎಂದು ಕಾವ್ಯ ಮಹಿಳಾ ಸಮ್ಮೇಳನ ಸರ್ವಾಧ್ಯೆಕ್ಷ ಶಕುಂತಲಾ ಪಾಟೀಲ್​ ಜವಳಿ ಬೇಸರ ವ್ಯಕ್ತಪಡಿಸಿದರು.
ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್​, ಮಹಿಳಾ ನೌಕರರ ಸಂಘ, ಸರ್ಕಾರಿ ನೌಕರರ ಸಂಘದಿಂದ ಭಾನುವಾರ ಹಮ್ಮಿಕೊಂಡ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಹಾಳಾಗುತ್ತಿರುವ ಮಹಿಳಾ ವಚನಕಾರ್ತಿಯರ ಸ್ಮಾರಕ, ದೇಗುಲ ಸಂರಕ್ಷಿಸಬೇಕು. ವಿವಿಗಳಲ್ಲಿ ಮಹಿಳಾ ಸಾಹಿತ್ಯ ಅಧ್ಯಯನ ಪೀಠ ಆರಂಭಿಸಬೇಕು. ಜಾನಪದ ಸಾಹಿತ್ಯದ ಮಹಿಳಾ ಕಲಾವಿದರು, ಸಂಗೀತಗಾರರಿಗೆ ಪ್ರೋತ್ಸಾಹಿಸಬೇಕು. 371(ಜೆ) ಕಲಂ ಅಡಿ ಮಹಿಳೆಯರಿಗಾಗಿ ವಿಶೇಷ ನೇಮಕಾತಿ ಮಾಡಿಕೊಳ್ಳಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆ, ಬಡಾವಣೆಗೆ ಮಹಿಳಾ ಹಿರಿಯ ಸಾಹಿತಿಗಳ ಹೆಸರಿಡಬೇಕು ಎಂದು ಕೋರಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಡಾ.ಜಯದೇವಿ ಜಂಗಮಶೆಟ್ಟಿ ಮಾತನಾಡಿದರು. ಶ್ರೀಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯೆಕ್ಷ ಡಾ.ಅಮರೇಶ್ವರಿ ಚಿಂಚನಸೂರ ಶಕ್ತಿ ಸಿಂಚನ ಕೃತಿ ಬಿಡುಗಡೆಗೊಳಿಸಿದರು.
ಪ್ರಮುಖರಾದ ಜಗದೀಶ್ವರಿ ನಾಸಿ, ರೇಣುಕಾ ಡಾಂಗೆ, ನಂದಿನಿ ಸನಬಾಳ, ಶಿವಲೀಲಾ ಕಲಗುರ್ಕಿ, ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಕುಪೇಂದ್ರ ಬರಗಾಲಿ, ವಿಶಾಲಾ ಮಾಯಣ್ಣವರ್​, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಗಣೇಶ ಚಿನ್ನಾಕಾರ, ಎಸ್​.ಕೆ. ಬಿರಾದಾರ, ಸುರೇಶ ದೇಶಪಾಂಡೆ, ಭುವನೇಶ್ವರಿ ಹಳ್ಳಿಖೇಡ, ಲ್ಯಾಣರಾವ ಶೀಲವಂತ ಇತರರಿದ್ದರು.
"

ಮಹಿಳೆಯರ ಧ್ವನಿ ಗೌರವಿಸಿ, ಪ್ರೋತ್ಸಾಹಿಸಬೇಕಿದೆ. ಕನ್ನಡ ನಾಡು&ನುಡಿಯಲ್ಲಿ ಹಾಗೂ ಸಮಾಜದ ಪ್ರತಿ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಗೌರವಿಸಿ ಮುನ್ನಡೆಸಬೇಕು. ಸಾಮರ್ಥ್ಯ ಗುರುತಿಸಿ ಮುಖ್ಯವಾಹಿನಿಗೆ ತರಬೇಕು.

— > ಡಾ.ಜಯಶ್ರೀ ಜಂಗಮಶೆಟ್ಟಿ ಸಿಯುಕೆ ಪ್ರಾಧ್ಯಾಪಕಿ

ವಾತ್ಸಲ್ಯಕಾವ್ಯ ಪುರಸ್ಕಾರ

ಸಾಧಕಿಯರಾದ ಶೀಲಾ ತಿವಾರಿ, ಡಾ.ಗಂಗಾ ಪೂಜಾರ, ಡಾ.ನಿರ್ಮಲಾ ಕೆಳಮನಿ, ಪದ್ಮಿನಿ ಕಿರಣಗಿ, ಶಿಲ್ಪಾ ದಾಸ, ಡಾ.ಶರಣಮ್ಮ ಬಿ ಪಾಟೀಲ್​, ರಾಜೇಶ್ವರಿ ಸಾಹು, ಭವಾನಿ ಕಾಡ್ಲೂರ, ಮಾಲಾ ಕಮಲಾಪುರ ಅವರಿಗೆ ವಾತ್ಸಲ್ಯ ಕಾವ್ಯ ಪುರಸ್ಕಾರ ನೀಡಿ ಸತ್ಕರಿಸಲಾಯಿತು.

ಗಮನ ಸೆಳೆದ ಗೋಷ್ಠಿ

ಗೋಷ್ಠಿಯಲ್ಲಿ ಮಹಿಳೆ ಮತ್ತು ಮೂಢನಂಬಿಕೆ ಕುರಿತು ಡಾ.ಶಿವಲೀಲಾ ಚಟ್ನಳ್ಳಿ, ಸಮಾಜದ ಕಣ್ಣು ತೆರೆಸುವಲ್ಲಿ ಸಿವಾದಿ ಸಾಹಿತ್ಯದ ಪಾತ್ರ ಕುರಿತು ಡಾ.ಕಾವ್ಯಶ್ರೀ ಮಹಾಗಾಂವಕರ್​ ಮಾತನಾಡಿದರು. ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಡಾ.ಪ್ರಭಾವತಿ ಚಿತಕೋಟೆ, ಪೂಜಾ ಬಂಕಲಗಿ ಮಾತನಾಡಿದರು. ಲೇಖಕಿ ರೂಪಾದೇವಿ ಬಂಗಾರ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಡಾ.ಕರುಣಾ ಜಮದರಖಾನಿ ಅಧ್ಯಕ್ಷತೆಯಲ್ಲಿ ಶಕ್ತಿ ಕವಿಗೋಷ್ಠಿಯಲ್ಲಿ ನೀತಾ ಡಿ. ಕಾಬಾ ಸೇರಿ ಹಲವರು ಮಾತನಾಡಿದರು. ಹಿರಿಯ ಸಾಹಿತಿ ಪ್ರಮೀಳಾ ಜಾನಪ್ಪಗೌಡ ಸಮಾರೋಪ ನುಡಿಗಳನ್ನಾಡಿದರು.