B Y Vijayendra 
ರಾಜ್ಯ

ಬಳ್ಳಾರಿ ಬ್ಯಾನರ್​​ ಗಲಾಟೆ: ನಿಮಗೆ ತಾಕತ್ತು ಇದ್ರೆ ಭರತ್​ ರೆಡ್ಡಿಯನ್ನು ಒದ್ದು ಒಳಗೆ ಹಾಕಿ: ಬಿ.ವೈ.ವಿಜಯೇಂದ್ರ

ಬಳ್ಳಾರಿ: ನಿಮಗೆ ತಾಕತ್ತು ಇದ್ದರೆ ಮೊದಲು ನಿಮ್ಮ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಒದ್ದು ಒಳಗೆ ಹಾಕಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದರು.
ಬಳ್ಳಾರಿಯಲ್ಲಿ ಬ್ಯಾನರ್​ ವಿಚಾರಕ್ಕೆ ಜ.1ರಂದು ರಾತ್ರಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಬ್ಯಾನರ್ ವಿಚಾರದಲ್ಲಿ ಗಲಾಟೆ ಧೋಂಬಿ ಎಬ್ಬಿಸಿದ್ದಾರೆ. ಗೂಂಡಾಗಳು ಕಾರ್ಯಕರ್ತರನ್ನ ಕರೆದುಕೊಂಡು ಬಂದು ಕಲ್ಲು ಎಸೆದಿದ್ದಾರೆ‌. ಸತೀಶ್ ರೆಡ್ಡಿ ಎನ್ನುವ ವ್ಯಕ್ತಿಯ ಖಾಸಗಿ ಗನ್ ಮ್ಯಾನ್ ಫೈಯರ್ ಮಾಡಿಸಿದ್ದಾನೆ. ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ವಾಲ್ಮೀಕಿ ಅವರಿಗೆ ಮಹತ್ವ ಕೊಡಲು ನಮ್ಮ ಹಿಂದಿನ ಸಿಎಂ ಯಡಿಯೂರಪ್ಪ ಅವರನ್ನು ಮನವೊಲಿಸಿ, ಶ್ರೀರಾಮುಲು ವಾಲ್ಮಿಕಿ ಜಯಂತಿ ಮಾಡಿಸಿದರು. ಬಳ್ಳಾರಿಯಲ್ಲೂ ಜನಾರ್ದನ ರೆಡ್ಡಿ - ರಾಮುಲು ಅವರು ಈಗಾಗಲೇ ವಾಲ್ಮಿಕಿ ಪುತ್ತಳಿ ಇಟ್ಟಿಸಿದ್ದಾರೆ.ಆದರೂ ಈಗ ರಾಜಕೀಯ ತೆವಲಿಗೆ ಬ್ಯಾನರ್ ಪೋಸ್ಟ್ ಹಾಕಿಸಿ ಗಲಾಟೆ ಮಾಡಿದ್ದಾರೆ ಎಂದರು. 
ಸಿಎಂ ಹಾಗೂ ಗೃಹಸಚಿವರು ದ್ವೇಶ ಭಾಷಣ ಕಾಯ್ದೆ ತರಲು ಯೊಚನೆ ಮಾಡ್ತೀರಿ. ಮೊದಲು ನಿಮ್ಮ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಮೊದಲು ಒದ್ದು ಒಳಗೆ ಹಾಕಿ. ನಮ್ಮ ಮುಖಂಡರು ಇವತ್ತು ತನಿಖೆಗೆ ಆಗ್ರಹ ಮಾಡಿದ್ದಾರೆ. ಮುಂದೆ ಮತ್ತೆ ಈ ರೀತಿ ಆಗಬಾರದು ಅನ್ನೋದು ಆದ್ರೇ ಮೊದಲು ಸಿಟ್ಟಿಂಗ್ ಹೈಕೋರ್ಟ್ ಜಡ್ಸ್ ಮೂಲಕ ಸರಿಯಾದ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.(ಏಜೆನ್ಸೀಸ್​).