ಒಂದು ಸಂಸ್ಥೆ ಕಟ್ಟಬೇಕಾದರೆ ಬಹಳ ಶ್ರಮ ಬೇಕಾಗುತ್ತದೆ. ಅದು ನೋಡವವರಿಗೆ ಒಂದು ತರ ಕಂಡರೆ ಕನಸು ಕಟ್ಟುವ ಮನಸ್ಸಿನವರಿಗೆ ಬಹಳ ಕಷ್ಟ ಇರುತ್ತದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ನಗರದ ಕಳಸಾಪೂರ ರಸ್ತೆಯಲ್ಲಿರುವ ಬಯಲು ಆಂಜನೇಯ ದೇವಸ್ಥಾನದ ಆವರಣದಲ್ಲಿ ರವಿವಾರ ಜರುಗಿದ ಕಾಳಿದಾಸ ಶಿಣ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅರು, ಕಾಳಿದಾಸ ಶಿಣ ಸಂಸ್ಥೆ ತನ್ನ 25 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವದಕ್ಕೂ ನಾವುಗಳು ಹುಟ್ಟುಹಬ್ಬ ಆಚರಿಸಿಕೊಳ್ಳುವದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಾವುಗಳು ಕೇಕ್ನಲ್ಲಿರುವ ದೀಪವನ್ನು ಆರಸಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತೆವೆ. ಆದರೆ, ಕಾಳಿದಾಸ ಶಿಣ ಸಮಿತಿಯು ದೀಪವೇ ಇಲ್ಲದ ಗುಡಿಸಲಿನ ಮಕ್ಕಳ ಎದೆಯಲ್ಲಿ ಅರದ ದೀಪವನ್ನು ಹಚ್ಚಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ ಎಂದು ಕೊಪ್ಪಳದ ಶ್ರೀಗಳು ಹೇಳಿದರು.
ಶಿಣ ಎಂದರೆ ಶಾಲೆಯಲ್ಲಿ ಕಲಿಯುವದಲ್ಲ. ಈ ಜಗತ್ತು ನಮಗೆ ಕಲಿಸುತ್ತದೆ. ಡೋನೇಷನ್ ಇಲ್ಲದೆ ಕಲಿಸುವ ಪಾಠಶಾಲೆ ಈ ಜಗತ್ತು ಆಗಿದೆ. ಅಮ್ಮನ ಜೋಗುಳ, ಅಪ್ಪನ ಬೈಗುಳ ಇದ್ದರೆ ನಮ್ಮ ಜೀವನ ಪರಿರ್ಪೂಣ. ಪ್ರತಿದಿನ ಉದಯಿಸುವ ಸೂರ್ಯ, ತಿರುಗುವ ಭೂಮಿ, ಬೀಸುವ ಗಾಳಿ, ಹರಿಯುವ ನೀರು ಇವುಗಳಲ್ಲಿ ಯಾವುಗಳು ಕೆಟ್ಟಿಲ್ಲ. ಇವುಗಳೆಲ್ಲವನ್ನು ಮನುಷ್ಯರು ಕಲುಷಿತ ಮಾಡಿದ್ದಾರೆ ಎಂದರು.
ಯುವ ಕಾಂಗ್ರೆಸ್ ಸಮಿತಿಯ ಅಧ್ಯ ಕೃಷ್ಣಗೌಡ ಪಾಟೀಲ ಮಾತನಾಡಿದರು. ಡಾ. ಜಿ. ಬಿ. ಪಾಟೀಲ, ಎಸ್. ಜಿ. ಪಲ್ಲೇದ, ಬಿ. ಬಿ.ಬಾವಿಕಟ್ಟಿ, ಕೀರಪ್ಪ ಹೆಬಸೂರ, ಶಶಿಧರ ರೊಳ್ಳಿ, ಆರ್. ಡಿ. ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ. ಬಿ. ಬಾನಾಪೂರ, ಆರ್. ಎಂ. ನಿಂಬನಾಯ್ಕರ, ಎಸ್. ಡಿ. ಸಿಂಗಟಾಲಕೇರಿ, ಎಸ್. ಎಸ್. ಕರಡಿ ಇತರರು ಇದ್ದರು.