ಕೃಷ್ಣಗಿರಿ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ದಿನೇಶ್ಕುಮಾರ್ ಚಾಲನೆ ನೀಡಿದರು. ಶಾಸಕರಾದ ಪಿ.ಮುಕುಂದನ್, ಡಾ.ಎನ್.ಇಳಯರಾಜ ಇತರರು ಇದ್ದರು.
ಹೊಸೂರು : ಕೃಷ್ಣಗಿರಿ ಜಿಲ್ಲೆಯ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, 2.56 ಲ ಮೆಟ್ರಿಕ್ ಟನ್ ಮಾವು ಉತ್ಪಾದನೆ ಮೂಲಕ ಜಿಲ್ಲೆಯು ವಿಶ್ವದಲ್ಲೆ ಮುಂಚೂಣಿಯಲ್ಲಿದೆ. ಮಾವು ಕೃಷಿಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ದಿನೇಶ್ ಕುಮಾರ್ ಹೇಳಿದರು.
ಕೃಷ್ಣಗಿರಿ ಸರ್ಕಾರಿ ಬಾಲಕರ ಕಲಾ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಮಾವಿಗೆ ಕನಿಷ್ಠ ದರ ನಿಗದಿಪಡಿಸಲು ಮತ್ತು ನೇರವಾಗಿ ಖರೀದಿಸುವ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಾಯಿಸಿದೆ.
ತಮಿಳುನಾಡಿನಲ್ಲಿ 1,19,750 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಏಕೈಕ ಜಿಲ್ಲೆ ಕೃಷ್ಣಗಿರಿ. ಜಿಲ್ಲೆಯಲ್ಲಿನ ಅನುಕೂಲಕರ ಹವಾಮಾನ ಪರಿಸ್ಥಿತಿ, ಮಳೆ ಮತ್ತು ಮಣ್ಣಿನ ಫಲವತ್ತತೆಯಿಂದಾಗಿ ಮಾವಿನ ಬೆಳೆಯನ್ನು ಲಾಭದಾಯಕವಾಗಿ ಬೆಳೆಯಾಲಗುತ್ತದೆ.
ರೈತರನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಯೋಜನೆಗಳಡಿ ಕಳೆದ ಸಾಲಿನಲ್ಲಿ 118.97 ಕೋಟಿ ರೂ. ಪರಿಹಾರ ತರಲಾಗಿದ್ದು, 1,03,420 ಕೃಷಿ ಕಾರ್ಮಿಕರಿಗೆ ಪ್ರಯೋಜನವಾಗಿದೆ. ಈ ವರ್ಷ ಸುಮಾರು 8,158 ರೈತರು 80.12 ಕೋಟಿ ರೂ. ಪರಿಹಾರ ಪಡೆಯಲಿದ್ದಾರೆ ಎಂದರು.
ವಿದೇಶಗಳಿಗೆ ರ್ತು : ಜಿಲ್ಲೆಯಲ್ಲಿ ಬೆಂಗಳೂರು, ಅಲ್ಫೋನ್ಸ, ಬಂಗನಪಲ್ಲಿ, ನೀಲಂ, ಮಾಲ್ಕೋವ್, ಕಲಾಪಾಡು, ರುಮಾನಿ, ಸೆಂಧೂರ, ಸೇಲಂ, ಬೆಂಗಳೂರು, ಇಮಾಪಚಂದ್ ಮತ್ತು ಮಲ್ಲಿಕಾ ಸೇರಿದಂತೆ ವಿವಿಧ ತಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ. ಅಲ್ಫೋನ್ಸ, ಮಾಲ್ಕೋವ್, ಬಂಗನಪಲ್ಲಿ ತಳಿಯ ಮಾವನ್ನು ಜಪಾನ್, ಮಲೇಷ್ಯಾ, ಸಿಂಗಾಪುರ ಮತ್ತು ಯುರೋಪಿಯನ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಡಿಸಿ ಮಾಹಿತಿ ನೀಡಿದರು.
ಸೌಲಭ್ಯ ವಿತರಣೆ : ವಿವಿಧ ಇಲಾಖೆಗಳ ಯೋಜನೆಗಳಡಿ 24 ಫಲಾನುಭವಿಗಳಿಗೆ 1.16 ಕೋಟಿ ರೂ. ಸಹಾಯಧನ ವಿತರಿಸಲಾಯಿತು. ಜಲ್ಲಿಕಟ್ಟು ಗೂಳಿ ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟ ದೇವಿಯ ಚಿತ್ರಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಕೃಷ್ಣಗಿರಿ ಶಾಸಕ ಪಿ.ಮುಕುಂದನ್, ಉತ್ತಂಗರೈ ಶಾಸಕ ಡಾ.ಎನ್.ಇಳಯರಾಜ ಇದ್ದರು.
ಎಸ್ಪಿ ಜಿ.ಎಸ್.ಅನಿತಾ, ಜಿಲ್ಲಾ ಕಂದಾಯ ಅಧಿಕಾರಿ ಎ.ಶೇಖ್ ಅಯೂಬ್, ಡಿಸಿ ಆಪ್ತ ಸಹಾಯಕ ಮುರುಗೇಶನ್, ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾ ನಿರ್ದೇಶಕಿ ಉಮಾ ಮಹೇಶ್ವರಿ, ಪ್ರೊಬೆಷನರಿ ಜಿಲ್ಲಾಧಿಕಾರಿ ಸಾಯಿಚೈತನ್ಯ ಜಾಧವ್, ಕೃಷ್ಣಗಿರಿ ಕಂದಾಯ ವಿಭಾಗೀಯ ಆಯುಕ್ತ ಎನ್.ಶಹಜಹಾನ್, ಜಂಟಿ ನಿರ್ದೇಶಕಿ ಕೆ.ಉಮಾ, ಜೆ.ಗುಣವತಿ, ಪತ್ರಿಕಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಸು.ಮೋಹನ್ ಇದ್ದರು.