ಶಿರಾ ತಾಲೂಕು ಹನುಮಂತನಗರ ಯುವ ಚಾವಡಿchild protection -ನವ್ಯದಿಶ ಹಾಗೂ ಕೆ.ಮಲ್ಲಣ್ಣ ಸ್ಮಾರಕ ಪದವಿ ಪೂರ್ವ ಕಾಲೇಜಿಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್ಜಿ ಪವಿತ್ರಾ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಗೌತಮ್, ನವೀನ್, ಕಾಲೇಜಿನ ಸಂಯೋಜಕ ಉಪನ್ಯಾಸಕ ಮನೋಜ್, ಮೇಘಾ ರಾಮದಾಸ್ ಇದ್ದರು.
ಶಿರಾ :ಹದಿಹರೆ ಎಂಬುದು ಪರಿವರ್ತನಾತ್ಮಕ ಹಂತ, ಬಾಲ್ಯದಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಹಲವು ಬದಲಾವಣೆ ಸಂಭವಿಸುತ್ತವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್ಜಿ ಪವಿತ್ರಾ ತಿಳಿಸಿದರು. child protection
ತಾಲೂಕಿನ ಕಳ್ಳಬೆಳ್ಳ ಹೊಬಳಿಯ ಹನುಮಂತನಗರ ಯುವ ಚಾವಡಿ -ನವ್ಯದಿಶ ಹಾಗೂ ಕೆ.ಮಲ್ಲಣ್ಣ ಸ್ಮಾರಕ ಪದವಿ ಪೂರ್ವ ಕಾಲೇಜಿಲ್ಲಿ ಆಯೋಜಿಸಿದ್ದ ಸರ್ಟಿಫಿಕೇಟ್ ಕೋರ್ಸ್ ಆನ್ಲೈಫ್ ಸ್ಕಿಲ್ಸ್ ಆ್ಯಂಡ್ ಚೈಲ್ಡ್ ಪ್ರೊಟೆಕ್ಷನ್ ಕಾರ್ಯಕ್ರಮದಲ್ಲಿ ಮಾತನಾಡಿ, ಜಂಕ್ಫುಡ್ ಸಂಸತಿಯಿಂದ ದೂರವಿಟ್ಟು, ಜೀವಸತ್ವ, ಪ್ರೋಟಿನ್ ಮತ್ತು ಐರನ್ನಿಂದ ಕೂಡಿರುವ ಹಾಗೂ ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಆಹಾರ, ಸೊಪ್ಪು- ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಬೇಕು ಎಂದರು.
ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಹದಿಹರೆಯದವರಲ್ಲಿ ಖಿನ್ನತೆ, ಆತಂಕ ಮತ್ತು ಒತ್ತಡ ಹೆಚ್ಚಾಗುತ್ತಿದೆ. ದೇಹದಷ್ಟೇ ಮನಸ್ಸಿನ ಆರೋಗ್ಯವು ಮುಖ್ಯ. ದಿನದಿಂದ ದಿನಕ್ಕೆ ಪೋಕ್ಸೋ ಪ್ರಕರಣ ಹೆಚ್ಚಾಗುತ್ತಿದ್ದು, ದುರಭ್ಯಾಸಗಳಿಂದ ದೂರವಿದ್ದು, ಸೈಬರ್ ಭದ್ರತೆ, ಮತ್ತು ವೈಯಕ್ತಿಕ ರಕ್ಷಣೆಯಿಂದ ಜಾಗೃತರಾಗಿರುವುದು ಉತ್ತಮ ಪ್ರಜೆಯನ್ನಾಗಿ ಬಿಂಬಿಸುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಜೆ.ಎಸ್.ಜನಾರ್ದನ್ ಮಾತನಾಡಿ, ಕಾಲೇಜುಗಳು ವಿದ್ಯಾರ್ಥಿಗಳಿಗೆ ಸುರಕ್ಷತೆ, ಆತ್ಮವಿಶ್ವಾಸ, ಜೀವನ ಕೌಶಲ ಮತ್ತು ಭಾವನಾತ್ಮಕ ಬೆಂಬಲ ನೀಡುವ ಸ್ಥಳವಾಗಬೇಕು. ಮಕ್ಕಳಿಗೆ ನಿಯಮಿತ ಆರೋಗ್ಯ, ಸುರಕ್ಷತೆ, ಕಾನೂನು ಅರಿವು ಮತ್ತು ಕೌಶಲಯುತ ಕಾರ್ಯಕ್ರಮ ನಡೆಸಬೇಕೆಂದು ಇಲಾಖೆ ಶಿಫಾರಸು ಮಾಡಿದೆ. ಈ ಕಾರ್ಯಕ್ರಮ ಯುವಕರ ಬದುಕಿಗೆ ದಿಕ್ಕು ತೋರಿಸುವ ದಾರಿದೀಪ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಗೌತಮ್, ನವೀನ್, ಕಾಲೇಜಿನ ಸಂಯೋಜಕ ಉಪನ್ಯಾಸಕ ಮನೋಜ್, ಮೇಘಾ ರಾಮದಾಸ್ ಇತರರು ಇದ್ದರು.