- ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ, 5ಸಾವಿರ ನಗದು, ಕೆಯುಡಬ್ಲ್ಯೂಜೆ ಗೌರವಾದರಗಳನ್ನು ಒಳಗೊಂಡಿದೆ.
- ಚಿಕ್ಕಮಗಳೂರಿನಲ್ಲಿ ಜುಲೈ 25ಕ್ಕೆ ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) 2025-26ನೇ ಸಾಲಿನ ಪ್ರತಿಷ್ಠಿತ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿದ್ದು, ವಿಜಯವಾಣಿಯ ಮೂವರಿಗೆ ಈ ಬಾರಿ ಪ್ರಶಸ್ತಿ ಲಭ್ಯವಾಗಿದೆ.
ವಿಜಯವಾಣಿ ಮುಖ್ಯ ವರದಿಗಾರ ಶ್ರೀಕಾಂತ್ ಭಟ್, ಸಿನಿಮಾ ವಿಭಾಗದ ಹಿರಿಯ ವರದಿಗಾರ ಹರ್ಷವರ್ಧನ್ ಬ್ಯಾಡನೂರು, ತರೀಕೆರೆ ವಿಜಯವಾಣಿ ವರದಿಗಾರ ಉಮೇಶ್ ನಾಯಕ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ, 5ಸಾವಿರ ನಗದು, ಕೆಯುಡಬ್ಲ್ಯೂಜೆ ಗೌರವಾದರಗಳನ್ನು ಒಳಗೊಂಡಿದೆ. ಚಿಕ್ಕಮಗಳೂರಿನಲ್ಲಿ ಜುಲೈ 25ಕ್ಕೆ ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ತಿಳಿಸಿದ್ದಾರೆ.
ಡಿ.ವಿ.ಜಿ.ಪ್ರಶಸ್ತಿ : ಬಿ.ವಿ.ಗೋಪಿನಾಥ್, ಸಂಯುಕ್ತ ಕರ್ನಾಟಕ, ಕೋಲಾರ
ಗೊಮ್ಮಟ ಮಾಧ್ಯಮ ಪ್ರಶಸ್ತಿ: ಗಿರೀಶ್ ರಾವ್ ಹತ್ವಾರ್ (ಜೋಗಿ), ಸಂಪಾದಕರು, ಕನ್ನಡಪ್ರಭ
ಎಚ್. ಎಸ್. ದೊರೆಸ್ವಾಮಿ ಪ್ರಶಸ್ತಿ: ರವಿಪ್ರಕಾಶ್, ಪ್ರಜಾವಾಣಿ
ಎಸ್.ವಿ. ಜಯಶೀಲರಾವ್ ಪ್ರಶಸ್ತಿ: ಮೀನಾ ಮೈಸೂರು
ಸಿ.ಆರ್.ಕೃಷ್ಣರಾವ್ ಪ್ರಶಸ್ತಿ: ಅನಂತ ಚಿನಿವಾರ್, ಹಿರಿಯ ಪತ್ರಕರ್ತರು
ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ: ಜಾನ್ ಮಥಾಯಿಸ್, ಹಿರಿಯ ಪತ್ರಕರ್ತರು
ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ: ಮಾವಳ್ಳಿ ಶಂಕರ್, ಅಂಬೇಡ್ಕರ್ ವಾದ ಪತ್ರಿಕೆ
ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ: ಅಡಿವೇಂದ್ರ ಇನಾಂದಾರ, ಹಿರಿಯ ಪತ್ರಕರ್ತರು, ಬಾದಾಮಿ
ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ: ಮಂಜುಳ ಕಿರುಗಾವಲು, ಜನೋದಯ, ಮಂಡ್ಯ
ಬದರಿನಾಥ ಹೊಂಬಾಳೆ ಪ್ರಶಸ್ತಿ : ಡಿ.ಜಿ.ಮೋಮಿನ್, ಗಂಜೇಂದ್ರಗಡ, ಗದಗ
ಕಿಡಿಶೇಷಪ್ಪ ಪ್ರಶಸ್ತಿ: ದಿನೇಶ್ ಗೌಡಗೆರೆ, ಸಂಪಾದಕರು, ಇಬ್ಬನಿ ಸೂರ್ಯ, ಚಿತ್ರದುರ್ಗ
ರವಿ ಬೆಳಗೆರೆ ಪ್ರಶಸ್ತಿ: ಎಚ್.ಸಿ.ದಿನೇಶ್ ಕುಮಾರ್, ಹಿರಿಯ ಪತ್ರಕರ್ತರು
ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ: ಭವಾನಿ ಲಕ್ಷ್ಮಿನಾರಾಯಣ, ಹಿರಿಯ ಪತ್ರಕರ್ತರು, ಚಿಕ್ಕಬಳ್ಳಾಪುರ
ಹೆಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ: ಬಿ.ಎಸ್.ಜಯರಾಂ, ಪಾಂಡವಪುರ
ರಾಜಶೇಖರ ಕೋಟಿ ಪ್ರಶಸ್ತಿ: ಟಿ.ವಿ.ರಾಜೇಶ್ವರ, ಆಂದೋಲನ, ಮೈಸೂರು
ಪಿ.ರಾಮಯ್ಯ ಪ್ರಶಸ್ತಿ: ಎಚ್.ಬಿ.ದಿನೇಶ್, ಹಿರಿಸಾವೆ.
ಮಾ. ರಾಮಮೂರ್ತಿ ಪ್ರಶಸ್ತಿ: ಪ್ರದೀಪ್ ಅಣ್ಣಾಜಿ ಕುಲಕರ್ಣಿ ಹಿರಿಯ ಪತ್ರಕರ್ತರು, ವಿಜಯಪುರ
ಮಹದೇವ ಪ್ರಕಾಶ್ ಪ್ರಶಸ್ತಿ: ಸುರೇಶ್ ಕೆ, ವಿಜಯ ಕರ್ನಾಟಕ, ಬೆಳಗಾವಿ.
ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ: ಶ್ರೀಕಾಂತ್ ಭಟ್, ವಿಜಯವಾಣಿ, ಬೆಂಗಳೂರು
ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ: ಜಿ.ವಾದಿರಾಜ್ ಕಮರೂರು, ಸ್ಥಾನಿಕ ಸಂಪಾದಕರು, ಹೊಸದಿಗಂತ, ಶಿವಮೊಗ್ಗ
ಎಂ.ನಾಗೇಂದ್ರ ರಾವ್ ಪ್ರಶಸ್ತಿ: ಕಣ್ಣಪ್ಪ ಉಷಾಮಹಿ, ಹಿರಿಯ ಪತ್ರಕರ್ತರು, ಶಿವಮೊಗ್ಗ
ಶ್ರೀಮತಿ ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ: ಬಿ.ಕೆ.ರಮ್ಯಶ್ರೀ, ಚಂದನ/ಆಕಾಶವಾಣಿ
ಅಪ್ಪಾಜಿಗೌಡ (ಸಿನಿ)ಪ್ರಶಸ್ತಿ: ಹರ್ಷವರ್ಧನ್ ಬ್ಯಾಡನೂರು, ವಿಜಯವಾಣಿ
ಮೂಡಣ, ಹಾವೇರಿ ಪ್ರಶಸ್ತಿ: ಎಸ್.ಆರ್.ನಂದಿಹಳ್ಳಿ, ಡಿಡಿ1, ಹಾವೇರಿ
ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು:
ರುದ್ರಯ್ಯ ಕೆ.ಎಚ್. ವಿಜಯ ಕರ್ನಾಟಕ, ಚಿಕ್ಕಮಗಳೂರು
ಕಿರಣ್ ಕೆ. ಸುವರ್ಣ ನ್ಯೂಸ್, ಚಿಕ್ಕಮಗಳೂರು
ಬಿ.ಉಮೇಶ್ ನಾಯಕ್, ವಿಜಯವಾಣಿ, ಚಿಕ್ಕಮಗಳೂರು
ಅಕ್ರಮ್ ಅಬ್ದುಲ್ ಹಕ್, ಹಿರಿಯ ಪೋಟೋ ಜರ್ನಲಿಸ್ಟ್.
ಇಬ್ರಾಹಿಂ ಅಡ್ಕಸ್ಥಳ, ಮಂಗಳೂರು
ಶಿವಕುಮಾರ್ ಪತ್ತಾರ ಟಿವಿ 9 ಕೊಪ್ಪಳ
ಬಿಳಿಗಿರಿ ಶ್ರೀನಿವಾಸ್-ಚಾಮರಾಜನಗರ
ಎಚ್.ಪಿ.ರವಿಕುಮಾರ್, ಜನತಾ ಮಾಧ್ಯಮ, ಹಾಸನ.
*ಪ್ರಶಸ್ತಿಯು ಫಲಕ, ಪ್ರಶಸ್ತಿ ಪತ್ರ, 5ಸಾವಿರ ನಗದು, ಕೆಯುಡಬ್ಲ್ಯೂಜೆ ಗೌರವಾದರಗಳನ್ನು ಒಳಗೊಂಡಿದೆ. ಚಿಕ್ಕಮಗಳೂರಿನಲ್ಲಿ ಜುಲೈ 25ಕ್ಕೆ ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
-ಕೆಯುಡಬ್ಲ್ಯೂಜೆ, ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು