ಚಿತ್ರ ೧೮ ಕೆ.ಎಲ್.ಆರ್. ೦೧ : ಎಂ.ಎಲ್.ಸಿ. ಅನಿಲ್‌ಕುಮಾರ್ ರವರ ಭಾವಚಿತ್ರ  
ರಾಜ್ಯ

ಕೋಲಾರ ಎಪಿಎಂಸಿಗೆ ೧೦೦ ಎಕೆರೆ ಜಾಗ ಮಂಜೂರಾತಿಗೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರದಲ್ಲಿನ ಟಮೆಟೋ ಮಾರುಕಟ್ಟೆ ಏಷ್ಯಾದಲ್ಲಿ ೨ನೇ ಮಾರುಕಟ್ಟೆಯಾಗಿದೆ. ಸ್ಥಳಾವಕಾಶದ ಕೊರತೆ ಎದುರಾಗಿದೆ. ಕನಿಷ್ಠ ೧೦೦ ಜಾಗ ಮಾರುಕಟ್ಟೆಗೆ ಅವಶ್ಯಕತೆ ಇದೆ. ಸುಮಾರು ವರ್ಷಗಳಿಂದ ಬೇಡಿಕೆಯೂ ಆಗಿದೆ. ಈ ಬಗ್ಗೆ ಹೋರಾಟಗಳು ನಡೆದಿವೆ. ಆದರೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ವಿಧಾನಪರಿಷತ್ತು ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಗುರುವಾರ ವಿಧಾನಪರಿಷತ್ತಿನಲ್ಲಿ ಸರ್ಕಾರದ ಗಮನ ಸೆಳೆದರು.
ಕೋಲಾರ ಮಾರುಕಟ್ಟೆಗೆ ಬರುವ ಟೊಮೆಟೋ ಮತ್ತು ತರಕಾರಿಗಳಿಗೆ ಸ್ಥಳಾವಕಾಶದ ಅಭಾವ ಎದ್ದುಕಾಣುತ್ತಿದೆ. ಪ್ರತಿದಿನ ಅಮಾಲಿಗಳು, ರೈತರು, ವ್ಯಾಪಾರಸ್ಥರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನ ಮಾರುಕಟ್ಟೆಯಲ್ಲಿ ಸೇರುತ್ತಾರೆ. ಜೊತೆಗೆ ತರಕಾರಿ ತುಂಬಿಕೊAಡು ಹೋಗುವ ಲಾರಿಗಳು ನೂರಾರು ಸಂಖ್ಯೆಯಲ್ಲಿ ಬರುತ್ತವೆ. ಸ್ಥಳಾವಕಾಶ ಇಲ್ಲದ ಕಾರಣ ಪ್ರತಿದಿನ ಟ್ರಾಫಿಕ್‌ಜಾಮ್ ಸಮಸ್ಯೆಯಿಂದ ಕಿರಿಕಿರಿ ಉಂಟಾಗುತ್ತಿದೆ.
ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಸಮಸ್ಯೆಗಳು ಉದ್ಭವವಾಗುತ್ತಿವೆ. ಟೊಮೆಟೋ ಧಾರಣೆ ಮತ್ತು ಫಸಲಿನ ಹೊಡೆತಕ್ಕೆ ಸಿಲುಕಿರುವ ರೈತರಿಗೆ ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ಮತ್ತಷ್ಟು ನಲುಗಿಹೋಗಿದ್ದಾರೆ. ಹತ್ತಾರು ಜಿಲ್ಲಾಧಿಕಾರಿಗಳು, ಹಲವಾರು ಅಧಿಕಾರಿಗಳು ಬದಲಾವಣೆಯಾದರು ಜಾಗದ ಸಮಸ್ಯೆ ನಿವಾರಣೆಯಾಗಲಿಲ್ಲ. ಇಂದು ನಾಳೆ ಎನ್ನುತ್ತಲೇ ವರ್ಷಗಳು ಕಳೆದುಹೋಗುತ್ತಿವೆ.
ಕೋಲಾರ ಎಪಿಎಂಸಿಗೆ ೧೦೦ ಎಕರೆ ಜಮೀನಿನ ಅವಶ್ಯಕತೆ ಇದೆ. ಪ್ರಸ್ತುತ ಮಾರುಕಟ್ಟೆ ಜಾಗ ಕಿರಿದಾಗಿದ್ದು, ದಶಕಗಳಿಂದ ಹೋರಾಟಗಳು ನಡೆಯುತ್ತಲಿವೆ. ಆದರೆ ರೈತರ ಹೋರಾಟಗಳಿಗೆ ಪ್ರತಿಫಲ ಸಿಕ್ಕಿಲ್ಲ. ಈ ಹಿಂದೆ ಮಡೇರನಹಳ್ಳಿ ಬಳಿ ಗುರ್ತಿಸಲಾಗಿದ್ದ ೩೬ ಎಕೆರೆ ಜಮೀನು ಕೇಂದ್ರ ಅರಣ್ಯ ಇಲಾಖೆ ತಿರಸ್ಕರಿಸಿತ್ತು. ೬೦ ಎಕರೆ ಜಾಗ ಗುರ್ತಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ.
ಇರುವ ಮಾರುಕಟ್ಟೆ ಜಾಗ ೧೯ ಎಕರೆ ಮಾತ್ರ. ಉಳಿದಿದ್ದು ಸುಗ್ಗಿ ಕಾಲದಲ್ಲಿ ೧೫೦೦ ಕ್ಕೂ ಹೆಚ್ಚು ಲಾರಿಗಳು, ತರಕಾರಿ ಮತ್ತು ಟೊಮೆಟೋಕ್ಕಾಗಿ ಪ್ರತಿದಿನ ಮಾರುಕಟ್ಟೆಗೆ ಬರುತ್ತವೆ. ಅಮಾಲಿಗಳು, ವರ್ತಕರು, ರೈತರು ಸೇರಿ ೫ ಸಾವಿರ ಜನ ವಹಿವಾಟಿನಲ್ಲಿ ಭಾಗವಹಿಸುತ್ತಾರೆ. ಎಪಿಎಂಸಿ ಜಾಗ ಕಿಷ್ಕಿಂದೆಯಾಗಿದ್ದು, ಟೊಮೆಟೋ ಬಾಕ್ಸ್ಗಳನ್ನು ರಸ್ತೆಯ ಮೇಲೆ ಇಟ್ಟು ವಹಿವಾಟು ನಡೆಸುವಂತಹ ಪರಿಸ್ಥಿತಿ ಉಂಟಾಗಿದೆ.
ಮಳೆ ಮತ್ತು ಬಿಸಿಲು ಎಷ್ಟೇ ಸಮಸ್ಯೆ ಇದ್ದರೂ ಟೊಮೆಟೋ ಸಂಜೆಯ ಒಳಗಾಗಿ ಲೋಡ್ ಮಾಡಿ ಕಳುಹಿಸಬೇಕಾಗುತ್ತದೆ. ಟೆಂಪೋ ಲಾರಿ ಮೂಲಕ ಹೊರ ರಾಜ್ಯಗಳಿಗೂ ಇಲ್ಲಿಂದಲೇ ಟೊಮೆಟೋ ರಫ್ತಾಗಬೇಕಾಗಿರುತ್ತದೆ. ಟ್ರಾಫಿಕ್ ಸಮಸ್ಯೆಯಿಂದ ಪ್ರತಿದಿನ ಮಾರುಕಟ್ಟೆಯಲ್ಲಿ ರೈತರು ನಲುಗುವಂತಾಗಿದೆ. ಪಕ್ಕದಲ್ಲಿಯೇ ಬೆಂಗಳೂರು, ಚೆನೈ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿಯೇ ಸರ್ವೀಸ್ ರಸ್ತೆ ಬಂದಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.
ಕೋಲಾರ ಎಪಿಎಂಸಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರ್ಕಾರ ತುರ್ತಾಗಿ ಬಗೆಹರಿಸಿ ಎಪಿಎಂಸಿಗೆ ೧೦೦ ಎಕೆರೆ ಜಾಗವನ್ನು ಗುರ್ತಿಸಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕಂದಾಯ ಸಚಿವ ಕೃಷ್ಣಬೈರೇಗೌಡರನ್ನು ಒತ್ತಾಯಪಡಿಸಿದರು.
ಪರಿಷತ್ತಿನಲ್ಲಿ ಕೃಷ್ಣೇಬೈರೇಗೌಡರು ಇಲ್ಲದೇ ಇದ್ದ ಕಾರಣ ಸಚಿವ ಬೋಸ್‌ರಾಜ್ ಕಂದಾಯ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.