ಚಿತ್ರ ೦೫ ಕೆ.ಎಲ್.ಆರ್. ೦೪ : ನವೀನ್‌ಚಂದ್ರ, ಪೌರಾಯುಕ್ತರು, ಕೋಲಾರ ನಗರ.
ಕೋಲಾರ ನಗರದಲ್ಲಿ ಹಲವಾರು ವರ್ಷಗಳಿಂದ ಬಿದ್ದಿರುವ ತ್ಯಾಜ್ಯ ಸೇರಿದಂತೆ ಹೊಸ ತ್ಯಾಜ್ಯವನ್ನು ವಿಲೇವಾರಿ ಮಾಡಲು ಜಿಲ್ಲಾಡಳಿತ, ನಗರಸಭೆ ಭಾನುವಾರ ಮುಂದಾಗಿದ್ದು, ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕಾಗಿದೆ ಎಂದು ಪೌರಾಯುಕ್ತ ನವೀನ್‌ಚಂದ್ರ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಭಾನುವಾರ ಬೆಳ್ಳಿಗ್ಗೆ ೭ ಗಂಟೆಯಿAದ ತ್ಯಾಜ್ಯ ವಿಲೇವಾರಿ ಮಾಡುವ ಅಭಿಯಾನ ಕೈಗೊಳ್ಳಲಿದ್ದು, ಜಿಲ್ಲಾಧಿಕಾರಿಗಳು, ಶಾಸಕರು, ರಾಷ್ಟಿçÃಯ ಹೆದ್ದಾರಿಯವರು, ಗುತ್ತಿಗೆದಾರರು, ಲೋಕೋಪಯೋಗಿ ಇಲಾಖೆಯವರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.
ನಗರಸಭೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಗುತ್ತಿಗೆದಾರರು ಜೆಸಿಬಿ ಮತ್ತು ಟಿಪ್ಪರ್‌ಗಳನ್ನು ಕಸ ವಿಲೇವಾರಿಗೆ ಕಳುಹಿಸಿಕೊಡಲಿದ್ದಾರೆ. ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟಿçÃಯ ಹೆದ್ದಾರಿಯಲ್ಲಿ ಕೆಲಸ ಮಾಡುವ ಗುತ್ತಿಗೆದಾರರು ಟಿಪ್ಪರು ಮತ್ತು ಜೆಸಿಬಿ ಗಳನ್ನು ಕಳುಹಿಸಿಕೊಡಲಿದ್ದು, ಸುಮಾರು ೧೦೦ಕ್ಕೂ ಹೆಚ್ಚು ಟಿಪ್ಪರುಗಳು ಕಸ ವಿಲೇವಾರಿಯಲ್ಲಿ ಭಾಗವಹಿಸಲಿವೆ. ಸಂಜೆ ೫ ಗಂಟೆಯ ತನಕ ಕಸ ವಿಲೇವಾರಿ ಮಾಡಲಾಗುವುದು. ಪಾರಂಪರಿಕವಾಗಿ ಇರುವ ಕಸ ಸೇರಿದಂತೆ ಕೋಲಾರ ನಗರದಲ್ಲಿ ಯಾವುದೇ ಮೂಲೆಯಲ್ಲಿ ಕಸದ ರಾಶಿಗಳು ಇರಬಾರದು. ಅ ಎಲ್ಲವನ್ನು ವಿಲೇವಾರಿ ಮಾಡಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ.
ಆಂದೋಲನದ ರೀತಿಯಲ್ಲಿ ಕೋಲಾರ ನಗರದಲ್ಲಿರುವ ಕಸವನ್ನು ಭಾನುವಾರ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಎಂ.ಆರ್.ರವಿ ಮತ್ತು ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ನಗರಸಭೆ ಈ ಅಭಿಯಾನವನ್ನು ಕೈಗೊಂಡಿದೆ. ಕೋಲಾರವನ್ನು ಕಸಮುಕ್ತ ನಗರವನ್ನಾಗಿ ಮಾಡಬೇಕೆಂಬುದೇ ಇದರ ಉದ್ದೇಶವಾಗಿದೆ ಎಂದು ಪೌರಾಯುಕ್ತ ನವೀನ್ ಚಂದ್ರ ತಿಳಿಸಿದರು.