Governor 
ರಾಜ್ಯ

40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ರಾಜ್ಯಪಾಲರಿಗೆ ಕೆಯುಡಬ್ಲ್ಯೂಜೆ ಆಹ್ವಾನ

ಪ್ರಮುಖ ಮುಖ್ಯಾಂಶಗಳು

  • ಡಿವಿಜಿ ಸಂಸ್ಥಾಪಿಸಿದ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಣಿಗೆ ನೀಡಿದ ಸಂಘ
  • ತೊಂಬತ್ತೈದು ವಸಂತ ತುಂಬುತ್ತಿರುವ ಸಂಘ
ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಈ ಬಾರಿ ಬೀದರನಲ್ಲಿ ಮಾರ್ಚ್‌ನಲ್ಲಿ ಆಯೋಜಿಸಲಾಗುತ್ತಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸುವಂತೆ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದ ಕೆಯುಡಬ್ಲ್ಯೂಜೆ ನಿಯೋಗವು ಲೋಕಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಿತು.
ರಾಜ್ಯ ಸಂಘದ ಇತಿಹಾಸವನ್ನು ಕೇಳಿಕೊಂಡ ಅವರು ಡಿವಿಜಿ ಸಂಸ್ಥಾಪಿಸಿದ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಣಿಗೆ ನೀಡಿದ ಸಂಘಕ್ಕೆ ತೊಂಬತ್ತೈದು ವಸಂತ ತುಂಬುತ್ತಿರುವ ಬಗ್ಗೆ ಮೆಚ್ಚುಗೆ ಮತ್ತು ಅಭಿಮಾನ ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತನಾಗಿದ್ದೇನೆ ಎಂದೂ ಹೇಳಿದರು.
ಇದೇ ಸಂಧರ್ಭದಲ್ಲಿ ರಾಜ್ಯಪಾಲರಿಗೆ ಕೆಯುಡಬ್ಲ್ಯೂಜೆ ನೆನಪಿನ ಸಂಚಿಕೆ, ಕೋವಿಡ್ ಕಥೆಗಳು ಮತ್ತು ಅಮೃತ ಬೀಜ ಪುಸ್ತಕ, ಕೆಯುಡಬ್ಲ್ಯೂಜೆ ಲೋಗೋ ಜೊತೆಗೆ ಅವರದೇ ಭಾವಚಿತ್ರವಿರುವ ಕಾಫಿ ಕಪ್ ಮತ್ತು ಕೆಯುಡಬ್ಲ್ಯೂಜೆ ಕ್ಯಾಲೆಂಡರ್ ನೀಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಖಜಾಂಚಿ ವಾಸುದೇವ ಹೊಳ್ಳ ಅವರುಗಳು ನಿಯೋಗದಲ್ಲಿದ್ದರು.

*ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಲು ನಾನು ಕೂಡ ಆಸಕ್ತನಾಗಿದ್ದೇನೆ. ಬೀದರ್‌ನಲ್ಲಿ ನಡೆಯುವ ಸಮ್ಮೇಳನಕ್ಕೆ ಬರಲು ಪ್ರತ್ನಿಸುವೆ.-ಥಾವರ್ ಚಂದ್ ಗೆಹ್ಲೋಟ್, ರಾಜ್ಯಪಾಲರು.