ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ವಿಜಯನಗರದಆಟದ ಮೈದಾನದಲ್ಲಿ ‘ಟೀಮ್ಕುಂದಾಪುರಿಯನ್ಸ್’ ವತಿಯಿಂದಹಮ್ಮಿಕೊಳ್ಳಲಾಗಿದ್ದ ಕುಂದಾಪ್ರಕನ್ನಡ ಉತ್ಸವ 2026ಸಂಭ್ರಮದಿಂದನೆರವೇರಿತು.ಬೆಳಗ್ಗೆ 11ರಿಂದರಾತ್ರಿ 9 ಗಂಟೆಯವರೆಗೆನಿರಂತರವಾಗಿ ಕುಂದಾಪ್ರ ಕನ್ನಡದಸೊಗಡು, ಕರಾವಳಿಯಆಚಾರ-ವಿಚಾರಮತ್ತು ಸಂಸ್ಕೃತಿಯ ವಿವಿಧಚಟುವಟಿಕೆಗಳು ಅನಾವರಣಗೊಂಡವು.
ಕಾರ್ಯಕ್ರಮದಆರಂಭದಲ್ಲಿ ಜಾನಪದ ಕಲಾತಂಡಗಳೊಂದಿಗೆಕುಂದಾಪ್ರದ ಪಾರಂಪರಿಕ ವಸ್ತುಗಳಮೆರವಣಿಗೆ ಎಲ್ಲರ ಗಮನ ಸೆಳೆಯಿತು.ರಂಗೇರಿದ ನೃತ್ಯವೈಭವ, ಯುವಸಂಗಮ, ಡಿಜೆಕುಂದಾಪುರ ಮತ್ತು ಕರಾವಳಿಯಗಂಡುಕಲೆ ಯಕ್ಷಗಾನ ಪ್ರದರ್ಶನನೋಡುಗರನ್ನು ಮಂತ್ರಮುಗ್ಧಗೊಳಿಸಿತು.ಹಳೆಯ ವಸ್ತುಗಳಪ್ರದರ್ಶನದ,ವಿವಿಧ ವಿವಿಧಬಗೆಯ ಮೀನುಗಳ ಪ್ರದರ್ಶನ,ಕುಂದಾಪುರದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
‘ಕುಂದಾಪುರಸಂವಾದ’ ಕಾರ್ಯಕ್ರಮದಲ್ಲಿ ಲಕ್ಷ್ಮಿಜಿ ಪ್ರಸಾದ್,ವಸಂತ್ ಶೆಟ್ಟಿಮತ್ತಿತರರು ವಿವಿಧ ವಿಷಯಗಳ ಕುರಿತುಮಾತನಾಡಿದರು.ಕವಿ ನಾಗೇಂದ್ರಪ್ರಸಾದ್,ಸ್ವರ್ಣಕಮಲಪುರಸ್ಕ್ರತ ಪ್ರದೀಪ ಕೆಂಚನೂರು,ಗಣೇಶ್ ಕುಂಬಾಶಿ,ದೀಪಕ್ ಶೆಟ್ಟಿಬಾರ್ಕೂರು,ನಟಿಯರಾದ ಅಮೃತಾರಾಮಮೂರ್ತಿ,ರಜನಿ ಪ್ರವೀಣ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದರು.
ಬೆಂಗಳೂರಿನವಿವಿಧ ಭಾಗಗಳಿಂದ ಬಂದಿದ್ದಸಾರ್ವಜನಿಕರು ಕರಾವಳಿಯ ಸಂಸ್ಕೃತಿಯವೀಕ್ಷಿಸಿದರು. ಕುಂದಾಪ್ರಕನ್ನಡದ ವಿಶಿಷ್ಟ ಶೈಲಿಯ ಸಂಭಾಷಣೆ,ನಗು,ಹರಟೆ ಮತ್ತುಪ್ರೀತಿಯ ಸಮ್ಮಿಲನಕ್ಕೆ ಕಾರ್ಯಕ್ರಮಸಾಕ್ಷಿಯಾಯಿತು.ಕಾರ್ಯಕ್ರಮದಲ್ಲಿಕುಂದಾಪ್ರ ರತ್ನ,ಸಂವಾದಹಾಗೂ ಯುವರತ್ನ ಪ್ರಶಸ್ತಿ ಪ್ರದಾನಮಾಡಲಾಯಿತು.