ದೇವರಹಿಪ್ಪರಗಿ ಶ್ರೀ ಸಿದ್ಧೇಶ್ವರ ಪ್ರೌಢಶಾಲಾ ಸಭಾಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿಂಗಣ್ಣ ಬಿರಾದಾರ, ವಿ.ಜಿ. ಹೂನಳ್ಳಿ, ವಿ.ಕೆ. ಪಾಟೀಲ ಇತರರಿದ್ದರು. 
ರಾಜ್ಯ

ಕೆಂಪೇಗೌಡರು ನಾಡಿಗೆ ಮಾದರಿ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ನಿಂಗಣ್ಣ ಬಿರಾದಾರ ಹೇಳಿಕೆ
  • ಜಯಂತ್ಯುತ್ಸವ
ದೇವರಹಿಪ್ಪರಗಿ : ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆಡಳಿತದ ದೂರದೃಷ್ಟಿ ಅತ್ಯಂತ ಉತ್ಕೃಷ್ಠವಾಗಿದ್ದು, ನಾಡಿಗೆ ಮಾದರಿಯಾಗಿದ್ದರು ಎಂದು ತಹಸೀಲ್ದಾರ್ ನಿಂಗಣ್ಣ ಬಿರಾದಾರ ಹೇಳಿದರು.

ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರೌಢಶಾಲಾ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಪಾರಿತೋಷಕ ಬಹುಮಾನ ವಿತರಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಶ್ರೇಷ್ಠ ಆಡಳಿತಗಾರರಾಗಿದ್ದರು. ದೂರದೃಷ್ಟಿ ಹೊಂದಿದ್ದ ಅವರು, ಬೆಂಗಳೂರನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ವಿದ್ಯಾರ್ಥಿಗಳಲ್ಲಿ ಅವರ ಕುರಿತು ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಜಯಂತ್ಯುತ್ಸವದ ಅಂಗವಾಗಿ ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ, ಆಶುಭಾಷಣ, ರಸಪ್ರಶ್ನೆ, ಕವನ ವಾಚನ, ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಮಾಣ ಪತ್ರಗಳೊಂದಿಗೆ ಪಾಠೋಪಕರಣಗಳನ್ನು ವಿತರಿಸಿ, ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.

ಎ.ಬಿ. ಸಾಲಕ್ಕಿ ಕಾಲೇಜಿನ ಪ್ರಾಚಾರ್ಯ ವಿ.ಜಿ. ಹೂನಳ್ಳಿ, ಸಿದ್ಧೇಶ್ವರ ಪ್ರೌಢಶಾಲೆ ಮುಖ್ಯಸ್ಥ ವಿ.ಕೆ. ಪಾಟೀಲ, ಮುಳಸಾವಳಗಿ ಪ್ರೌಢಶಾಲೆ ಮುಖ್ಯಗುರು ಈರಣ್ಣ ನರೂಣಿ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಪ್ರಥಮ ದರ್ಜೆ ಸಹಾಯಕ ಕುಮಾರ ಅವರಾದಿ, ಚನ್ನು ಹೊಸಮನಿ, ಬಮ್ಮನಜೋಗಿ ಶಾಲೆ ಮುಖ್ಯಗುರು ಕೆ.ಎನ್. ಭಜಂತ್ರಿ, ವಿಜಯಲಕ್ಷ್ಮೀ ನವಲಿ, ಮಾಜಿ ಕಸಾಪ ಅಧ್ಯಕ್ಷ ಜಿ.ಪಿ. ಬಿರಾದಾರ ಮತ್ತಿತರರಿದ್ದರು.