- ಬಸವರಾಜ್ ಕನ್ನಾಳೆ ಮನೆ ಮೇಲೆ ಸಿಐಡಿ ದಾಳಿ, ಮನೆ ಸೀಜ್
- ಮನೆಯಲ್ಲಿ ಅಭ್ಯರ್ಥಿಗಳ ಹಾಲ್ ಟಿಕೆಟ್, ಮೊಬೈಲ್ ನಂಬರ್ ಪತ್ತೆ
- ರಿಮ್ಯಾಂಡ್ ಅರ್ಜಿಯಲ್ಲಿ ಸಾಹುಕಾರ್ ಎ1 ಆರೋಪಿ
ಏತನ್ಮಧ್ಯೆ ಹಗರದಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಎ-1 ಆರೋಪಿಯಾಗಿರುವ ವಿಚಾರ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯಿಂದ ಬೆಳಕಿಗೆ ಬಂದಿದೆ. ಈ ಮೂಲ ಶೀಘ್ರದಲ್ಲೇ ಸಾಹುಕಾರ್ ಅವರ ಬಂಧನವಾಗುವ ಸುಳಿವು ಸಿಕ್ಕಂತಾಗಿದೆ.
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಈ ಹಿಂದೆ ಬೀದರ್ ಜಿ.ಪಂ.ಸಿಇಓ ಆಗಿದ್ದ ಸಂದರ್ಭದಲ್ಲಿ ಸ್ನೇಹ ಸಂಪರ್ಕ ಹೊಂದಿದ್ದ ಬಸವರಾಜ್ ಕನ್ನಾಳೆ ಅವರಿಗೆ ಸೇರಿದ ಬೆಂಗಳೂರಿನ ಸಂಜಯ್ ನಗರದ ವಿನಾಯಕ್ ಲೇಔಟ್‌ಲ್ಲಿರುವ ನಿವಾಸ ಮೇಲೆ ಕೋರ್ಟ್ ವಾರೆಮಟ್ ಪಡೆದು ಮಂಗಳವಾರ ದಾಳಿ ನಡೆಸಿರುವ ಸಿಐಡಿ ಅಧಿಕಾರಿಗಳಿಗೆ ಕೆಲ ಅಭ್ಯರ್ಥಿಗಳ ಹಾಲ್ ಟಿಕೆಟ್, ಮೊಬೈಲ್ ಸಂಖ್ಯೆ ಪತ್ತೆಯಾಗಿದೆ. ಮನೆಯನ್ನೇ ಅಕ್ರಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ ಆರೋಪಿ ಕನ್ನಾಳೆ ಮನೆಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಪಶುವೈದ್ಯ ಅಧಿಕಾರಿಗಳ 400 ಹುದ್ದೆಗಳ ಕುರಿತು 329 ಮಂದಿ ಅಭ್ಯರ್ಥಿಗಳಿಗೆ ಸಿಐಡಿ ನೋಟಿಸ್ ಜಾರಿ ಮಾಡಿತ್ತು. ಈ ಕುರಿತು ದಿನವೊಂದಕ್ಕೆ 10 ರಿಂದ 15 ಮಂದಿಯನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಹಣ ಸರ್ಕಾರಿ ಹುದ್ದೆಗೆ ಆಯ್ಕೆಯಾಗುವ ಕುರಿತು ನಡೆದ ಹಗರಣದ ಬಗ್ಗೆ ತನಿಖಾಧಿಕಾರಿಗಳ ಮುಂದೆ ವಿವರಿಸಿದ್ದಾರೆ. ಐಎಎಸ್ ಅಧಿಕಾರಿ ಮೂಲಕ ಬಸವರಾಜ್ ಕನ್ನಾಳೆ ಸೇರಿ ಮದ್ಯವರ್ತಿಗಳು ತಮ್ಮನ್ನು ಸಂಪರ್ಕಿಸಿ ಸರ್ಕಾರಿ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿ ಹಣ ಪಡೆದಿದ್ದಾರೆ ಎಂದು ಸಿಐಡಿ ಮುಂದೆ ಅಭ್ಯರ್ಥಿಗಳು ಬಾಯಿಬಿಡಲು ಎಂದು ಮೂಲಗಳು ತಿಳಿಸಿವೆ.
ಸಾಹುಕಾರ್ ಎ1 ಆರೋಪಿ:
ಆರೋಪಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್‌ನ್ನು ಕಸ್ಟಡಿಗೆ ಪಡೆಯಲು ಸಿಐಡಿ ಅಧಿಕಾರಿಗಳು ನಗರದ 1 ಎಸಿಜೆಎಂ ಕೋರ್ಟ್‌ಗೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅಮಾನತುಗೊಂಡ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಎ1 ಆರೋಪಿಯನ್ನಾಗಿ ಮಾಡಲಾಗಿದೆ. ಕೆಪಿಎಸ್‌ಸಿ ಕೆಲ ಸದಸ್ಯರು -ಎ2, ಆಯೋಗದ ಅಧಿಕಾಅರಿಗಳು- ಎ3, ನೇಮಕಾತಿ ವೇಳೆ ಆಯ್ಕೆಯಾದ -29 ಅಭ್ಯರ್ಥಿಗಳು- ಎ4, ಜ್ಞಾನೇಂದ್ರ ಕುಮಾರ್ ಗಂಗ್ವಾರ್- ಎ5, ಬಸವರಾಜ್ ಕನ್ನಾಳೆ-ಎ6 ಗಳೆಂದು ಸಿಐಡಿ ಉಲ್ಲೇಖಿಸಲಾಗಿದೆ.
ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕನ್ನಾಳೆ ವಿಚಾರಣೆ ತೀವ್ರಗೊಳಿಸಿರುವ ಅಧಿಕಾರಿಗಳು, ಅಕ್ರಮಮದ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ವೇಳೆ ಶಿವಶಂಕರಪ್ಪ ಸಾಹುಕಾರ್ ಬಗ್ಗೆ ಇನ್ನಷ್ಟು ಸಾಕ್ಷಾೃಧಾರಗಳು ಕಂಡು ಬಂದರೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ತಪ್ಪೋಪ್ಪಿಗೆ ಹೇಳಿಕೆ ನೀಡಲು ಮುಂದಾಗಿರುವ ಅಭ್ಯರ್ಥಿಗಳು ನೀಡುವ ಸ್ವಯಂಕೃತ ಹೇಳಿಕೆ ಕೂಡ ಸಾಹುಕಾರ್ ಸಂಧನಕ್ಕೆ ಪ್ರಮುಖ ಸಾಕ್ಷಿಯಾಗಲಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಎಂಎಲ್ಸಿ ಆಗುತ್ತೇನೆಂದು ಅಧಿಕಾರಿ ರೀಲ್
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್‌ನೊಂದಿಗೆ ಸ್ನೇಹ ಬೆಳೆಸಿದ್ದ ಆರೋಪಿ ಬಸವರಾಜ್ ಕನ್ನಾಳೆ, ತಾನು ವಿಧಾನ ಪರಿಷತ್ ಸದಸ್ಯನಾಗುತ್ತೇನೆ ಎಂದು ಹೇಳಿದ್ದ. ಇದರಿಂದ ಇದನ್ನು ನಂಬಿದ್ದ ಗಂಗ್ವಾರ್ ಬಸವರಾಜ್ ಜತೆ ಇನ್ನಷ್ಟು ಹತ್ತಿರವಾಗಿದ್ದೆ. ಅಷ್ಟರಲ್ಲಿ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕನಾಗಿದ್ದರಿಂದ ಸರ್ಕಾರದ ವಿವಿಧ ಇಲಾಖೆ ಪರೀಕ್ಷೆಗಳಲ್ಲಿ ಅಕ್ರಮ ನಡೆಸಲು ಇಬ್ಬರು ಮುಂದಾಗಿದ್ದರು. ಪಶುವೈದ್ಯಾಧಿಕಾರಿಗಳ ನೇಮಕಾತಿ ಅಷ್ಟೆ ಅಲ್ಲದೆ ಹಿಂದೆ ನಡೆದಿರುವ ಹಲವು ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ.
ಡಿವೈಎಸ್ಪಿ, ತಹಸೀಲ್ದಾರ್ ಹುದ್ದೆಯಲ್ಲೂ ಅಕ್ರಮ ?
*2023-24ರಲ್ಲಿ ನಡೆದ ಗೆಜೆಟೆಡ್ ಪ್ರೊಬೇಷನರಿ ಡಿವೈಎಸ್‌ಪಿ, ತಹಸೀಲ್ದಾರ್, ಸಹಾಯಕ ನಿರ್ದೇಶಕರು ಖಜಾನೆ, ಸಮಾಜ ಕಲ್ಯಾಣ ಇಲಾಖೆ ಗ್ರೇಡ್-1, ವಾಣಿಜ್ಯ ತೆರಿಗೆ ಇಲಾಖೆ, ಕಾರಾಗೃಹ, ಅಬಕಾರಿ ಉಪ ಅಧೀಕ್ಷರು ಸೇರಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಸೇರಿ ಒಟ್ಟು -384 ಹುದ್ದೆಗಳ ನೇಮಕಾತಿಯಲ್ಲೂ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎನ್ನಲಾಗಿದೆ. ಆರೋಪಿ ಬಸವರಾಜ್ ಕನ್ನಾಳೆ ನೇಮಕಗೊಂಡ ಅಭ್ಯರ್ಥಿಗಳೊಂದಿಗೆ ಗುಂಪು ಪೋಟೋ ತೆಗೆಸಿಕೊಂಡಿರುವುದು ಸಿಐಡಿ ಪತ್ತೆ ಮಾಡಿದೆ.
ಕೆಪಿಎಸ್‌ಸಿಯಲ್ಲಿ 2010ರಿಂದಲೇ ಅಕ್ರಮದ ದಂಧೆ !
* 2019-20ನೇ ಸಾಲಿನಲ್ಲಿ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ 975 ಪ್ರಥಮ ದರ್ಜೆ ಸಹಾಯರ ಹುದ್ದೆಗೆ ಅಧಿಸೂಚನೆ , ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ-33, ಉದ್ಯೋತ ಮತ್ತು ತರಬೇತಿ ಇಲಾಖೆ-52, ಸಾರಿಗೆ ಇಲಾಖೆ-25, ಸಚಿವಾಲಯ ವಿಧಾನಸೌಧ-124, ಬೆಂಗಳೂರು ಜಿಲ್ಲಾಧಿಕಾರಿಗಳ ಕಾರ್ಯಾಲಯ 42, ತೋಟಗಾರಿಕೆ ಇಲಾಖೆ ಬೆಂಗಳೂರು-48, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-176, ಖಜಾನೆ-108, ಕಾಲೇಜು ಶಿಕ್ಷಣ ಇಲಾಖೆ -123, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-50, ನಗರಾಭಿವೃದ್ಧಿ ಇಲಾಖೆ-75 ಹುದ್ದೆಗಳ ನೇಮಕಾತಿ
*2020ರಲ್ಲಿ ನಿವಾಸಿ ಆಯುಕ್ತರ ಕಚೇರಿ, ಕರ್ನಾಟಕ ಭವನ ನವದೆಹಲಿಯಲ್ಲಿ -4 ಸಹಾಯಕ ಹುದ್ದೆಗಳಿಗೆ ಅಧಿಸೂಚನೆ
*2020ರಲ್ಲಿ ಹೈದ್ರಾಬಾದ್ ಕರ್ನಾಟಕ ವೃಂದದ ಎ್ಡಿಎ -137 ಹುದ್ದೆಗಳಿಗೆ ಅಧಿಸೂಚನೆ
* 2020ರಲ್ಲಿ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ-48 ಸಹಾಯ ನಿಯಂತ್ರಕರು, ಸಮೂಹ ‘ಎ’ ವೃಂದದ ನೇಮಕಾತಿ.
*2020ನೇ ಸಾಲಿನಲ್ಲಿ 2027-18ರ ಗೆಜೆಟೆಡ್ ಪ್ರೊಬೇಷನರಿ 106 ಹುದ್ದೆಗಳಿಗೆ ಅಧಿಸೂಚನೆ
* 2020ರಲ್ಲಿ ರಾಜ್ಯ ಸಿವಿಲ್ ಸೇವೆಯಡಿ ಉಳಿಕೆ ಮೂಲ ವೃಂದದ ಪ್ರಥಮ ದರ್ಜೆ ಸಹಾಯಕರು- 24 ಹುದ್ದೆಗಳಿಗೆ ಅಧಿಸೂಚನೆ.
* 2019-20ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಳಿಕೆ ಮೂಲ ವೃಂದದ ಎಸ್‌ಡಿಎ-ಎ್ಡಿಎ-1080 ಹುದ್ದೆಗಳಿಗೆ ಅಧಿಸೂಚನೆ
*2019-20ನೇ ಸಾಲಿನಲ್ಲಿ ಬೃಹತ್ ಬಿಬಿಎಂಪಿ, ಹೈ.ಕ.ವೃಂದದ ಕಿರಿಯ ಸಹಾಯಕರ-199 ಹುದ್ದೆಗಳಿಗೆ ಅಧಿಸೂಚನೆ.
2020ರಲ್ಲಿ ರಾಜ್ಯ ಸಿವಿಲ್ ಸೇವೆಯಡಿ ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ-44 ಹುದ್ದೆಗಳಿಗೆ ಅಧಿಸೂಚನೆ
*2020ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಗ್ರೂಪ್ ಎ ಮತ್ತು ಗ್ರೂಪ್ ಬಿ ತಾಂತ್ರಿಕ/ತಾಂತ್ರಿಕೇತರ ವೃಂದದ-251 ಹುದ್ದೆಗಳ ಭರ್ತಿಗೆ ಅಧಿಸೂಚನೆ.
*2020ರಲ್ಲಿ ಆಯುಷ್ ಇಲಾಖೆಯಲ್ಲಿ ಗ್ರೂಪ್ ಎ, ಬಿ, ಸಿ ಹಾಗೂ ಪ್ರಾಧ್ಯಾಪಕರ-275 ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ.
* 2020ರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜನಿಯರ್ (ಸಿವಿಲ್-ಗ್ರೇಡ್-1)-660 ಹಾಗೂ ಕಿರಿಯ ಇಂಜಿನಿಯರ್-330 (ಸಿವಿಲ್) ಸೇರಿ ಒಟ್ಟು 990 ಹುದ್ದೆಗಳಿಗೆ ಅಧಿಸೂಚನೆ.