ೂಡಗೇರಿ ಗ್ರಾಮದ ಶಿವಾನಂದ ಮಠದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಉಚಿತ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಜಯಾನಂದ ಮುನವಳ್ಳಿ, ಮಲ್ಲಯ್ಯ ಸ್ವಾಮೀಜಿ, ಡಾ.ಧರೆಪ್ಪ ಚೌಗಲಾ, ಡಾ.ಶುಭಂ ಹುಕ್ಕೇರಿ ಇತರರಿದ್ದರು. 
ರಾಜ್ಯ

ಕೆಎಲ್​ಇ ಹಾಸ್ಪಿಟಲ್​ ಬಡವರಿಗೆ ಸಹಕಾರಿ

ವಿಜಯವಾಣಿ ಸುದ್ದಿಜಾಲ ಗೋಕಾಕ
ಕೆಎಲ್​ಇ ಆಸ್ಪತ್ರೆ ದೇಶದಲ್ಲೇ ಅತಿ ದೊಡ್ಡ ಆಸ್ಪತ್ರೆಯಾಗಿ ಬೆಳೆದಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದು ಆರೋಗ್ಯವಂತರಾಗಬೇಕು ಎಂದು ಕೆಎಲ್​ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ೂಡಗೇರಿ ಗ್ರಾಮದ ಶಿವಾನಂದ ಮಠದಲ್ಲಿ ಕೆಎಲ್​ಇ ಸಂಸ್ಥೆಯ ಆಸ್ಪತ್ರೆ ಐಸಿಯು ಗೋಕಾಕ ಹಾಗೂ ಮಲ್ಲಯ್ಯ ಸ್ವಾಮೀಜಿ ೂಡಗೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಉಚಿತ ಶಿಬಿರದಲ್ಲಿ ಮಾತನಾಡಿ, ಆರೋಗ್ಯ ಸೇವೆ ಇಂದು ದೇಶದಲ್ಲಿ ದೊಡ್ಡ ವ್ಯಾಪಾರವಾಗಿದ್ದು, ಇದು ದು@ಖದ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಕೆಎಲ್​ಇ ಆಸ್ಪತ್ರೆ ಬಡವರ ಪರವಾಗಿ ನಿಂತು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಗಿಡ ಮರಗಳನ್ನು ಬೆಳೆಸಿ ಪರಿಸರ ಸಂರಸಬೇಕು ಅಂದಾಗ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದರು.
ಮಲ್ಲಯ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಆಧುನಿಕ ಕಾಲದಲ್ಲಿ ಆರೋಗ್ಯ ಸೇವೆ ದುಬಾರಿಯಾಗಿದ್ದು, ಗೋಕಾಕ ಆಸ್ಪತ್ರೆಯಲ್ಲಿ ಅನುಭವಿ ವೆದ್ಯರ ತಂಡ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಇವರ ಸೇವೆ ಸದುಪಯೋಗ ಪಡೆಯಬೇಕು ಎಂದರು.
ಡಾ.ಧರೆಪ್ಪ ಚೌಗಲಾ, ಡಾ.ಶುಭಂ ಹುಕ್ಕೇರಿ, ಡಾ.ಅರುಣ ವಣ್ಣೂರ, ಡಾ.ಜ್ಯೋತಿ ಚೌಗಲಾ, ಡಾ.ಅಂಜನಾಬಾಯಿ ಓಸೇಕರ, ರೋಟರಿ ಸಂಸ್ಥೆಯ ಸೋಮಶೇಖರ ಮಗದುಮ್ಮ ಇತರರಿದ್ದರು.