ಬಸವಕಲ್ಯಾಣ ತಾಲೂಕಿನ ಧನ್ನೂರಾ(ಕೆ)ದಲ್ಲಿ ಬುಧವಾರ ಏರ್ಪಡಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಆರ್ಡಿಪಿಆರ್ ಫೆಲ್ಲೋ ಡಾ.ಶ್ರುತಿ ಮಾತನಾಡಿದರು. ಪಿಡಿಒ ರಿಜ್ವಾನ್, ವೀರಾರೆಡ್ಡಿ, ದತ್ತಾತ್ರಿ ಮುರುಡೆ ಇದ್ದರು.
- ಆರ್ಡಿಪಿಆರ್ನ ಡಾ.ಶ್ರುತಿ ಅನಿಸಿಕೆ
- ಧನ್ನೂರಾ(ಕೆ)ದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
ಬಸವಕಲ್ಯಾಣ: ಜ್ಞಾನದ ಭಂಡಾರವಾಗಿರುವ ಅರಿವು ಕೇಂದ್ರಗಳು ಮಕ್ಕಳ ಭವಿಷ್ಯ ರೂಪಿಸಲು ಪೂರಕವಾಗಿವೆ ಎಂದು ಆರ್ಡಿಪಿಆರ್ ಫೆಲ್ಲೋ ಡಾ.ಶ್ರುತಿ ಹೇಳಿದರು.
ಧನ್ನೂರಾ(ಕೆ) ಗ್ರಾಮದ ಅರಿವು ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲು ನಾವೆಲ್ಲ ಸ್ಪರ್ಧಾತ್ಮಕ ಪರೀೆ ಬರೆಯಲು ಪುಸ್ತಕಗಳನ್ನು ಖರೀದಿಸಿ ಓದುವಂತಹ ಸ್ಥಿತಿ ಇತ್ತು. ಆದರೀಗ ಸರ್ಕಾರ ಗ್ರಾಮೀಣ ಮಕ್ಕಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿದೆ. ಬೇಕಾದ ವಿಷಯಗಳ ಬಗ್ಗೆ ಮಾಹಿತಿ ಪಡೆದು ವಿವಿಧ ಸ್ಪರ್ಧಾತ್ಮಕ ಪರೀೆಗೆ ಸಿದ್ಧತೆ ಮಾಡಿಕೊಳ್ಳಬಹುದು ಎಂದರು.
ವಿದ್ಯಾರ್ಥಿಗಳು ಸಮಯ ಮತ್ತು ಸೌಲಭ್ಯ ಬಳಸಿಕೊಂಡು ಶ್ರಮಿಸಿ ಅಭ್ಯಸಿಸಬೇಕು. ಗುರಿ ಮುಟ್ಟುವವರೆಗೂ ಸಾಮಾಜಿಕ ಜಾಲತಾಣಗಳನ್ನು ಅಗತ್ಯಕ್ಕೆ ಅನುಗುಣ ಮಾತ್ರ ಬಳಸಬೇಕು. ವಿನಾಕಾರಣ ಬಳಸಿದರೆ ಶಿಕ್ಷಣದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂದು ತಿಳಿಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಿಡಿಒ ರಿಜ್ವಾನ್ ಮಾತನಾಡಿ, ಮಕ್ಕಳು ಪಾಠದ ಜತೆ ನೈತಿಕ ಮೌಲ್ಯಗಳನ್ನು ಅರಿತರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದರು.
ಗ್ರಾಪಂ ಕಾರ್ಯದರ್ಶಿ ದತ್ತಾತ್ರಿ ಮುರುಡೆ, ಐಇಸಿ ಸಂಯೋಜಕ ವೀರಾರೆಡ್ಡಿ, ಅರಿವು ಕೇಂದ್ರ ಮೇಲ್ವಿಚಾರಕ ಸಂತೋಷ, ಡಿಇಒ ದೀಪಕ, ಕಾಯಕಮಿತ್ರ ಶಾಮಲಾ ಮೇತ್ರೆ ಇತರರಿದ್ದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.