ಬೆಳಗಾವಿ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಆವರಣದಲ್ಲಿ ಬುಧವಾರ ಉಚಿತ ಬೋನ್ ಮಿನರಲ್ ಡೆನ್ಸಿಟಿ(ಬಿಎಂಡಿ) ಆರೋಗ್ಯ ತಪಾಸಣೆ ಶಿಬಿರ ಜರುಗಿತು. ನವೀನ್ ಎನ್., ಡಾ.ವಿಜಯಕುಮಾರ ಮುರಕಿಭಾವಿ, ಡಾ.ಸಿ.ವಿ.ಶೆಟ್ಟರ, ಡಾ.ಆನಂದಕುಮಾರ ಖಟಾವಿ, ಡಾ.ಪೂಜಾ ಬರನವಾಲ ಇತರರಿದ್ದರು.
ಬೆಳಗಾವಿ: ನಿಯಮಿತ ಆರೋಗ್ಯ ತಪಾಸಣೆ ಶಿಬಿರ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಮೂಲಕ ಆರೋಗ್ಯ ಸೇವೆ ಉತ್ತೇಜಿಸಲು ಆಸ್ಪತ್ರೆ ಸದಾ ಬದ್ಧವಾಗಿದೆ ಎಂದು ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎನ್. ಹೇಳಿದರು.
ಯಳ್ಳೂರ ರಸ್ತೆಯಲ್ಲಿರುವ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಬೋನ್ ಮಿನರಲ್ ಡೆನ್ಸಿಟಿ(ಬಿಎಂಡಿ) ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ವಿಶೇಷವಾಗಿ ಹಿರಿಯ ನಾಗರಿಕರು ಹಾಗೂ ಮಹಿಳೆಯರು ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಸಮಯಕ್ಕೆ ಸರಿಯಾಗಿ ಬಿಎಂಡಿ ಪರೀೆ ಮಾಡಿಸಿಕೊಳ್ಳುವ ಮೂಲಕ ಆಸ್ಟಿಯೋಪೋರೋಸಿಸ್ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ತಡೆಗಟ್ಟಬೇಕು ಎಂದು ಹೇಳಿದರು.
ಯುಎಸ್ಎಂ&ಕೆಎಲ್ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಹಾಗೂ ಆಸ್ಪತ್ರೆ ವೈದ್ಯಕಿಯ ಅಧೀಕ್ಷಕ ಡಾ.ಸಂಜಯ ಕಂಬಾರ ಅವರು ಆರೋಗ್ಯ ಶಿಬಿರ ಆಯೋಜಿಸಿರುವುದನ್ನು ಶ್ಲಾಸಿದರು.
ಎಲುಬು ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ.ವಿಜಯಕುಮಾರ ಮುರಕಿಭಾವಿ, ಹಿರಿಯ ಎಲುಬು ಮತ್ತು ಕೀಲು ವಿಭಾಗದ ತ ಡಾ.ಸಿ.ವಿ.ಶೆಟ್ಟರ, ಡಾ.ಆನಂದಕುಮಾರ ಖಟಾವಿ, ಡಾ. ಪೂಜಾ ಬರನವಾಲ ಇತರರಿದ್ದರು.