ಕಾವೇರಿ ನೀರಾವರಿ ನಿಗಮದ ಕೆ.ಆರ್.ಸಾಗರ ವಿಭಾಗದ ನೂತನ ಕಾರ್ಯಪಾಲಕ ಅಭಿಯಂತರರಾಗಿ ಸಿ.ಎಂ. ವೆಂಕಟರವಣಪ್ಪ. 
ರಾಜ್ಯ

ಕೆ.ಆರ್.ಸಾಗರ ಇಇ ಅಧಿಕಾರ ಸ್ವೀಕಾರ

ಬಾಲಮುರಳಿಕೃಷ್ಣ
ಕೆ.ಆರ್.ಸಾಗರ: ಕಾವೇರಿ ನೀರಾವರಿ ನಿಗಮದ ಕೆ.ಆರ್.ಸಾಗರ ವಿಭಾಗದ ನೂತನ ಕಾರ್ಯಪಾಲಕ ಅಭಿಯಂತರರಾಗಿ ಸಿ.ಎಂ. ವೆಂಕಟರಮಣಪ್ಪ ಸೋಮವಾರ ಅಧಿಕಾರ ಸ್ವೀಕರಿಸಿದರು. ಕಾರ್ಯಪಾಲಕ ಅಭಿಯಂತರರಾಗಿದ್ದ ಜಯಂತ ಅವರು ಏ.30 ರಂದು ನಿವೃತ್ತರಾದ ಕಾರಣ ಅವರ ಜಾಗಕ್ಕೆ ಸಿ.ಎಂ. ವೆಂಕಟರಮಣಪ್ಪ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
ಸಹಾಯಕ ಕಾರ್ಯಪಾಲಕ ಅಭಿಯಂತರ ಫಾರೂಕು ಅಭು, ಶಿವಪ್ರಸಾದ್, ಲೋಹಿತ್, ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಹಿತ್, ಅಭಿಯಂತರ ಸುರೇಶ್‌ಬಾಬು, ಸಹಾನ, ಲೆಕ್ಕ ಅಧಿಕ್ಷಕ. ಶ್ರೀನಿವಾಸ್, ಸಿಬ್ಬಂದಿ ನಾಗೇಶ್, ಶ್ರೀನಿವಾಸ್, ಅರವಿಂದ್, ಪ್ರಮೋದ್, ಲಿಲಾವತಿ, ಜಯಪ್ರಕಾಶ್, ಮ್ಯಾಥ್ಯೂ ಇತರರಿದ್ದರು.