ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಶಸ್ವಿ 18 ವರ್ಷಗಳ ಸೇವೆ ಪೂರೈಸಿದ್ದರಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ಇಲಾಖೆಯು ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ದತಿ ಮೊಹರು "ವಿಶೇಷ ಅಂಚೆ ಲಕೋಟೆ' ಹಾಗೂ "ಅಂಚೆ ಕಾರ್ಡ್' ಬಿಡುಗಡೆಗೊಳಿಸಿದರು. ಕೆಐಎಎಲ್ ವ್ಯವಸ್ಥಾಪಕ ನಿರ್ದೇಶಕಹರಿಮರಾರೆ, ಭಾರತೀಯ ಅಂಚೆ ಇಲಾಖೆ ಬೆಂಗಳೂರು ಕೇಂದ್ರ ಕಚೇರಿ ನಿರ್ದೇಶಕಿ ವಿ.ತಾರಾ, ಯೋಜನೆ ರೂವಾರಿ ದಿನೇಶ್ ಜೋಸ್ೆ ಇತರರು ಇದ್ದರು.
ದೇವನಹಳ್ಳಿ : ರಾಜ್ಯ ಮತ್ತು ರಾಷ್ಟ್ರದ ಸಾಂಸತಿಕ, ನಾವೀನ್ಯತೆ ಹಾಗೂ ಆಧುನಿಕ ವಿನ್ಯಾಸದ ಪ್ರತಿಬಿಂಬದ ಸಂಕೇತವಾಗಿರುವ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಹೆಗ್ಗುರುತನ್ನು ಶಾಶ್ವತವಾಗಿ ಸ್ಮರಿಸುವ ಉದ್ದೇಶದಿಂದ ಈ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಅಧಿಕಾರಿ ಹರಿಮರಾರೆ ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಶಸ್ವಿ 18 ವರ್ಷಗಳ ಸೇವೆ ಪೂರೈಸಿದ್ದಕ್ಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ಇಲಾಖೆಯು ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ದತಿ ಮೊಹರು "ವಿಶೇಷ ಅಂಚೆ ಲಕೋಟೆ' ಹಾಗೂ "ಅಂಚೆ ಕಾರ್ಡ್' ಬಿಡುಗಡೆಗೊಳಿಸಿ ಮಾತನಾಡಿದರು.
ನಗರದ ಬೆಳವಣಿಗೆಯ ಪಯಣದೊಂದಿಗೆ ನಮ್ಮ ಪಯಣವನ್ನೂ ನೆನಪಿಸಿಕೊಳ್ಳುವ ಮಧುರ ಕ್ಷಣವಾಗಿದೆ. 2008ರಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವಾಗಿ ಆರಂಭವಾಗಿ ಪ್ರಸ್ತುತ ಸಂಸತಿ, ಸಂಪರ್ಕ ಹಾಗೂ ಭವಿಷ್ಯದ ಮೂಲಸೌಕರ್ಯಗಳೊಂದಿಗೆ ಭಾರತದ ಪ್ರಮುಖ ವಿಮಾನಯಾನ ಕೇಂದ್ರವಾಗಿ ರೂಪುಗೊಂಡಿದೆ. ಲಕ್ಷಾಂತರ ಪ್ರಯಾಣಿಕರಿಗೆ ಈ ವಿಮಾನ ನಿಲ್ದಾಣವೇ ಬೆಂಗಳೂರಿನ ಮೊದಲ ಅನುಭವವಾಗಿದೆ. ಭಾರತೀಯ ಅಂಚೆ ಇಲಾಖೆಯು ಬಿಡುಗಡೆ ಮಾಡಿರುವ ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ಧತಿ ಮೊಹರು ನಗರದ ಜತೆ ಜತೆಗೆ ವಿಮಾನ ನಿಲ್ದಾಣದ ಬೆಳವಣಿಗೆಯನ್ನು ಅರ್ಥಪೂರ್ಣವಾಗಿ ಸ್ಮರಿಸುತ್ತದೆ. ಮುಂದಿನ ದಿನಗಳಲ್ಲಿಯೂ ಬೆಳೆಯುತ್ತಿರುವ ಬೆಂಗಳೂರಿನ ಆಶಯಗಳಿಗೆ ಬೆಂಬಲ ನೀಡುತ್ತದೆ ಎಂದರು.
ಭಾರತೀಯ ಅಂಚೆ ಇಲಾಖೆಯ ಬೆಂಗಳೂರು ಕೇಂದ್ರ ಕಚೇರಿ ವಲಯದ ಅಂಚೆ ಸೇವೆಗಳ ನಿರ್ದೇಶಕ ವಿ.ತಾರಾ ಮಾತನಾಡಿ, ಈ ಅಂಚೆ ಚೀಟಿಯು ನಗರದ ಪರಂಪರೆ ಹಾಗೂ ಸಮಕಾಲೀನ ಜಾಗತಿಕ ಗುರುತನ್ನು ಪ್ರತಿಬಿಂಬಿಸುವ ಸಂಸ್ಥೆಯೊಂದನ್ನು ಈ ಸಹಭಾಗಿತ್ವದ ಮೂಲಕ ಗೌರವಿಸುತ್ತಿರುವುದು ಸಂತಸದ ಸಂಗತಿ. ವಿಶೇಷ ಅಂಚೆ ಲಕೋಟೆ ಹಾಗೂ ಸ್ಮರಣಾರ್ಥ ಅಂಚೆ ಕಾರ್ಡ್ಗಳು ಪ್ರಯಾಣಿಕರು, ಸಂಗ್ರಹ ಆಸಕ್ತರು ಮತ್ತು ನಾಗರಿಕರಿಗೆ ವಿಶೇಷ ನೆನಪಾಗಿ ಉಳಿಯಲಿವೆ ಎಂದರು.
ಈ ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ಧತಿ ಮೊಹರು ಇಂದಿನಿಂದಲೇ ವಿಮಾನ ನಿಲ್ದಾಣದ ಅಂಚೆ ಕಚೇರಿಯಲ್ಲಿ ಅಧಿಕೃತವಾಗಿ ಲಭ್ಯವಿರಲಿದೆ. ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಾರ್ಡ್ಗಳು ಬೆಂಗಳೂರು ಜಿಪಿಒನ ಫಿಲಾಟೆಲಿಕ್ ಬ್ಯೂರೋ ಸೇರಿ ಕರ್ನಾಟಕದ ಎಲ್ಲ ಪ್ರಮುಖ ಫಿಲಾಟೆಲಿಕ್ ಬ್ಯೂರೋಗಳಲ್ಲಿ ಲಭ್ಯವಿರಲಿವೆ ಎಂದರು.