Krishna Reddy is the president of Pothepalli Dairy.
ಬಾಗೇಪಲ್ಲಿ: ತಾಲೂಕಿನ ಪೋತೇಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಿ.ವಿ.ಕೃಷ್ಣಾರೆಡ್ಡಿ, ಉಪಾಧ್ಯಕ್ಷರಾಗಿ ಸುಬ್ಬರಾಯಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಪಿ.ವಿ.ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಸುಬ್ಬರಾಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದು, ಎರಡನೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಅವಿರೋಧ ಎಂದು ಚುನಾವಣಾಧಿಕಾರಿಯಾಗಿ ಶಮ್ಸ್ ತರ್ಬಜ್ ಘೋಷಿಸಿದರು.
ಒಕ್ಕಲಿಗ ಸಂಘದ ನಿರ್ದೇಶಕ ಟಿ.ಕೋನಪರೆಡ್ಡಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ, ಮುಖಂಡರಾದ ಜೆ.ಪಿ.ಚಂದ್ರಶೇಖರರೆಡ್ಡಿ, ಶ್ರೀನಿವಾಸರೆಡ್ಡಿ, ಆ.ನ.ಮೂರ್ತಿ, ನಿರ್ದೇಶಕರಾದ ಪಿ.ಎನ್.ನಂಜಿರೆಡ್ಡಿ, ಪಿ.ಸಿ.ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ, ಶಿವಪ್ಪ, ಸತ್ಯಮ್ಮ, ಶ್ರೀನಿವಾಸಲು, ನರಸಿಂಹಪ್ಪ, ವೇಣುಗೋಪಾಲರೆಡ್ಡಿ, ಸುಬ್ಬರಾಯಪ್ಪ ಇತರರು ಇದ್ದರು.