ಗುಂಡ್ಲುಪೇಟೆ ಪಟ್ಟಣದಲ್ಲಿ ವರ್ತಕರು ತಮ್ಮ ಅಂಗಡಿಯ ಪದಾರ್ಥಗಳನ್ನು ಹೊರಗಿಟ್ಟಿರುವ ಬಗ್ಗೆ ಪುರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. 
ರಾಜ್ಯ

ವರ್ತಕರಿಗೆ ಗುಂಡ್ಲುಪೇಟೆ ಪುರಸಭೆ ಎಚ್ಚರಿಕೆ

ಗುಂಡ್ಲುಪೇಟೆ: ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿ ಅಂಗಡಿಯ ಸಾಮಗ್ರಿಗಳನ್ನು ಹೊರಗೆ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ವರ್ತಕರಿಗೆ ಪುರಸಭೆ ಚುರುಕು ಮುಟ್ಟಿಸಿದೆ.
ಹೆಚ್ಚಿನವರು ತಮ್ಮ ಸಾಮಗ್ರಿಗಳನ್ನು ಹೊರಗಿಟ್ಟುಕೊಳ್ಳುವುದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಶರವಣ ವರ್ತಕರಿಗೆ ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಕಾನೂನು ಪಾಲಿಸದ ಯಾವುದೇ ಅಂಗಡಿಯು ತಮ್ಮ ಸಾಮಗ್ರಿಗಳನ್ನು ವಶಕ್ಕೆ ಪಡೆವ ಜತೆಗೆ ಉದ್ಯಮ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕಿ ಸುಷ್ಮಾ , ಮೇಸ್ತ್ರಿಗಳಾದ ಮೂರ್ತಿ, ಸಿದ್ದರಾಜು ಇದ್ದರು.