ಇ-ಮೇಲ್ ಅಡ್ರಸ್ ಮೂಲಕ ಬಾಂಬ್ ಬೆದರಿಕೆಯ ಕರೆ ಮಾಡಿರುವ ಚಿತ್ರ
ಕೋಲಾರದ ಜಿಲ್ಲಾಧಿಕಾರಿ ಕಛೇರಿಗೆ ಅನಾಮಧೇಯ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯನ್ನು ಪೋಲಿಸರು ಬಾಂಬ್ ನಿಷ್ಕಿçಯ ದಳ ಹಾಗೂ ಶ್ವಾನದಳದಿಂದ ಪತ್ತೆ ಹಚ್ಚಿದ ನಂತರ ಇದೊಂದು ಸುಳ್ಳು ಬೆದರಿಕೆ ಇ-ಮೇಲ್ ಕರೆಯಾಗಿದೆ ಎಂಬುದು ದೃಢಪಟ್ಟಿದೆ.
ಬೆಳ್ಳಿಗ್ಗೆ ೬ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಗೆ ಬೀದರ್ ಮತ್ತು ಕೋಲಾರಕ್ಕೆ ಇ-ಮೇಲ್ ಮೂಲಕ ಮಧ್ಯಾಹ್ನ ೨ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯನ್ನು ಬಾಂಬ್ ಬ್ಲಾಸ್ಟ್ ಮಾಡಲಾಗುವುದೆಂಬ ಮೆಸೇಜ್ ಬಂದಿತ್ತು.
ಮಧ್ಯಾಹ್ನ ೩ ಗಂಟೆಯ ನಂತರ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದ ಇ-ಮೇಲ್ ಮೆಸೇಜ್‌ನ್ನು ನೋಡಿ ಪೋಲಿಸರಿಗೆ ಮಾಹಿತಿ ಜಿಲ್ಲಾಧಿಕಾರಿಗಳ ಕಛೇರಿಯಿಂದ ಬಂದ ನಂತರ ಗ್ರಾಮಾಂತರ ಪೋಲಿಸರು ಎಚ್ಚೆತ್ತುಕೊಂಡು ಶ್ವಾನದಳ ಹಾಗೂ ಬಾಂಬ್ ನಿಷ್ಕಿçಯ ದಳದೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯನ್ನು ಸುತ್ತುವರೆದು ಕಛೇರಿಯಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಹೊರ ಕಳುಹಿಸಿ ಇಂಚು ಇಂಚು ಜಾಲಾಡಿದ ನಂತರ ಯಾವುದೇ ಅವಶೇಷಗಳು ಸಿಗದೇ ಇದ್ದಾಗ ಇದೊಂದು ಹುಸಿ ಇ-ಮೇಲ್ ಕರೆ ಎಂಬುದು ದೃಢಪಟ್ಟಿದೆ.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದಾಗ ಪೋಲಿಸರು ಆಗಮಿಸಿ ಶಾಸಕರನ್ನು ಮತ್ತು ಅಧಿಕಾರಿಗಳನ್ನು ಹೊರಕಳುಹಿಸಿದರು. ನಂತರ ಶಾಸಕರು ಜಿಲ್ಲಾಧಿಕಾರಿಗಳ ಕಛೇರಿಯ ಹೊರಗಡೆಯ ಆವರಣದಲ್ಲಿಯೇ ನಿಂತುಕೊAಡು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಹೊರ ನಡೆದರು.
ಚನೈ ಮೂಲದ ಅಪ್ರಾಪ್ತ ಬಾಲಕಿಯ ಮೂಲಕ, ಇ-ಮೇಲ್ ಮೂಲಕ ಬಾಂಬ್ ಬ್ಲಾಸ್ಟ್ ಮಾಡುವ ಸುದ್ದಿ ರವಾನೆಯಾಗಿರುವುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದ್ದಾರೆ.