ಕೃಷ್ಣ ನದಿ ಒಡಲು ಖಾಲಿ ಖಾಲಿ 
ರಾಜ್ಯ

ಕೃಷ್ಣ ನದಿ ಒಡಲು ಖಾಲಿ ಖಾಲಿ...

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಕೃಷ್ಣ ನದಿ ಒಡಲು ಖಾಲಿ ಖಾಲಿ
  • ಪಾತಳ ಕಂಡ ಕೃಷ್ಣ ನದಿ
  • ನದಿಗೆ ನೀರು ಹರಿಸುವಂತೆ ಒತ್ತಾಯ
  • ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ನದಿ

ಕೃಷ್ಣ ನದಿ ಒಡಲು ಖಾಲಿ ಖಾಲಿ ...
| ಮಹಾರಾಷ್ಟ್ರದಿಂದ ಮೊಂಡುತನ | ೨ ಟಿಎಂಸಿ ನೀರು ಬಿಡಲು ಒತ್ತಾಯ
ಭಮ್ಮನ್ನವರ, ಚಿಕ್ಕೋಡಿ:

ಉತ್ತರ ಕರ್ನಾಟಕದ ಬಗ್ಗೆ ಎಲ್ಲ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ ಸಾಮಾನ್ಯವಾಗಿದೆ. ನದಿ ನೀರಿನ ವಿಚಾರವಾಗಿ ಕಾವೇರಿ ನೀರಿನ ಸಮಸ್ಯೆ ಎದುರಾದಾಗ ಹಾಹಾಕಾರವುಂಟಾಗುತ್ತದೆ. ಆದರೆ ಕೃಷ್ಣ ನದಿಯಲ್ಲಿ ನೀರಿಲ್ಲದಿದ್ದಾಗ ಯಾರು ಕೇಳುವುದಿಲ್ಲ, ಸ್ವಲ್ಪ ನೀರು ಬಿಡಿ ಎಂದು ಅಂಗಾಲಾಚುತ್ತಿರುವ ಜನರಿಗೆ ನೀರು ಬಾರದೆ ಕಂಗಾಲಾಗಿದ್ದಾರೆ, ಪಕ್ಷಾತೀತವಾಗಿ ಕೃಷ್ಣ ನದಿಗೆ ನೀರು ಹರಿಸುವ ವಿಚಾರ ನದಿಯಲ್ಲಿ ಹರಿದು ಹೋದಂತಾಗಿದೆ.
ರಾಜ್ಯದಲ್ಲಿ ಮುಂಗಾರು ಮಳೆ ವಿಳಂಬವಾದಾಗ ನದಿಗಳು ಬತ್ತಿ ಹೋಗುತ್ತಿವೆ, ಉತ್ತರ ಕರ್ನಾಟಕದ ಪ್ರಮುಖ ಜೀವ ನದಿಯಾದ ಕೃಷ್ಣ ನದಿ ಒಡಲು ಖಾಲಿ ನದಿ, ಮಳೆಬಾರದೇ ಹಿನ್ನಲೆಗೆ ನೀರು ಹರಿಸುವಂತೆ ಮಹಾರಾಷ್ಟದತ್ತ ಮುಖ ಮಾಡುತ್ತಿದೆ. ಆದರೆ ಮಹಾರಾಷ್ಟ್ರ ಸರ್ಕಾರ ನೀರು ಬಿಡದೆ ಮೊಂಡುತನ ಪ್ರದರ್ಶಿಸುತ್ತಿದೆ, ಆಡಳಿತ ಮತ್ತು ವಿರೋಧ ಪಕ್ಷಗಳು ಜನಮೌನ ವಹಿಸಿವೆ.
ಪ್ರತಿ ವರ್ಷ ಜೂನ ಮಧ್ಯಂತರದಲ್ಲಿ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹೊರ ಬಿಡುವ ನೀರಿನಿಂದ ಕೃಷ್ಣ ನದಿ ಪಾತ್ರದ ಚಿಕ್ಕೋಡಿ, ರಾಯಬಾಗ, ಕಾಗವಾಡ ಮತ್ತು ಅಥಣಿ ತಾಲ್ಲೂಕಿನಲ್ಲಿ ಪ್ರವಾಹಕ್ಕೆ ಕಾರಣ. ಆದರೆ ಅವಶ್ಯಕತೆ ಇದ್ದಾಗ, ನೀರು ಬಿಡದೆ ಇರುವುದು ಗಡಿ ಭಾಗದ ಜನರ ಆಕ್ರೋಶಕ್ಕೆ ಕಾರಣ.
ನದಿ ಪಾತ್ರದಲ್ಲಿ ಸಂಕಷ್ಟ:
ಕೃಷ್ಣಾ ನದಿ ಪಾತ್ರದಲ್ಲಿ ಜನ ಜಾನುವಾರಗಳಿಗೆ ತಿಂಗಳಾಂತ್ಯದೊಳಗೆ ಮಳೆಯಾಗಿ ನದಿ ಒಡಲು ತುಂಬದಿದ್ದರೆ, ಸಂಕಷ್ಟ ಎದುರಾಗಲಿದೆ. ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ ತಾಲೂಕಿನ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡು ಜನರ ನೀರಿಗಾಗಿ ಹಾಹಾಕಾರ ಪಡಲಿದೆ.ಪ್ರಸ್ತುತ ಸಣ್ಣ ಪ್ರಮಾಣದಲ್ಲಿ, ತಳದಲ್ಲಿ ನೀರು ಹರಿಯುತ್ತಿದೆ ಇದೇ ಪರಿಸ್ಥಿತಿ ಮುಂದುವರೆದಿದೆ ಕೊಕಟನೂರ,ಐಗಳಿ,ಸೇರಿ ಹತ್ತಕ್ಕೂ ಅಧಿಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರಿಲ್ಲದೇ ಸ್ಥಗೀತಗೊಂಡು ಹಾಹಾಕಾರವುಂಟಾಗಲಿದೆ.


ಕೃಷ್ಣಾ ನದಿಗೆ ಅಡ್ಡಲಾಗಿ ಬಾಗಲಕೋಟೆ ಜಮಖಂಡಿ ತಾಲೂಕಿನ ಹಿಪ್ಪರಗಿ ಬಳಿ ನಿರ್ಮಿಸಿರುವ ಹಿಪ್ಪರಗಿ ಜಲಾಶಯದ ಹೀನೀರು ಅಥಣಿ, ರಾಯವಾಗ,ಚಿಕ್ಕೋಡಿ ತಾಲೂಕಿಗೆ ವರದಾನವಾಗಿದೆ. ೬ ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ ಕೇವಲ ೦.೦೮ ಟಿಎಂಸಿ ನೀರು ಸಂಗ್ರಹವಿದೆ. ಆದರೆ ಇದು ತಿಂಗಳಾಂತ್ಯದವರೆಗೆ ಮಾತ್ರ ಸಾಕಾಗುತ್ತದೆ. ತಿಂಗಳಾಂತ್ಯದೊಳಗೆ ನದಿಗೆ ನೀರು ಹರಿಯದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ ಎಂಬುವುದು ನೀರಾವರಿ ಇಲಾಖೆ ಅಧಿಕಾರಿಗಳ ಸಹಾಯಕರು ಮಾತಾಗಿದೆ.
ನೀರಿದ್ದರೂ ಮಹಾ ಮೊಂಡುತನ:
ಮಹಾರಾಷ್ಟದ ಕೊಯ್ನಾ ಜಲಾಶಯ 105 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಜಲಾಶಯದಲ್ಲಿ 13 ಟಿಎಂಸಿ ನೀರು ಸಂಗ್ರಹವಿದೆ. ಇದು ಗಡಿಯಂಚಿನ ರಾಜಾಪೂರ ಬ್ಯಾರೇಜ್‌ವರೆಗೂ ನೀರು ಹರಿಯುತ್ತಿದೆ. ಮಳೆಯಾದರೇ ಏಕಾಏಕಿ ಹರಿ ಬಿಟ್ಟು ಪ್ರವಾಹಕ್ಕೆ ಕಾರಣವಾಗುವ ಮಹಾರಾಷ್ಟ್ರ ಸರ್ಕಾರ 2 ಟಿಎಂಸಿ ನೀರು ಬಿಡಲು ಹಿಂದೇಟು ಹಾಕುತ್ತಿದೆ.
--
ಕೋಟ್-
ಕೃಷ್ಣಾ ನದಿಗೆ ಮಹಾರಾಷ್ಟ್ರ ಕೊಯ್ನಾ ಜಲಾಶಯದಿಂದ ನೀರು ಹರಿಸಲು ಮಹಾರಾಷ್ಟ್ರ ಸರ್ಕಾರದ ಮೇಲೆ ಪಕ್ಷಾತೀತವಾಗಿ ಒತ್ತಡ ಹಾಕಬೇಕು. ಇದೇ ಪರಿಸ್ಥಿತಿ ಮುಂದುವರೆದರೇ ಕೃಷಿ, ಜನ ಜಾನುವಾರಗಳು ಕುಡಿಯುವ ನೀರಿಗೂ ಪರದಾಡಿದರು. ತಕ್ಷಣ ಎಚ್ಚತ್ತುಕೊಂಡು ಅಗತ್ಯ ಕ್ರಮ ವಹಿಸಲಿ.
ಮಹಾದೇವ ಮಡಿವಾಳ
ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ , ಅಥಣಿ