ಟಿಎಪಿಸಿಎಂಎಸ್ಗೆ ಕೊತ್ತೂರು ಜಿ.ಮಂಜುನಾಥ್ ಅಧ್ಯಕ್ಷ TAPCMS
ಮುಳಬಾಗಿಲು: ಮುಳಬಾಗಿಲು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್) ಶನಿವಾರ ಅಧ್ಯಕ್ಷರಾಗಿ ಶಾಸಕ ಕೊತ್ತೂರು ಜಿ.ಮಂಜುನಾಥ್, ಉಪಾಧ್ಯಕ್ಷೆಯಾಗಿ ಸನ್ಯಾಸನಹಳ್ಳಿ ಎನ್. ಸುಧಾತಿಮ್ಮರಾಜು ಅವಿರೋಧ ಆಯ್ಕೆಯಾದರು.TAPCMS
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಈಗಾಗಲೇ 13 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದು, ಅವರಲ್ಲೇ ಒಬ್ಬ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಲಾಗಿತ್ತು. ಆದರೆ ಪಕ್ಷದ ಮುಖಂಡರು ಸಹಕಾರಿ ಕ್ಷೇತ್ರದ ಪ್ರಮುಖರು ಸಲಹೆ ಸೂಚನೆ ನೀಡಿ ಸಂಘದ ನೂತನ ಕಟ್ಟಡ ನಿಮಾರ್ಣವಾಗಬೇಕಿದ್ದು, ಅದನ್ನು ಪೂರ್ಣಗೊಳಿಸುವವರೆಗೂ ನೀವೆ ಸರ್ಕಾರದ ನಾಮ ನಿರ್ದೇಶಕರಾಗಿ ಆಗಮಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕೆಂದು ಕೋರಿದ ಮೇರೆಗೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ ಎಂದರು.
ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ ಮಾತನಾಡಿ, ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರು ತಾಲೂಕು ಸಂಘವನ್ನು ಅಧ್ಯಕ್ಷರಾಗಿ ಅಭಿವೃದ್ಧಿ ಮಾಡಿದ್ದಾರೆ. ಜತೆಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸಂಘವನ್ನು ಪ್ರತಿನಿಧಿಸಿದ್ದಾರೆ. ಸಂಘದ ಅಭಿವೃದ್ಧಿ ಜತೆಗೆ ಮುಳುಗಿರುವ ಡಿಸಿಸಿ ಬ್ಯಾಂಕ್ ಅನ್ನು ಮತ್ತೆ ಮುಖ್ಯ ವಾಹಿನಿಗೆ ತರಲು ಅವರಿಂದ ಸಾಧ್ಯ ಎಂದರು.
ನಿರ್ದೇಶಕರಾದ ಆಲಂಗೂರು ಶಿವಣ್ಣ, ಆರ್.ಆರ್. ರಾಜೇಂದ್ರಗೌಡ, ಮೇಲಾಗಾಣಿ ಎಂ.ಸಿ. ಸರ್ವಜ್ಞಗೌಡ, ದೇವರಾಯ ಸಮುದ್ರ ವಿ.ರಾಜಪ್ಪ, ಕತನಹಳ್ಳಿ ಅರ್.ಅಮರನಾರಾಯಣಪ್ಪ, ಹನುಮನಹಳ್ಳಿ ಎಂ. ಸುಬ್ರಮಣಿ, ಮಲ್ಲನಾಯಕನಹಳ್ಳಿ ಪಿ.ಎಸ್.ರಮೇಶ್ ಬಾಬು, ಅಂಬ್ಲಿಕಲ್ ಮಲ್ಲಿಕಾರ್ಜುನ ರೆಡ್ಡಿ, ಲಿಂಗಾಪುರ ನಾರಾಯಣಸ್ವಾಮಿ, ಕಗ್ಗಿನಹಳ್ಳಿ ಶ್ರೀನಿವಾಸ್, ಕೆ.ಬಿಕ್ಕನಹಳ್ಳಿ ಚನ್ನರಾಯಪ್ಪ, ನಲ್ಲೂರು ಎ.ಕವಿತಾನಾರಾಯಣಸ್ವಾಮಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಶಿವಶಂಕರ್ ಇದ್ದರು.