Keep children away from mobile phones.
ಶಿರಾ : ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕತೆ ಹಾಳಾಗುತ್ತಿರುವುದು ಕಳವಳಕಾರಿ, ಪಾಲಕರು ಈ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ ಮಕ್ಕಳಲ್ಲಿ ಅರಿವು ಮೂಡಿಸಬೇಕೆಂದು ರಾಮಕೃಷ್ಣ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಕೆ.ರಾಮಕೃಷ್ಣ ಹೇಳಿದರು.
ಶಿರಾ ನಗರದ ಬುಕ್ಕಾಪಟ್ಟಣ ರಸ್ತೆಯಲ್ಲಿರುವ ಶಾಂತಿನಿಕೇತನ ಪಬ್ಲಿಕ್ ಶಾಲೆಯಲ್ಲಿ 5ನೇ ವರ್ಷದ ಶಾಂತಿನಿಕೇತನ ಸಂಭ್ರಮ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಮುಖ್ಯಶಿಕ್ಷಕಿ ಪ್ರಿಯಾಂಕಾ ಕೃಷ್ಣಮೂರ್ತಿ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ವರ್ಷದ ವಿವಿಧ ಚಟುವಟಿಕೆಗಳ ವರದಿ ಮಂಡಿಸಿದರು.
ಬರಗೂರು ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಿ.ಎನ್.ಪರಮೇಶ್ ಗೌಡ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಾಂತಿನಿಕೇತನ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಥರ್ವ ಗ್ಲೋಬಲ್ ಸ್ಕೂಲ್ ಸಂಸ್ಥಾಪಕ ದೇವರಾಜು ಮಾತನಾಡಿ, ಗುಣಮಟ್ಟದ ಶಿಕ್ಷಣದ ಜತೆಗೆ, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಶಿಕ್ಷಕರು ಕಲಿಸಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಅವರನ್ನು ಸನ್ಮಾನಿಸಿಸಲಾಯಿತು. ಶಿಕ್ಷಕರಾದ ಮುಂಝಿರಾ, ದಿವ್ಯಾ, ಸಾದಿಯಾ ಸಯ್ಯದ್, ಅಶ್ವಿನಿ, ಮಹಾಲಕ್ಷಿ$್ಮ, ಪವಿತ್ರಾ, ಹಾಜೀರಾ, ಅಝ್ರಾ, ದೀಪಶ್ರೀ, ಲಾವಣ್ಯ ಇದ್ದರು.