- ಕೃಷ್ಣಾ ನದಿ ನೀರು ಹಂಚಿಕೆ ಪ್ರಕರಣ, ಗೆಜೆಟ್ ಹೊರಡಿಸಲು ರಾಜ್ಯ ಸರ್ಕಾರದ ಮನವಿ.
- ಸಿಜೆಪಿ ಸೂರ್ಯಕಾಂತ್ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆ.
- ಸೆಪ್ಟೆಂಬರ್ ಮೊದಲ ವಾರದ ಹೊತ್ತಿಗೆ ವಿಶೇಷ ಪೀಠ ರಚನೆ ಮಾಡುವುದಾಗಿ ಹೇಳಿದ ಸಿಜಿಐ.
Krishna Water Dispute: ಕೃಷ್ಣಾ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟೆಂಬರ್ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿದೆ.
ಮೂಲ ಸಮಸ್ಯೆ ಇತ್ಯರ್ಥ ಆಗಬೇಕಾಗಿರುವುದು ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವೆ, 2011 ರಲ್ಲಿ ನ್ಯಾಯಧೀಕರಣ ತೀರ್ಪು ಬಂದಿದೆ. ಈವರೆಗೂ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ ಎಂದು ರಾಜ್ಯ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.
ಆ ಸಂಬಂಧ ಸಿಜೆಪಿ ಸೂರ್ಯಕಾಂತ್ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ನಡೆಯುತ್ತಿರುವ ವಿಚಾರಣೆ ನಡೆಸಿ, ಸೆಪ್ಟೆಂಬರ್ ಮೊದಲ ವಾರದ ಹೊತ್ತಿಗೆ ವಿಶೇಷ ಪೀಠ ರಚನೆ ಮಾಡುವುದಾಗಿ, ಮೊದಲ ವಾರಕ್ಕೆ ವಿಚಾರಣೆ ಮುಂದೂಡಿದೆ.
ಏನಿದು ಕೃಷ್ಣಾ ನದಿ ನೀರು ಹಂಚಿಕೆ ವಿವಾದ
ತಮಿಳು ನಾಡು ಹಾಗೂ ಕರ್ನಾಟಕದ ಮಧ್ಯದ ಕಾವೇರಿ ನೀರು ಹಂಚಿಕೆ ವಿವಾದದಂತೆ, ಕರ್ನಾಟಕ,. ತೆಲಂಗಾಣ, ಮಹರಾಷ್ಟ್ರದ ಮಧ್ಯೆ ದೀರ್ಘಕಾಲದಿಂದಲೂ ಇರುವ ಜಲಹಂಚಿಕೆ ಸಂಘರ್ಷವಾಗಿದೆ. ನದಿಯ ನೀರನ್ನು ಕೃಷಿ ಮತ್ತು ಕುಡಿಯುವ ನೀರಿನ ಹಂಚಿಕೆ ವಿಚಾರವಾಗಿ ಸಮಾನವಾಗಿ ಹಂಚಿಕೊಳ್ಳುವ ವಿಷಯಕ್ಕೆ ರಾಜ್ಯಗಳ ಮಧ್ಯೆ ಭಿನ್ನಭಿಪ್ರಾಯ ಮುಂದುವರೆದಿದೆ.
2010-11ರ ತೀರ್ಪೇನು?
ಕೃಷ್ಣಾ ಜಲ ವಿವಾದ ನ್ಯಾಯಮಂಡಲಿಯು 2010 ಡಿಸೆಂಬರ್ನಲ್ಲಿ ತೀರ್ಪು ಕೊಟ್ಟು 2011ರಲ್ಲಿ ಸ್ಪಷ್ಟನೆ ನೀಡಿತ್ತು. ಒಟ್ಟು ಲಭ್ಯವಿರುವ ನೀರನ್ನು ಆಧರಿಸಿ ಆಂಧ್ರಪ್ರದೇಶಕ್ಕೆ 1001 ಟಿಎಂಸಿ ನೀರು ಕರ್ನಾಟಕಕ್ಕೆ 911 ಹಾಗೂ ಮಹಾರಾಷ್ಟ್ರಕ್ಕೆ 666 ಟಿಎಂಸಿ ಹಂಚಿಕೆ ಮಾಡಲಾಗಿತ್ತು. ಅಲ್ಲದೆ ಆಲಮಟ್ಟಿನೀರಿನ ಮಟ್ಟ ಹೆಚ್ಚಿಸಲು ಸೂಚನೆ ನೀಡಲಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆಗೆ 303 ಟಿಎಂಸಿ ನೀರು ಬಳಸಿಕೊಳ್ಳಲು ಒಪ್ಪಿಗೆ ನೀಡಿತ್ತು. ಕರ್ನಾಟಕ ಪ್ರತಿ ವರ್ಷ ಆಂಧ್ರ ಪ್ರದೇಶಕ್ಕೆ 8ರಿಂದ 10 ಟಿಎಂಸಿ ನೀರು ಹರಿಸಬೇಕು ಎಂದು ಆದೇಶ ನೀಡಿತ್ತು. ಈ ತೀರ್ಪನ್ನು 2050ರವರೆಗೂ ಅನ್ವಯವಾಗುವಂತೆ ನಿಗದಿಪಡಿಸಲಾಗಿತ್ತು. ಆದರೆ, ಇದನ್ನು ಪ್ರಶ್ನಿಸಿ ಆಂಧ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆ ಉಚ್ಛ ನ್ಯಾಯಾಲಯದಲ್ಲಿ ಅಧಿಸೂಚನೆಗೆ ತಡೆಯಾಜ್ಞ ಸಿಕ್ಕಿತ್ತು.
ರಾಮಲಿಂಗಾರೆಡ್ಡಿ ಹೇಳಿದ್ದೇನು?
ಬೇಗ ನೋಟಿಫಿಕೇಶನ್ ಮಾಡಿ ಎಂದು ನಾವು ಸುಪ್ರೀಂ ಕೋರ್ಟ್ಗೆ ಒತ್ತಾಯ ಮಾಡ್ತಿದ್ದೇವೆ. ಮೂರು ರಾಜ್ಯಗಳಿಗೂ ನಷ್ಟ ಆಗತ್ತೆ. ನಮಗೂ, ಆಂಧ್ರ, ಹಾಗೂ ಮಹರಾಷ್ಟ್ರ, ತೆಲಂಗಾಣಕ್ಕೂ ನಷ್ಟಾನೆ ಹೀಗಾಗಿ ಒತ್ತಾಯ ಮಾಡ್ತಿದ್ದೇವೆ,. ಮೂರು ರಾಜ್ಯದವರೂ ಅರಿತು ಮುಂದೆ ಹೋದರೆ ರೈತರಿಗೆ ಲಾಭವಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿಯವರು ಹೇಳಿದರು.
ಜುಲೈ21ರಂದು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರು, ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಮುಖ ಯೋಜನೆಗಳನ್ನು ವೀಕ್ಷಿಸಿ ಪರಿಶೀಲನೆಯನ್ನು ನಡೆಸಿದರು. ಆಲಮಟ್ಟಿ ಜಲಾಶಯದ ಉದ್ಯಾನವ, ನಾರಾಯಣಪುರ ಅಣೆಕಟ್ಟೆಗೆ ಭೇಟಿ ನೀಡಿ, NLBC-SCADA ಗೇಟ್ ಹಾಗೂ SCADA ಕಂಟ್ರೋಲ್ ರೂಮ್‌ನ ಕಾರ್ಯನಿರ್ವಹಣೆಯನ್ನು ವೀಕ್ಷಿಸಿ ಪರಿಶೀಲಿಸಲಾಯಿತು ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).