ತಾಳಿಕೋಟೆ ಪಟ್ಟಣದ ನಿಜಗುಣ ಶಿವಯೋಗಿಗಳ ಆನಂದಾಶ್ರಮದಲ್ಲಿ ಶಾಸ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗುರು ಪೂರ್ಣಿಮಾ ಮಹೋತ್ಸವದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ ಅವರನ್ನು ಸನ್ಮಾನಿಸಲಾಯಿತು. ಪರಶುರಾಮ ಚೌಕೇರ, ಎಸ್.ಎಂ. ಬೇನಾಳಮಠ, ಶಕುಂತಲಾ ಹಿರೇಮಠ, ಉಮಾ ವಾರಿ ಇತರರಿದ್ದರು. 
ರಾಜ್ಯ

ಖಾಸ್ಗತೇಶ್ವರರ ಗುರುಭಕ್ತಿ ದೇವ ಒಲುಮೆಗೆ ಪಾತ್ರ

ಪ್ರಮುಖ ಮುಖ್ಯಾಂಶಗಳು

  • ಶ್ರೀಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ ಹೇಳಿಕೆ
  • ಗುರು ಪೂರ್ಣಿಮಾ ಕಾರ್ಯಕ್ರಮ ಆಯೋಜನೆ
ತಾಳಿಕೋಟೆ : ‘ಗುರುವಿನ ಗುಲಾಮನಾಗಿರುವ ತನಕ ದೊರೆಯದಣ್ಣ ಮುಕುತಿ’ ಎಂಬಂತೆ ಗುರುವಾದವನು ಗುರುವಿನ ಸ್ಥಾನಮಾನದಂತೆ ಶಿಷ್ಯನಿಗೆ ಬೋಧಿಸುವಂತಿರಬೇಕು. ಶಿಷ್ಯನಾದವರು ಗುರು ಬೋಧನೆಯನ್ನು ಅನುಸರಿಸುತ್ತಾ ಸಾಗಿದರೆ ಮೋಕ್ಷದ ಮಾರ್ಗವೆಂಬುದು ದೊರೆಯಲಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ. ಮುರುಘೇಶ ವಿರಕ್ತಮಠ ನುಡಿದರು.
ಪಟ್ಟಣದ ನಿಜಗುಣ ಶಿವಯೋಗಿಗಳ ಆನಂದಾಶ್ರಮದಲ್ಲಿ ಬುಧವಾರ ಶಾಸ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶ್ರೀ ಖಾಸ್ಗತ ಶಿವಯೋಗಿಗಳ ಗುರುಗಳಾದ ಹುಬ್ಬಳ್ಳಿಯ ಸಿದ್ಧಾರೂಢ ಶ್ರೀಗಳಿಂದ ಜ್ಞಾನ ಸಂಪತ್ತೆಂಬುದನ್ನು ಪಡೆದುಕೊಂಡರು. ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಭಕ್ತರ ಅಪೇಕ್ಷೆಯಂತೆ ಆಗಮಿಸಿ ಜನೋದ್ಧಾರ ಹಾಗೂ ಭಕ್ತೊದ್ಧಾರಗೈದರಲ್ಲದೇ ಅವರಲ್ಲಿರತಕ್ಕಂತಹ ಗುರುಭಕ್ತಿ ದೇವನ ಒಲುಮೆಗೆ ಪಾತ್ರವಾಗಿತ್ತು ಎಂದರು.
ಉಪನ್ಯಾಸಕ ಪರಶುರಾಮ ಚೌಕೇರ ಮಾತನಾಡಿ, ಅಧ್ಯಾತ್ಮದ ಗುರುವಾಗಿದ್ದ ವ್ಯಾಸ ಮಹಾ ಋಷಿಗಳನ್ನು ನೆನಪಿಸುವಂತಹ ದಿನವೇ ಗುರು ಪೂರ್ಣಿಮೆಯಾಗಿದೆ. ಗುರುವಿನ ಕೃಪಾ ಬಿತ್ತಿಯೆಂಬುದು ಎಲ್ಲರ ಮೇಲೆ ಹರಿಯಬೇಕಿದೆ ಎಂದು ಹೇಳಿದರು.
ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಅಧ್ಯಕ್ಷ ಎಸ್.ಎಂ. ಬೇನಾಳಮಠ ಮಾತನಾಡಿ, ಗುರುವಿಗೆ ಕೊಟ್ಟಂತಹ ಮಾತನ್ನು ಪಾಲಿಸಿದಂತಹ ಭಕ್ತರ ಕುರಿತು ಶಿವಲಿಂಗ ಶ್ರೀಗಳ ಕುರಿತು ತಿಳಿ ಹೇಳುತ್ತಾ ಗುರುಶಕ್ತಿಯೆಂಬುದು ದೊಡ್ಡದಾಗಿ ರುತ್ತದೆ. ಗುರು ಮೋಕ್ಷವನ್ನು ಕೊಡುತ್ತಾನೆ. ಭಕ್ತಿ, ಜ್ಞಾನ ಶಕ್ತಿ ಪಡೆಯಬೇಕಾದರೆ ಮೋಕ್ಷದ ದಾರಿಗೆ ಹೋಗಬೇಕಾದರೆ ಶಾಸ ಪ್ರವಚನವನ್ನು ಆಲಿಸಿ, ಪಾಲಿಸಬೇಕಾಗುತ್ತದೆ ಎಂದರು.
ಶಕುಂತಲಾ ಹಿರೇಮಠ, ಉಮಾ ವಾರಿ, ಹೇಮಾ ದುರ್ಗದಮಠ, ಡಾ. ಅರಮನಿ ಅಕ್ಕನವರು, ಕ್ವಾಟಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಕೋರವಾರ ಚೌಕೀಮಠದ ಶ್ರೀಗಳು ಆಶೀರ್ವಚನವಿತ್ತರು.