ಬಂಧನ 
ರಾಜ್ಯ

ಕೇರಳಂ ಲಾಟರಿ ಮಾರುತ್ತಿದ್ದವನ ಬಂಧನ

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ ಬಸ್ ನಿಲ್ದಾಣ
  • ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್
ಗುಂಡ್ಲುಪೇಟೆ: ಕೇರಳಂ ಲಾಟರಿ ಮಾರಾಟ ಮಾಡುತ್ತಿದ್ದವನನ್ನು ಪಟ್ಟಣ ಪೊಲೀಸರು ಮಾಲು ಸಮೇತ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ಕೇರಳಂ ಲಾಟರಿ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಹಂಗಳ ಗ್ರಾಮದ ಸಿದ್ದರಾಜು ಎಂಬಾತನಿಂದ 85 ಸಾವಿರ ರೂ. ಮೌಲ್ಯದ 1700 ಟಿಕೆಟ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮಣಿ, ನಟೇಶ್ ಭಾಗಿಯಾಗಿದ್ದರು.