ಪಾದಯಾತ್ರಿಗಳಿಗೆ ಆರೋಗ್ಯ ತಪಾಸಣೆ 
ರಾಜ್ಯ

ಗುಣಮಟ್ಟದ ಸೇವೆ ನೀಡುವುದೇ ಕೆಎಲ್ಇ ಧ್ಯೇಯ

ಪ್ರಮುಖ ಮುಖ್ಯಾಂಶಗಳು

  • ಫಂಡರಪುರ ವಿಠ್ಠಲನ ಭಕ್ತರಿಗೆ ಆರೋಗ್ಯ ತಪಾಸಣೆ
  • ಚಿಕ್ಕೋಡಿ ಕೆಎಲ್ಇ ಆಯುರ್ವೇದಿಕ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ
  • ಮಹಾರಾಷ್ಟ್ರದ ಫಂಡರಪುರ ವಿಠ್ಠಲನ ದರ್ಶನಕ್ಕೆ ತೆರಳುವ ಪಾದಯಾತ್ರಿಗಳು
ಗುಣಮಟ್ಟದ ಆರೋಗ್ಯ ಸೇವೆ ನೀಡುವುದೇ ಕೆಎಲ್‌ಇ ಧ್ಯೇಯ
| ಪ್ರಾಚಾರ್ಯ ಡಾ.ಕಿರಣಕುಮಾರ ಮುತ್ನಾಳಿ | ವಾರಕರಿಗಳಿಗೆ ಉಚಿತ ಆರೋಗ್ಯ ತಪಾಸಣೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವುದೇ ಕೆಎಲ್‌ಇ ಆಸ್ಪತ್ರೆಯ ಧ್ಯೇಯವಾಗಿದೆ ಎಂದು ಕೆಎಲ್‌ಇ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಕಿರಣಕುಮಾರ ಮುತ್ನಾಳಿ ತಿಳಿಸಿದ್ದಾರೆ.
ಪಟ್ಟಣದ ಕೆಎಲ್‌ಐ ಆಯುರ್ವೇದ ಕಾಲೇಜಿನಲ್ಲಿ ಗುರುವಾರ ಗೋವಾದಿಂದ ಪಂಡರಾಪೂರಕ್ಕೆ ದರ್ಶನಕ್ಕಾಗಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ವಾರಕರಿಗಳಿಗಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅವರು ಆಯೋಜಿಸಿದ್ದರು.
ಯಾತ್ರಿಕರ ಆರೋಗ್ಯ ರಕ್ಷಣೆ ಹಾಗೂ ಸುರಕ್ಷಿತ ಪಾದಯಾತ್ರೆಗೆ ನೆರವಾಗಲು ಈ ಶಿಬಿರವು ಕೆಎಲ್‌ಇ ಸಂಸ್ಥೆಯ ಸೇವಾ ಮನೋಭಾವದ ಪ್ರತೀಕವಾಗಿದೆ. ಮುಂದೆಯೂ ಇಂತಹ ಜನಪರ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಆರೋಗ್ಯ ತಪಾಸಣೆ ವೇಳೆ ಮಧುಮೇಹ, ಪ್ರಥಮ ಚಿಕಿತ್ಸೆ, ಆರೋಗ್ಯ ಸಲಹೆ ಹಾಗೂ ಅಗತ್ಯ ವಿತರಣೆ ಪಾದಯಾತ್ರೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಆರೋಗ್ಯ ಮುನ್ನೆಚ್ಚರಿಕೆಗಳನ್ನು ತಿಳಿಸಿದರು.
ಡಾ.ಸಂತೋಷ ಬೆಟಗೇರಿ, ಡಾ.ಜೀವನ ಘಾಡಗೆ, ಡಾ.ಕಾಂಚನ, ಡಾ.ನಿಹಾರಿಕಾ,ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ,ಡಾ.ಬಿ.ಬಿ ದೇಸಾಯಿ, ಡಾ.ಬಾಹುಬಲಿ ಮಹಾಜನ, ಡಾ.ರವಿ ಮಡಿವಾಳರ ಇತರರಿದ್ದರು.