ಅಗ್ಗದ ಮದ್ಯದ ಬಾಟಲಿ 
ರಾಜ್ಯ

ಕುಂಭಕರ್ಣ ನಿದ್ದೆಯಿಂದ ಎದ್ದೇಳದ ಅಬಕಾರಿ ಇಲಾಖೆ

ಪ್ರಮುಖ ಮುಖ್ಯಾಂಶಗಳು

  • ನಶೆಮುಕ್ತ ಬದಲು ನಶೆಯುಕ್ತ ಗಿರಿ ಜಿಲ್ಲೆ
  • ನಿತ್ಯ ೭೦ರಿಂದ ೮೦ ಲಕ್ಷ ರೂ.ವ್ಯವಹಾರ
ಯಾದಗಿರಿ: ಗಿರಿ ಜಿಲ್ಲೆಯ ಶೇ.೯೦ ಹಳ್ಳಿ ಮತ್ತು ತಾಂಡಾಗಳಲ್ಲಿ ರಾಜಾರೋಷವಾಗಿ ಅಗ್ಗದ ಅಕ್ರಮ ಮದ್ಯ ಮಾರಾಟದ ಮೂಲಕ ದಿನನಿತ್ಯ ಕೋಟ್ಯಂತರ ರೂ.ವ್ಯವಹಾರ ನಡೆಯುತ್ತಿದ್ದು, ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ ಮಾತ್ರ ಕುಂಭಕುರ್ಣ ನಿದ್ದೆಯಿಂದ ಎದ್ದೇಳುವ ಲಕ್ಷಣ ಗೋಚರಿಸುತ್ತಿಲ್ಲ.
ಹೇಳುವವರು ಕೇಳುವವರು ಇಲ್ಲದೆ ಬಿಂದಾಸ್ ನಡೆದಿರುವ ಈ ದಂಧೆ ಯುವಕರನ್ನು ಮದ್ಯದ ದಾಸರನ್ನಾಗಿ ಮಾಡುತ್ತಿರುವುದು ಕುಟುಂಬದವರನ್ನು ಚಿಂತೆಯ ಕೂಪಕ್ಕೆ ತಳ್ಳಿದೆ. ಶಾಲಾ-ಕಾಲೇಜು ಅಥವಾ ದುಡಿಯಲು ತೆರಳಬೇಕಿದ್ದ ಯುವಕರ ಜತೆ ಮಧ್ಯವಯಸ್ಕರು ಬೆಳಗಾಗುತ್ತಲೇ ಮದ್ಯ ಸೇವಿಸಲು ಆರಂಭಿಸುವುದರಿAದ ಹಳ್ಳಿ ಮತ್ತು ತಾಂಡಾಗಳಲ್ಲಿ ವಾತಾವರಣ ಸಂಪೂರ್ಣ ಹದಗೆಟ್ಟಿದೆ.
ವಡಗೇರಾ, ಗುರುಮಠಕಲ್, ಹುಣಸಗಿ ತಾಲೂಕಿನ ಗ್ರಾಮ ಮತ್ತು ತಾಂಡಾಗಳಲ್ಲಿ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟವಿದೆ. ಹಾಗಂತ ಶಹಾಪುರ, ಯಾದಗಿರಿ ಮತ್ತು ಸುರಪುರ ತಾಲೂಕುಗಳೇನೂ ಹಿಂದೆ ಬಿದ್ದಿಲ್ಲ. ವಿಶೇಷವಾಗಿ ತೆಲಂಗಾಣ ಗಡಿಗೆ ಹೊಂದಿಕೊAಡಿರುವ ಬಹುತೇಕ ಹಳ್ಳಿ ಮತ್ತು ತಾಂಡಾಗಳಲ್ಲಿ ಮದ್ಯದ ದಂಧೆ ಅತಿ ಜೋರಾಗಿದೆ.
ಬೆಳಗಾಗುತ್ತಲೇ ಹಾಲಿನ ವಾಹನಗಳು ಹಳ್ಳಿಗೆ ಬರುವಂತೆ ಮದ್ಯದ ಗಾಡಿಗಳು ಸಹ ಬಂದು ಮಾರಾಟಗಾರರ ಮನೆ, ಅಂಗಡಿ, ಹೋಟೆಲ್‌ಗಳಲ್ಲಿ ಡಂಪ್ ಮಾಡಿ ಹೋಗುತ್ತವೆ. ಇದರಿಂದ ಅಬಕಾರಿ ಇಲಾಖೆ ಆದಾಯ ಹೆಚ್ಚಾಗಬಹುದು. ಆದರೆ ಜನರ ಆರೋಗ್ಯ ಹಾಗೂ ಹಳ್ಳಿ ಮತ್ತು ತಾಂಡಾಗಳ ಸ್ಥಿತಿ ಏನಾಗಬೇಡ?
ಜಿಲ್ಲೆಯ ೬೦೦ಕ್ಕೂ ಅಽಕ ಗ್ರಾಮ ಮತ್ತು ೩೫೦ಕ್ಕೂ ಹೆಚ್ಚು ತಾಂಡಾಗಳ ಪೈಕಿ ಶೇ.೯೦ ಕಡೆ ಅಗ್ಗದ ಮದ್ಯ ದಂಧೆ ಹಗಲು-ರಾತ್ರಿ ಎನ್ನದೆ ದಿನದ ೨೪ ತಾಸು ನಡೆದಿದೆ. ಇದು ಅಬಕಾರಿ ಅಽಕಾರಿಗಳ ಗಮನಕ್ಕಿಲ್ಲ ಅಂತೇನಿಲ್ಲ. ನೂರಕ್ಕೆ ನೂರರಷ್ಟು ಮಾಹಿತಿ ಇದ್ದರೂ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ ಏಕೆ ಎಂಬ ಪ್ರಶ್ನೆ ಸುಶಿಕ್ಷಿತರನ್ನು ಕಾಡುತ್ತಿದೆ.
ಹಳ್ಳಿ, ತಾಂಡಾಗಳಲ್ಲಿನ ಬಹುತೇಕ ಅಂಗಡಿ, ಪಾನ್ ಶಾಪ್, ಹೋಟೆಲ್ ಮಾತ್ರವಲ್ಲದೆ ಕೆಲ ಮನೆಗಳು ಸಹ ಮದ್ಯ ಮಾರಾಟದ ಅಡ್ಡೆಗಳಾಗಿವೆ. ಹಾಲು, ಬಿಸ್ಕಿಟ್ ಸೇರಿ ದಿನಸಿ ಸಾಮಗ್ರಿ ಇರಬೇಕಾದ ಅಂಗಡಿಗಳಲ್ಲಿ ಮದ್ಯ ಮಾರುತ್ತಿದ್ದರೆ, ಚಹಾ, ಕಾಫಿ ಕುಡಿಯಬೇಕಾದ ಹೋಟೆಲ್‌ಗಳಲ್ಲಿ ಜನರು ನಿರಾಂತಕವಾಗಿ ಮದ್ಯ ಸೇವಿಸುತ್ತಿದ್ದಾರೆ. ಇನ್ನು ಪಾನ್ ಶಾಪ್‌ಗಳಲ್ಲಿ ಸಿಗರೇಟ್, ಬೀಡಿ, ಗುಟ್ಖಾಕ್ಕಿಂತ ಹೆಚ್ಚು ಬಿಯರ್, ಅಗ್ಗದ ಮದ್ಯ ಮಾರಾಟವಾಗುತ್ತಿದೆ. ಹಳ್ಳಿ-ತಾಂಡಾಗಳು ಯಾವ ಪರಿ ಕೆಡುತ್ತಿವೆ ಎಂಬುದನ್ನು ಜಿಲ್ಲಾಡಳಿತ ಒಮ್ಮೆ ಟೂರ್ ಮಾಡಿದರೆ ಗೊತ್ತಾಗುತ್ತದೆ.

ದಾಳಿ ಮಾಡಲು ಅಬಕಾರಿ ಇಲಾಖೆಗೆ ಅನುಮತಿ ಇಲ್ಲವೇ?

ಕಳೆದೆರಡು ವರ್ಷಗಳಲ್ಲಿ ೨೦೦ಕ್ಕೂ ಹೆಚ್ಚು ಸಲ ದಾಳಿ ಮಾಡಿರುವ ಜಿಲ್ಲಾ ಪೊಲೀಸ್ ಇಲಾಖೆ, ಅಕ್ರಮ ಮದ್ಯ ದಂಧೆ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೂ ಮಾತೃ ಇಲಾಖೆಯಾದ ಅಬಕಾರಿಯಿಂದ ಈ ವಹಿವಾಟು ತಡೆಯಲು ಆಗುತ್ತಿಲ್ಲ. ಬದಲಿಗೆ ರೈಲು ನಿಲ್ದಾಣದಲ್ಲಿ ಪಾಳಿ ಪ್ರಕಾರ ಡ್ಯÆಟಿ ಮಾಡುವ ಅಬಕಾರಿ ಸಿಬ್ಬಂದಿ ಹೊರರಾಜ್ಯದಿಂದ ಅಕ್ರಮ ಸೇಂದಿ, ಇದಕ್ಕೆ ಬಳಸುವ ಕಚ್ಚಾವಸ್ತುಗಳನ್ನು ಹಿಡಿಯುವ ಕೆಲಸ ಮಾಡುತ್ತಿರುವುದನ್ನು ಕಾಣಸಿಗುತ್ತದೆ. ಅಂದರೆ ಹಳ್ಳಿ-ತಾಂಡಾಗಳಿಗೆ ಹೋಗಿ ಅಕ್ರಮ ಮದ್ಯ ತಡೆಯಲು ಈ ಇಲಾಖೆಗೆ ಸರ್ಕಾರದ ಸೂಚನೆ ಇಲ್ಲವೇ? ಅಥವಾ ಎಷ್ಟಾಗುತ್ತೋ ಅಷ್ಟು ಹೆಚ್ಚು ಮದ್ಯ ಮಾರಾಟ ಮಾಡಿ ಆದಾಯ ದ್ವಿಗುಣಗೊಳಿಸಲು ಮಾತ್ರ ಅನುಮತಿ ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ.

"
"

ಹಳ್ಳಿ ಮತ್ತು ತಾಂಡಾಗಳಲ್ಲಿ ಅಕ್ರಮ ಮದ್ಯ ಮಾರಾಟ ಆಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕೂಡಲೇ ಐದಾರು ವಿಶೇಷ ತಂಡಗಳನ್ನು ರಚಿಸಿ ದಾಳಿ ಮಾಡಿಸಿ ದಂಧೆಗೆ ಕಡಿವಾಣ ಹಾಕಲು ಶತಪ್ರಯತ್ನ ಮಾಡಲಾಗುವುದು. | ರಾಹುಲ್ ಪಾಂಡ್ವೆ ಜಿಲ್ಲಾಅಕಾರಿ


ಹಳ್ಳಿ ಮತ್ತು ತಾಂಡಾಗಳಲ್ಲಿ ಅಕ್ರಮ ಮದ್ಯ ಮಾರಾಟ ಆಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕೂಡಲೇ ಐದಾರು ವಿಶೇಷ ತಂಡಗಳನ್ನು ರಚಿಸಿ ದಾಳಿ ಮಾಡಿಸಿ ದಂಧೆಗೆ ಕಡಿವಾಣ ಹಾಕಲು ಶತಪ್ರಯತ್ನ ಮಾಡಲಾಗುವುದು.| ರಾಹುಲ್ ಪಾಂಡ್ವೆ ಜಿಲ್ಲಾಽಕಾರಿ


"

ಜಿಲ್ಲಾ ಪೊಲೀಸ್ ಇಲಾಖೆ ಅಕ್ರಮ ಮದ್ಯ ವಹಿವಾಟು ತಡೆಯಲು ಜಿಲ್ಲಾದ್ಯಂತ ನಿರಂತರ ದಾಳಿ ಮಾಡುತ್ತಿದೆ. ಕಳೆದ ೧೩-೧೪ ತಿಂಗಳಲ್ಲಿ ನೂರಕ್ಕೂ ಹೆಚ್ಚು ಕಡೆ ದಾಳಿ ಮಾಡಿ ದೂರು ದಾಖಲಿಸಿಕೊಳ್ಳಲಾಗಿದೆ. ಕಾರ್ಯಾಚರಣೆಗೆ ಇನ್ನಷ್ಟು ವೇಗ ನೀಡಲಾಗುವುದು.| ಪೃಥ್ವಿಕ್ ಶಂಕರ್ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ