ಹುಲಕುಂದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ಕುನ್ನಾಳದ ಪಿಎಂಶ್ರೀ ಕರ್ನಾಟಕ ಪಬ್ಲಿಕ್​ ಶಾಲೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು. 
ರಾಜ್ಯ

ಕುನ್ನಾಳ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ತಾಲೂಕಿನ ಹುಲಕುಂದ ಗ್ರಾಮದ ರಾಮೇಶ್ವರ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಹುಲಕುಂದ ವಲಯ ಮಟ್ಟದ 14 ವರ್ಷದೊಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಕುನ್ನಾಳದ ಪಿಎಂಶ್ರೀ ಕರ್ನಾಟಕ

ಪಬ್ಲಿಕ್​ ಶಾಲೆ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
ಬಾಲಕರ ವಿಭಾಗ: ಬಾಲಕರ ವೈಯಕ್ತಿಕ 200 ಮೀ. ಓಟದಲ್ಲಿ ಸಮರ್ಥ ಮಾಳಿ, 400 ಮೀ. ಓಟದಲ್ಲಿ ಹರೀಶ ನಾಡಗೌಡ್ರ, ಶಾಟ್​ಪುಟ್​ ಎಸೆತದಲ್ಲಿ ವಿನಾಯಕ ಗಾಣಿಗೇರ ಪ್ರಥಮ, 100 ಮೀ. ಓಟದಲ್ಲಿ ರಮೇಶ ಮಾಕನ್ನವರ ಹಾಗೂ ಎತ್ತರ ಜಿಗಿತದಲ್ಲಿ ಶಿವಪ್ರಸಾದ ಮಡಿವಾಳರ ದ್ವೀತಿಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ಗುಂಪು ವಿಭಾಗದಲ್ಲಿ ವಾಲಿಬಾಲ್​, ಥ್ರೋಬಾಲ್​ ಹಾಗೂ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಬಾಲಕರ ವಿಭಾಗದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
ಬಾಲಕಿಯರ ವಿಭಾಗ: ವೈಯಕ್ತಿಕ ವಿಭಾಗದ 100, 200ಮೀ. ಓಟದಲ್ಲಿ ಅ್ಸಾನಾ ತಹಶೀಲ್ದಾರ್​, 400 ಮೀ. ಓಟದಲ್ಲಿ ಗಂಗಮ್ಮ ಕೊಡ್ಲಿವಾಡ, 600 ಮೀ. ಓಟದಲ್ಲಿ ಸಾವಿತ್ರಿ ಹಾಲಪ್ಪಗೋಳ ಹಾಗೂ ಎತ್ತರ ಜಿಗಿತದಲ್ಲಿ ಸಂಗೀತಾ ಬಬ್ಬಾನಿ ಪ್ರಥಮ, 200 ಮೀ. ಓಟದಲ್ಲಿ ಸಾವಿತ್ರಿ ಹಾಲಪ್ಪಗೋಳ, ಉದ್ದ ಜಿಗಿತದಲ್ಲಿ ಸಂಗೀತಾ ಬಬ್ಬಾನಿ, ಎತ್ತರ ಜಿಗಿತದಲ್ಲಿ ಸೌಜನ್ಯಾ ಕೊಡ್ಲಿವಾಡ ದ್ವೀತಿಯ, ಬಾಲಕಿಯರ ಗುಂಪು ವಿಭಾಗದ 4ಗಿ100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕಿಯರ ವಿಭಾಗದ ವೀರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ ಬಿ.ಬಿ.ಪಟಗುಂದಿ ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಶಿಕ ಎಸ್​.ಬಿ.ಜಂಬಗಿ, ಎಸ್​ಡಿಎಂಸಿ ಅಧ್ಯ ಸತೀಶ ಮಳಲಿ, ಸದಸ್ಯರು ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.