Khaki collar for those who go to jail but don't learn their lesson 
ರಾಜ್ಯ

ಜೈಲು ಸೇರಿದರೂ ಬುದ್ಧಿ ಕಲಿಯದವರಿಗೆ ಖಾಕಿ ಕೋಳ

ಚಿಂತಾಮಣಿ: ನಗರದ ಜನನಿಬಿಡ ಪ್ರದೇಶದಲ್ಲಿ ಯುವಕನಿಗೆ ಚಾಕು ತೋರಿಸಿ 5 ಸಾವಿರ ರೂ. ಸುಲಿಗೆ ಮಾಡಿದ್ದ ಇಬ್ಬರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಜೆ.ಜೆ.ಕಾಲನಿ ನಿವಾಸಿ ವಿಶ್ವನಾಥ್​ (21), ನಗರ ಹೊರ ವಲಯದ ಕರಿಯಪ್ಪಲ್ಲಿ ಗ್ರಾಮದ ***ಬನ್ನಿ (23) ಬಂಧಿತರು. ಇಬ್ಬರು 2 ತಿಂಗಳ ಹಿಂದೆ ಇದೇ ಕೃತ್ಯ ಮಾಡಿ ಜೈಲು ಸೇರಿ ಬೇಲ್​ ಮೇಲೆ ಹೊರಬಂದಿದ್ದರು. ಪುನ@ ಮತ್ತದೆ ಚಾಳಿ ಮುಂದುವರಿಸಿದ್ದರು.
ಪ್ರಕರಣ ಹಿನ್ನೆಲೆ: ಆರೋಪಿಗಳಿಬ್ಬರು 2026ರ ಫೆಬ್ರವರಿ 12ರಂದು ಮಧ್ಯಾಹ್ನನಗರದ ಬೆಂಗಳೂರು ಜೋಡಿ ರಸ್ತೆಯ ಅಂಜನಿ ಚಿತ್ರ ಮಂದಿರದ ಬಳಿ ಎಳನೀರು ತೆಗೆದುಕೊಳ್ಳುತ್ತಿದ್ದ ನಗರದ ಪ್ರಭಾಕರ್​ ಬಡಾವಣೆಯ ನಿವಾಸಿ ಕೃಷ್ಣಮೂರ್ತಿ (72) ಎಂಬುವರ ಕೈಯಲ್ಲಿದ್ದ ವಾಚ್​ನ ಪಿನ್​ ಸರಿ ಮಾಡಿಕೊಡುತ್ತೇವೆ ಎಂದು ಹೇಳಿ ಒಬ್ಬ ವಾಚ್​ ಪಡೆದುಕೊಂಡರೆ, ಅಲ್ಲಿಯೇ ಇದ್ದ ಮತ್ತೊಬ್ಬ ಯಾರಿಗೋ ೋನ್​ ಮಾಡಬೇಕು ಎಂದು ಹೇಳಿ ಮೊಬೈಲ್​ ಪಡೆದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಗರಠಾಣೆ ಪೊಲೀಸರು ವಿಶ್ವನಾಥ್​ ಎಂಬಾತನನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದರು.
ಮತ್ತೆ ಸುಲಿಗೆಗೆ ಇಳಿದರು: 2026ರ ಮೇ 15ರಂದು ಚಿಂತಾಮಣಿ ಹಳೇ ಸಿವಿಲ್​ ಬಸ್​ ನಿಲ್ದಾಣದ ರಸ್ತೆಯಲ್ಲಿರುವ ಗುರುಭವನದ ಮುಂಭಾಗದ ರಸ್ತೆಯಲ್ಲಿ ನಿಂತುಕೊಂಡಿದ್ದ ಆರೋಪಿಗಳು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ನಿವಾಸಿ ಹೇಮಂತ್​ ಕುಮಾರ್​ (27) ಅವರನ್ನು ತಡೆದು, ನನ್ನ ತಮ್ಮನಿಗೆ ಚಾಕುವಿನಿಂದ ತಿವಿದು 24 ಸಾವಿರ ರೂ. ಕಿತ್ತುಕೊಂಡಿದ್ದಿಯಾ. ತಮ್ಮನ ಬಳಿ ನಿನ್ನ ೋಟೋ ಇದೆಯೆಂದು ಬೆದರಿಸಿ, ಬೈಕ್​ನಲ್ಲಿ ನಗರದ ಚೇಳೂರು ರಸ್ತೆಯ ರೈಲ್ವೆ ಗೇಟ್​ನಿಂದ ಸಮೀಪದ ರ್ನಿಜನ ಪ್ರದೇಶದಲ್ಲಿರುವ ಇಟ್ಟಿಗೆ ್ಯಾಕ್ಟರಿ ಬಳಿಗೆ ಕರೆದೊಯ್ದು ಅಲ್ಲಿದ್ದ ಇತರ ನಾಲ್ವರು ಸೇರಿ ಮಾರಕಾಸ್ತ್ರ ತೋರಿಸಿ 5 ಸಾವಿರ ರೂ. ೋನ್​ಪೇ ಮಾಡಿಸಿಕೊಂಡಿದ್ದರು. ಹೇಮಂತ್​ ಕುಮಾರ್​ ಪ್ರಕರಣ ದಾಖಲಿಸಿದ್ದು, ನಗರಠಾಣೆ ಪೊಲೀಸರು ೋನ್​ ಪೇ ಮಾಡಿದ್ದ ಬ್ಯಾಂಕ್​ ಖಾತೆದಾರನನ್ನು ಪತ್ತೆ ಹಚ್ಚಿ, ಅವರ ಮೂಲಕ ಇಬ್ಬರನ್ನು ಬಂಧಿಸಿದ್ದಾರೆ. ಇವರೊಟ್ಟಿಗೆ ಇದ್ದ ಇನ್ನು ನಾಲ್ವರ ಸೆರೆಗೆ ಬಲೆ ಬೀಸಿದ್ದಾರೆ.