ಕಸ್ಕೊಟಾ ಕಳೆಯಿಂದ ಹಾಳಾಗುತ್ತಿರುವ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದ ತೊಗರಿ ಹೊಲಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ್ ಮಂಗಳವಾರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ಗೋಪಾಲ ಎಂ.ಪಿ. ಗಾರಂಪಳ್ಳಿ,
- ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ್ ಒತ್ತಾಯ
- ಗಾರಂಪಳ್ಳಿಯಲ್ಲಿ ತೊಗರಿ ಬೆಳೆ ಪರಿಶೀಲನೆ
ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಂ, ಚಿತ್ತಾಪುರ ಮತೇತ್ರಗಳಲ್ಲಿ ಅರಬ್ ತಳಿಯಾದ ಕಸ್ಕೊಟಾ ಎಂಬ ಕಳೆ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿದ್ದು, ನಿಯಂತ್ರಣಕ್ಕೆ ಔಷಧ ಇಲ್ಲ. ದಿನೇದಿನೆ ದ್ವಿದಳ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಕಾಣಿಸಿಕೊಂಡು ಹಾನಿ ಮಾಡುತ್ತಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ್ ಆತಂಕ ವ್ಯಕ್ತಪಡಿಸಿದರು.
ಕಸ್ಕೊಟಾದಿಂದ ಹಾಳಾಗುತ್ತಿರುವ ಗಾರಂಪಳ್ಳಿ ಗ್ರಾಮದ ತೊಗರಿ ಹೊಲಕ್ಕೆ ಮಂಗಳವಾರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದ ಅವರು, ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರ ಪರಿಗಣಿಸಿ ನಷ್ಟದ ಸಮಿೆ ನಡೆಸಿ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ೂಷಿಸುವುದರ ಜತೆ ಹರಡುವಿಕೆಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯಬೇಕು. ವಿಳಂಬ ಧೋರಣೆ ಅನುಸರಿಸಿದರೆ ಚಿಂಚೋಳಿ ಬಂದ್ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ಶಿವಕುಮಾರ ಅಂಬಲಗಿ, ರೇವಣಸಿದ್ದಪ್ಪ ಪೂಜಾರಿ, ಸಂಗನಬಸಯ್ಯ ಮಠ, ಸಂತೋಷ ರೆಡ್ಡಿ, ಗೋಪಾಲ ರೆಡ್ಡಿ, ಅಮೃತ ಮಡಿವಾಳ, ಸಂತೋಷ ಝರಪುರ, ವೀರಶೆಟ್ಟಿ ಮಗಿ, ಇನಾಯಾತ್ ಅಲಿ, ಮಹಾದೇವಪ್ಪ, ವೀರಶೆಟ್ಟಿ ಝರಪುರ, ಸತೀಶ ಇಟಗಿ ಇತರರಿದ್ದರು.
ಕ್ಷೆತ್ರದ ರೈತರ ಹಿತ ಕಾಪಾಡಲು ಸದನದಲ್ಲಿ ಶಾಸಕ ಡಾ.ಅವಿನಾಶ ಜಾಧವ್ ಕಸ್ಕೊಟಾ ಕಳೆ ಕುರಿತು ಧ್ವನಿ ಎತ್ತಿರುವುದಕ್ಕೆ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆ ಸ್ಪಂದಿಸಿದ್ದು ಸ್ವಾಗತಾರ್ಹ. ಆದರೆ ಕಸ್ಕೊಟಾ ಕುರಿತು ಸರ್ಕಾರ ಜಾಗೃತಿಗೆ ಸೀಮಿತವಾಗದೆ ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿ ಸಬೇಕು.