Bhimanna ದೇವನಹಳ್ಳಿ ತಾಲೂಕು ವೀರಶೈವ ಸಮಾಜದ ಸಂದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಭೀಮಣ್ಣ ಖಂಡ್ರೆ ಶ್ರದ್ಧಾಂಜಲಿ ಸಭೆಯಲ್ಲಿ ದೇವನಹಳ್ಳಿ ತಾಲೂಕು ವೀರಶೈವ ಸಮಾಜದ ಸಂದ ಪ್ರಧಾನ ಕಾರ್ಯದರ್ಶಿ ವಿಜಯ್​ ಕುಮಾರ್​, ನಿರ್ದೇಶಕ ಮಲ್ಲಿಕಾರ್ಜುನ ಇದ್ದರು. 
ರಾಜ್ಯ

ಲಿಂಗಾಯತ ಸಮುದಾಯಕ್ಕೆ ಖಂಡ್ರೆ ಕೊಡುಗೆ ಅಪಾರ Bhimanna

ದೇವನಹಳ್ಳಿ: ಬೆಂಗಳೂರಿನಲ್ಲಿ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಕಟ್ಟಡವನ್ನು ಕಟ್ಟಿ ಪ್ರತಿ Bhimanna ಹಳ್ಳಿಗೂ ತೆರಳಿ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿ ವೀರಶೈವ ಸಮುದಾಯಕ್ಕೆ ಗಟ್ಟಿನೆಲೆಯಾಗಿ ನಿಂತ ಹಿರಿಯ ಮತ್ಸದಿ ಭೀಮಣ್ಣ ಖಂಡ್ರೆ ಅವರ ನಿಧನದಿಂದ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ದೇವನಹಳ್ಳಿ ತಾಲೂಕು ವೀರಶೈವ ಸಮಾಜದ ಸಂದ ಅಧ್ಯ ಎಂ.ಎಸ್​.ರಮೇಶ್​ ತಿಳಿಸಿದರು.
ಪಟ್ಟಣದ ದೇವನಹಳ್ಳಿ ತಾಲೂಕು ವೀರಶೈವ ಸಮಾಜದ ಸಂದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಜನಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ಭೀಮಣ್ಣ ಅವರು ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ, ಭಾಲ್ಕಿ ಮಠದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ನಾಂದಿ ಹಾಡಿದ್ದರು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಸ್​.ವಿರೂಪಾಯ್ಯ ಮಾತನಾಡಿ, ಸಹಕಾರಿ ಧುರೀಣರಾಗಿ ಮತ್ತು ರೈತರ ಕಲ್ಯಾಣದ ಕುರಿತು ಕಳಕಳಿ ಹೊಂದಿದ್ದ ಬೀದರ್​ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಣಜಿಯಲ್ಲಿರುವ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯ ಸ್ಥಾಪಕ ಅಧ್ಯರಾಗಿಯೂ ಸೇವೆ ಸಲ್ಲಿಸಿದ್ದರು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಶಾಂತಮೂರ್ತಿ, ಶಿವಪ್ರಸಾದ್​, ದಣಮೂರ್ತಿ, ತಾಲೂಕು ಯುವ ಟಕದ ಅಧ್ಯ ಚಿದಂಬರ, ಮುಖಂಡರಾದ ವೀರಭದ್ರಪ್ಪ, ಎಂ.ಎಸ್​.ಉಮೇಶ್​, ಕಾಂತರಾಜು, ಮಮತಾ ಇದ್ದರು.