ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಅವರು ಗುರುವಾರ ಕೆಂಭಾವಿ ವಲಯಕ್ಕೆ ಬರ ಅಧ್ಯಯನಕ್ಕೆಂದು ಭೇಟಿ ನೀಡುವರು ಎಂಬ ಪೂರ್ವ ನಿಗದಿ ಮಾಹಿತಿಯಂತೆ ಮಲ್ಲಾ ಗ್ರಾಮದ ಜಮೀನಿಗೆ ತೆರಳಲು ಕೃಷಿ ಇಲಾಖೆ ಜೆಸಿಬಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಿಸಿರುವುದು. 
ರಾಜ್ಯ

ಕೊನೇ ಕ್ಷಣದಲ್ಲಿ ರದ್ದಾದ ಕೆಂಭಾವಿ ಬರ ಅಧ್ಯಯನ

ಬರ ಅಧ್ಯಯನಕ್ಕೆಂದು ಸುರಪುರ ತಾಲೂಕಿಗೆ ಗುರುವಾರ ಬಂದ ನೂತನ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಅವರ ಬರ ಅಧ್ಯಯನ ಕೊನೇ ಕ್ಷಣದಲ್ಲಿ ರದ್ದಾಗಿದ್ದರಿಂದ ರೈತರಿಗೆ ಬರೆ ಅಧ್ಯಯನವಾಗಿ ಪರಿಣಮಿಸಿತು.

ವಲಯದಲ್ಲಿ ಸಮರ್ಪಕ ಮಳೆಯಾಗದೆ ಬಿತ್ತಿದ ಹತ್ತಿ, ತೊಗರಿ ಬೀಜ ಭೂಮಿಯಿಂದ ಮೇಲಕ್ಕೇಳದೆ ಹಾಳಾಗಿದ್ದರೂ ಬರ ಅಧ್ಯಯನ ಮಾಡದೆ ಕೇವಲ ತಾಲೂಕು ಕೇಂದ್ರಕ್ಕೆ ಹೊಂದಿಕೊAಡಿರುವ ಮೂರ್ನಾಲ್ಕು ಹಲ್ಳಿಗಳಿಗೆ ಮಾತ್ರ ಸೀಮಿತ ಎಂಬAತಾಗಿದ್ದರಿAದ ರೈತರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಹುಣಸಗಿ ಭೇಟಿ ನೀಡಿ ನಂತರ ಕೆಂಭಾವಿ ವಲಯದ ಕೆಂಭಾವಿ ಹಾಗೂ ಮಲ್ಲಾ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡುತ್ತಾರೆ ಎಂಬುದು ನಿಗದಿಯಾಗಿತ್ತು. ಅದರಂತೆ ಕೃಷಿ ಮತ್ತು ಪೊಲೀಸ್ ಅಽಕಾರಿಗಳು ಈ ಬಗ್ಗೆ ಎಲ್ಲ ಸಿದ್ಧತೆ ಮಾಡಿಕೊಂಡು ಕೃಷಿ ಇಲಾಖೆ ಸಿಬ್ಬಂದಿ ಸಚಿವರು ಭೇಟಿ ನೀಡುವ ಜಮೀನುಗಳಿಗೆ ತೆರಳಲು ರಸ್ತೆ ಕೂಡ ನಿರ್ಮಿಸಿದ್ದರು.
ಆದರೆ ಮಧ್ಯಾಹ್ನ ೧೨ ಗಂಟೆ ನಂತರ ಸಚಿವರು ಈ ಭಾಗದಲ್ಲಿ ಬರುವುದು ರದ್ದಾಗಿದೆ ಎಂಬ ಸಂದೇಶ ಹೊರ ಬೀಳುತ್ತಿದ್ದಂತೆ ಸಚಿವರ ಆಗಮನಕ್ಕಾಗಿ ಕಾದು ಕುಳಿತಿದ್ದ ಅನೇಕ ರೈತರು ಮತ್ತು ಅಽಕಾರಿಗಳು ಕಾದು ಸುಸ್ತಾಗಿ ತಮ್ಮ ಮನೆಗೆ ತೆರಳುವಂತಾಯಿತು.