ಪ್ರಾಯೋಗಿಕ ಜ್ಞಾನ ಬೆಳಸಿಕೊಳ್ಳಿ 
ರಾಜ್ಯ

ಪ್ರಾಯೋಗಿಕ ಅಧ್ಯಯನ ಅವಶ್ಯ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಪ್ರಾಯೋಗಿಕ ಜ್ಞಾನ ಮುಖ್ಯ
  • ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಟರನ್ ಶಿಪ್ ಆಯೋಜನೆ
  • ಕೌಶಲ ಬೆಳೆಸಿಕೊಳ್ಳುವಂತೆ ಗಣ್ಯರ ಸಲಹೆ

ಪ್ರಾಯೋಗಿಕ ಅಧ್ಯಯನದಿಂದ ಯಶಸ್ಸು ಸಾಧ್ಯ

| ಪ್ರೊ.ಉಮೇಶ ಹಾದಿಮನಿ ಅಭಿಪ್ರಾಯ | ಟೆಕ್ನೋಸ್ಪಾರ್ಕ ಕಾರ್ಯಕ್ರಮದ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ಉನ್ನತ ಶಿಕ್ಷಣ ಇದ್ದರೆ ಒಳ್ಳೆಯ ಹುದ್ದೆ ಪಡೆದುಕೊಳ್ಳಿಳಲು ಸಹಕಾರಿ . ಕಲಿತ ವಿಷಯಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರೆ ಮಾತ್ರ ಉದ್ಯಮದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಮಹಾಲಿಂಗಪೂರ ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪ್ರೊ.ಉಮೇಶ ಹಾದಿಮನಿ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಮತ್ತು ಮೆಕ್ಯಾನಿಕಲ್ ವಿಭಾಗಗಳ ವತಿಯಿಂದ ಡಿಪ್ಲೋಮಾ ಅಂತೀಮ ವರ್ಷದ ವಿದ್ಯಾರ್ಥಿಗಳಿಗಾಗಿ ಈಚೆಗೆ ಏರ್ಪಡಿಸಿದ್ದ ಟೆಕ್ನೋಸ್ಪಾರ್ಕ ೨೦೨೬, ಇಂಟರ್ನಾಶಿಪ್ ಪ್ರದರ್ಶನ ಹಾಗೂ ತಾಂತ್ರಿಕ ಕ್ವಿಜ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯಕ್ರಮಕ್ಕೆ ಸೀಮಿತವಾಗಬಾರದು. ಪ್ರಾಯೋಗಿಕ ಅಭ್ಯಾಸಕ್ಕೂ ಒತ್ತು. ಪ್ರಾಯೋಗಿಕವಾಗಿ ಇದ್ದಾಗ ಮಾತ್ರ ವಿಷಯದ ಪರಿಪೂರ್ಣ ತಿಳಿಯಲು ಸಾಧ್ಯ ಎಂದು ಆರಂಭಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ.ದರ್ಶನಕುಮಾರ ಬಿಳ್ಳೂರ ಟೆಕ್ನೋಸ್ಪಾರ್ಕ ಇಂಟರ್ನಶಿಪ್ ಇಂತಹ ಕೌಶಲ ಪ್ರದರ್ಶನಕ್ಕೆ ಒಳ್ಳೆಯ ಅವಕಾಶವಿದೆ.ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಸಿ.ಬಿ.ಕೋರೆ ಪಾಲಿಟೆಕ್ನಿಕ್ ಕಾಲೇಜಿನ ಪ್ರೊ.ಮಹೇಂದ್ರ ಕುರಬೇಟ ಮಾತನಾಡಿ ಟೆಕ್ನೋಸ್ಪಾರ್ಕ ಡಿಪ್ಲೋಮಾ ಚೆನ್ನಾಗಿದೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದರು.
ಮೆಕ್ಯಾನಿಕಲ್ ವಿಭಾಗದ ಇಂಟರ್‌ನಶಿಪ್ ಪ್ರದರ್ಶನ ಸ್ಪರ್ಧೆಯಲ್ಲಿ ಅಥರ್ವ ಖರಾಡೆ (ಪ್ರಥಮ),ವಿಶ್ವೇಶ್ವರ ಎಚ್(ದ್ವಿತೀಯ) ಸಿದ್ದಪ್ಪ ದಾಮನ್ನವರ (ತೃತೀಯ), ತಾಂತ್ರಿಕ ಕ್ವಿಜ್ ಸ್ಪರ್ಧೆಯಲ್ಲಿ ವೆಂಕಟೇಶ ಗರಿ ತಂಡ (ಪ್ರಥಮ)ದರ್ಶನ ಬಿ.ಎಚ್ (ದ್ವಿತೀಯ) ಮಂಜುನಾಥ ಅಂಕೋಶಿ ಹಾಗೂ ರಮೇಶ ರೊಡ್ಡನ್ನವರ ತಂಡ (ತೃತೀಯ), ಸಿವಿಲ್ ವಿಭಾಗದ ಇಂಟರ್ನಶಿಪ್ ಸ್ಪರ್ಧೆಯಲ್ಲಿ ಮದಿಹಾಳ ಹುಣಸಿಕಟ್ಟಿ (ಪ್ರಥಮ)ಶಿವಾನಂದ ಗದ್ಯಾಳ ಹಾಗೂ ಮಹೇಶದವರ ತಳವಾದ (ದ್ವಿತೀಯ) ಸಂಜನಾ ಗುಜ್ಜರ ಹಾಗೂ ಸುದರ್ಶನ ಕಿರಣಗಿ (ತೃತೀಯ), ತಾಂತ್ರಿಕ ಕ್ವಿಜ್ ಸ್ಪರ್ಧೆಯಲ್ಲಿ ವಿವೇಕ ಮಲ್ಪಾನಿ ​​(ಪ್ರಥಮ)ರಕ್ಷಿತಾ ತವಂಶಿ ಹಾಗೂ ಸಂಜನಾ ಗುಜ್ಜರ (ದ್ವಿತೀಯ) ಮಹೇಶ್ವರ ತಳವಾರ ಹಾಗೂ ಮದಿಹಾ ಹುಣಸಿಕಟ್ಟಿ (ತೃತೀಯ)ಸ್ಥಾನ ಗಳಿಸಿದ್ದಾರೆ.
ಡಾ.ಕುಮಾರ ಚೌಗಲಾ,ಡಾ.ಮಹೇಶ ಲಟ್ಟೆ, ಪ್ರೊ.ಪ್ರಸಾದ ರಾಯಣ್ಣವರ, ಪ್ರೊ.ರಾಜೇಂದ್ರ ಕೆರುಮಾಳಿ,ನಿಶಾಂತ ಭೋಜಿ, ಡಾ.ಲಕ್ಷ್ಮಣ ಅಂಬಿ, ಪ್ರೊ.ವಿವೇಕ ಪಾಟೀಲ, ಪ್ರೊ.ಸುಶಿಲಕುಮಾರ ಭಗಾಟೆ, ಪ್ರೊ.ಶಂಕರಗೌಡ ಪಾಟೀಲ, ಪ್ರೊ.ವಿನಯ ಮನಗೂಳೆ, ಪ್ರೊ.ಬಾಳಪ್ಪ ನವಲಾಯಿ, ಪ್ರೊ.ವಿದ್ಯಾ ಅಂಗಡಿ, ಡಾ.ಸಚಿನ ಮೆಕ್ಕಳಕಿ ಇತರರಿದ್ದರು.