Kempammadevi Chariot Festival is a success 
ರಾಜ್ಯ

ಕೆಂಪಮ್ಮದೇವಿ ರಥೋತ್ಸವ ಸಂಪನ್ನ

ಎಂ.ಎನ್​.ಕೋಟೆ: ಗುಬ್ಬಿ ತಾಲೂಕಿನ ಸಾಗಸಂದ್ರ ಗ್ರಾಮದ ಪ್ರಸಿದ್ಧ ಶ್ರೀ ಕೆಂಪಮ್ಮದೇವಿಯ ರಥೋತ್ಸವ ಸಾವಿರಾರು ಭಕ್ತರ ನಡುವೆ ಸೋಮವಾರ ಅದ್ದೂರಿಯಾಗಿ ನೆರವೇರಿತು.
ರಥೋತ್ಸವ ಪ್ರಯುಕ್ತ ಶ್ರೀ ಕೆಂಪಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ರಥಕ್ಕೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥಕ್ಕೆ ಬಾಳೆಹಣ್ಣು ಧವನ ಎಸೆದು ಹರಕೆ ತೀರಿಸಿದರು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ರಥೋತ್ಸವದಲ್ಲಿ ಸೋಮನಕುಣಿತ ಆರೇವಾಧ್ಯ, ಕಹಳೆ ಹಾಗೂ ಬಾಣಬಿರುಸುಗಳೊಂದಿಗೆ ಅದ್ದೂರಿಯಾಗಿ ನೆರವೇರಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಚೋಳರು ಪೊಲೀಸರು ಬಂದೋಬಸ್ತ್​ ವಹಿಸಿದ್ದರು.