ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಸಂಹಿತೆಗಳ ವಿರುದ್ಧ ರಾಮದುರ್ಗದಲ್ಲಿ ಸಿಐಟಿಯು ಪ್ರತಿಭಟನಾ ಮೆರವಣಿಗೆ ನಡೆಯಿತು. ಕೃಷ್ಣಾ ಹೊಸೂರ, ಮಹಾಂತೇಶ ಪಾಶ್ಚಾಪುರ, ವಿಜಯಲಕ್ಷಿ$್ಮ ಸಿದ್ದಿಬಾಂವಿ, ರೇಖಾ ಪಟ್ಯಾಳ ಇತರರಿದ್ದರು.
ರಾಮದುರ್ಗ: ಕಾರ್ಮಿಕ ಸಂಟನೆ ಸೇರಿ ಯಾರೊಂದಿಗೂ ಚರ್ಚಿಸದೇ ಕಾರ್ಮಿಕ ಸಂಹಿತೆ ಜಾರಿ ಮಾಡಿರುವ ಕೇಂದ್ರ ಸರ್ಕಾರ ಅಧಿಸೂಚನೆಗೆ ಹೊರಡಿಸಿರುವ ಕ್ರಮ ಖಂಡನಾರ್ಹ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಸಂಹಿತೆ ಆದೇಶ ಪ್ರತಿ ದಹನ ಮಾಡಿ, ಕಾರ್ಮಿಕ ಸಂಟನೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎಪಿಜೆ ಅಬ್ದುಲ್ ಕಲಾಂ ವೃತ್ತದಲ್ಲಿ ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನಾ ಸಭೆ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನೀತಿ ಖಂಡಿಸಿದರು.
ಕೇಂದ್ರ ಸರ್ಕಾರ 2019ರಲ್ಲಿಯೇ ಹೊಸ ಕಾರ್ಮಿಕ ಸಂಹಿತೆ ತರಲು ಮುಂದಾಗಿತ್ತು. ದೇಶದಲ್ಲಿ ಕಾರ್ಮಿಕರ ವಿರೋಧಗಳು, ಪ್ರತಿಭಟನೆಗಳು ತೀವ್ರವಾದ ಹಿನ್ನೆಲೆಯಲ್ಲಿ ಜಾರಿ ಮಾಡಿರಲಿಲ್ಲ. ಇತ್ತೀಚೆಗೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದ ಅಹಂನಲ್ಲಿ ಕಾರ್ಮಿಕ ಸಂಹಿತೆ ಕೇಂದ್ರ ಸರ್ಕಾರ ಜಾರಿ ಮಾಡಿದ್ದು ವಿಷಾದದ ಸಂಗತಿ ಎಂದರು.
ಕೇಂದ್ರ ಸರ್ಕಾರ ಕಾರ್ಮಿಕರ ಬವಣೆ ಕೇಳದೆ, ಮನವಿಗಳಿಗೂ ಸ್ಪಂದಿಸದೆ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕಾರ್ಮಿಕ ಸಂಟನೆಗಳ ಮುಖಂಡರಾದ ಗೈಬು ಜೈನೇಖಾನ್, ನಾಗಪ್ಪ ಸಂಗೊಳ್ಳಿ ಆರೋಪಿಸಿದರು. ಕೃಷ್ಣಾ ಹೊಸೂರ, ಮಹಾಂತೇಶ ಪಾಶ್ಚಾಪುರ, ವಿಜಯಲಕ್ಷಿ$್ಮ ಸಿದ್ದಿಬಾಂವಿ, ರೇಖಾ ಪಟ್ಯಾಳ, ಬೋರವ್ವ ತೆಕ್ಕಿ, ಮಾರುತಿ ಮುದಗುರಿ, ಬಾಳಪ್ಪ ಕಿಟದಾಳ, ತುಳಸಮ್ಮ ಮಾಳದಕರ, ರಾಚಮ್ಮ ರಾಮದುರ್ಗ, ಚನ್ನಮ್ಮ ಕಪಾಲಿ ಇತರರಿದ್ದರು.