Kolar ಶ್ರೀನಿವಾಸಪುರ ತಾಲೂಕು ಯದರೂರು ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಭೂಮಿಪೂಜೆ ನೆರವೇರಿಸಿದರು.  
ರಾಜ್ಯ

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಒತ್ತು |.Kolar

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿಕೆ
ಶ್ರೀನಿವಾಸಪುರ: ಕ್ಷೇತ್ರದಲ್ಲಿ ಬಡಕುಟುಂಬಗಳ ಸಂಖ್ಯೆ ಹೆಚ್ಚಾಗಿದ್ದು, Kolar ಅವರನ್ನು ಬಡತನದಿಂದ ಆಚೆ ತಂದು ಪ್ರಗತಿಯನ್ನ ಕೊಂಡೊಯ್ಯಲು ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಕನಸು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಯದರೂರು ಗ್ರಾಮದಲ್ಲಿ ಸೋಮವಾರ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸವಿಟ್ಟು ಮತ ಹಾಕಿ ಗೆಲ್ಲಿಸಿಕೊಟ್ಟಿದ್ದಾರೆ ಅದಕ್ಕಾಗಿ ಅವರ ಋಣ ತೀರಿಸುವ ಉದ್ದೇಶದಿಂದ ಬಡವರಿಗೆ ಮನೆಗಳ ನಿಮಾರ್ಣ ಸೇರಿ ಸಾರ್ವಜನಿಕರಿಗೆ ಬೇಕಾದ ಮೂಲ ಸೌಲಭ್ಯ ದೊರಕಿಸಿಕೊಡಲು ಶ್ರಮಿಸಲಾಗುವುದು ಎಂದರು.
ಪಂಚಾಯಿತಿಗೆ ಸಂಬಂಧಿಸಿ ಯಾವುದೇ ಗ್ರಾಮದಲ್ಲಿ ನೀರಿನ ತೊಂದರೆಯಾಗದಂತೆ ಎಚ್ಚರವಹಿಸಲು ಸ್ಥಳಿಯ ಅಧಿಕಾರಿಗಳಿಗೆ ಸೂಚಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ-ಗತಿಗಳ ಬಗ್ಗೆ ಮಾಹಿತಿ ಪಡೆದರು.
ಬಹಳ ದಿನಗಳಿಂದ ಅಭಿವೃದ್ಧಿಯಾಗದೆ ಹಿಂದುಳಿದ ಗ್ರಾಮದ ಸರ್ವತೋಮುಖ ಅಭಿವೃದಿಯಾಗಬೇಕು.
ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಪ್ರಥಮವಾಗಿ ಈ ಗ್ರಾಮದ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಗಳಿಗೆ ಬಳಸಬೇಕು.
ಮುಖ್ಯವಾಗಿ ಗ್ರಾಮದ ಎಸ್​ಸಿ ಕಾಲನಿಗಳಲ್ಲಿ ಚರಂಡಿ ಸೇರಿ ಸಿಸಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಉಳಿದಂತೆ ಗ್ರಾಮದಲ್ಲಿರುವ ಚಿಕ್ಕ-ಚಿಕ್ಕ ರಸ್ತೆಗಳನ್ನು ಸಿಸಿ ರಸ್ತೆಯಾಗಿ ಮಾಡಲಾಗುವುದು ಎಂದು ತಿಳಿಸಿದರು.
ಬಯಲುಸೀಮೆ ಅನುದಾನದಿಂದ 35 ಲಕ್ಷ ರೂ., ಪಿಡಬ್ಲ್ಯುಡಿ ಇಲಾಖೆಯಿಂದ 15 ಲಕ್ಷ ರೂ. ಇನ್ನುಳಿದಂತೆ ಬಾಕಿ ಇರುವ ಕಾಮಗಾರಿಗಳಿಗೆ ಬೇರೆ ಅನುದಾನದ ಕೊಡಿಸುವುದಾಗಿ ಭರವಸೆ ನೀಡಿದರು.