ಕಲಬುರಗಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತ ಮಾಹಿತಿ ತರಬೇತಿ ಶಿಬಿರವನ್ನು ಎಚ್ಕೆಇ ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ ಉದ್ಘಾಟಿಸಿದರು. ಸುರೇಶ ಬಡಿಗೇರ್, ಚಂದ್ರಶೇಖರ ಜಮಾದಾರ್, ಲಕ್ಷಿ$್ಮಕಾಂತ ರಾಕಾ ಇತರರಿದ್ದರು.
- ಎಚ್ಕೆಇ ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ ಅನಿಸಿಕೆ
- ಪಿಡಿಎ ಕಾಲೇಜಿನಲ್ಲಿ ತರಬೇತಿ ಶಿಬಿರ
ಕಲಬುರಗಿ: ಪ್ರತಿಯೊಬ್ಬರೂ ರಾಷ್ಟ್ರಗೀತೆ ಹಾಗೂ ರಾಷ್ಟ್ರ ಧ್ವಜ ಸೇರಿ ರಾಷ್ಟ್ರದ ಲಾಂಛನಗಳಿಗೆ ಗೌರವ ನೀಡುವ ಜತೆಗೆ ಬಳಕೆ ಬಗ್ಗೆ ತಿಳಿದುಕೊಂಡಿರಬೇಕು. ರಾಷ್ಟ್ರಧ್ವಜ ಸಂಹಿತೆ ಅರಿಯುವುದು ಅತ್ಯವಶ್ಯಕ ಎಂದು ಹೈದರಾಬಾದ್ ಕರ್ನಾಟಕ ಶಿಣ ಸಂಸ್ಥೆ ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ ಹೇಳಿದರು.
ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಎಸ್.ವಿ.ಮಲ್ಲಾಪುರ ಯಾಂತ್ರಿಕ ತಂತ್ರಾನ ವಿಭಾಗದಲ್ಲಿ ಭಾರತ ಸೇವಾದಳ ಸಹಯೋಗದಡಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತ ಮಾಹಿತಿ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯಲ್ಲಿ ಅಪಮಾನವಾದರೂ ಅಪರಾಧವೇ. ರಾಷ್ಟ್ರ ಧ್ವಜವನ್ನು ಖಾದಿ ಭಂಡಾರ ಅದರಲ್ಲೂ ಐಎಸ್ಐ ಚಿಹ್ನೆ ಇರುವ, ರ್ನಿದಿಷ್ಟ ಅಳತೆಯದ್ದೇ ಬಳಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಧ್ವಜಗಳನ್ನು ಎಂದೂ ಬಳಸಬಾರದು. ಮಕ್ಕಳಿಗೂ ರಾಷ್ಟ್ರ ಧ್ವಜದ ಮಹತ್ವ ಹಾಗೂ ಆರೋಹಣ ಮತ್ತು ಅವರೋಹಣದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಸೇವಾದಳ ಜಿಲ್ಲಾ ಸಂಟಕ ಚಂದ್ರಶೇಖರ ಜಮಾದಾರ ಧ್ವಜಾರೋಹಣ ಹಾಗೂ ಅವರೋಹಣದ ಬಗ್ಗೆ ಪ್ರಾತ್ಯಕೆ ಮೂಲಕ ಪ್ರತಿಯೊಂದು ಹಂತ, ಧ್ವಜಕ್ಕೆ ಕಟ್ಟುವ ನೂಲಿನ ದಾರ, ಧ್ವಜ ಕಂಬದ ಸುತ್ತಳತೆ, ಧ್ವಜ ರಕರ ಪಾತ್ರ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಸುರೇಶ ಬಡಿಗೇರ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ಲಕ್ಷಿ$್ಮಕಾಂತ ರಾಕಾ, ಉಪ ಪ್ರಾಚಾಯೆರ್ ಡಾ.ಭಾರತಿ ಹರಸೂರ ಇದ್ದರು. ಜಿಲ್ಲಾ ಸಂಟಕ ಚಂದ್ರಶೇಖರ ಜಮಾದಾರ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಆರ್. ಪಾಟೀಲ್ ಸ್ವಾಗತಿಸಿದರು. ಸುಜಾತಾ ಪಾಟೀಲ ನಿರೂಪಣೆ ಮಾಡಿದರು.
ರಾಷ್ಟ್ರ ಗೀತೆ ಹಾಡುವಾಗ ಅನೇಕ ನಿಯಮಗಳಿದ್ದು, ಸ್ಪಷ್ಟ ಮತ್ತು ತಪ್ಪಿಲ್ಲದಂತೆ ಹಾಡಬೇಕು. ರಾಷ್ಟ್ರಧ್ವಜ ಹಾರಿಸಿದ ಸಂದರ್ಭದಲ್ಲಿ ರಾಷ್ಟ್ರಗೀತೆ, ಧ್ವಜಗೀತೆ ಕಡ್ಡಾಯವಾಗಿ ಹಾಡಬೇಕು. ಧ್ವಜಸ್ತಂಭ ರ್ನಿದಿಷ್ಟ ಅಳತೆಯಲ್ಲಿ ಇರಬೇಕೆಂದೇನೂ ಇಲ್ಲ. ಆದರೆ ಧ್ವಜಸ್ತಂಭ ಹಾಗೂ ಧ್ವಜದ ಕಂಬ ಬಿಳಿ ಬಣ್ಣದಿಂದ ಕೂಡಿರಬೇಕು.
ಕಾರ್ಯದರ್ಶಿ, ಹೈಕಶಿ ಸಂಸ್ಥೆ ಕಲಬುರಗಿ