ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಪದವಿ ಹಾಗೂ ಪಿಯುಸಿ- ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.
- ಈ ಹುದ್ದೆಗಳಿಗೆ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆ ಕೂಡ ನಡೆಸಲು ಸಿದ್ಧತೆ ನಡೆದಿದೆ.
- ಯಾವ ಇಲಾಖೆಯ ಯಾವ ಹುದ್ದೆಗೆಳಿಗೆ ಅರ್ಜಿ ಸಲ್ಲಿಸಬಹುದು ಎಂಬುದರ ವಿವರಗಳನ್ನು ವೆಬ್ಸೈಟ್‌ನಲ್ಲಿ ಪ್ರಕಟಿಸಲಾಗಿದೆ
- ರಾಜ್ಯದ ವಿವಿಧ 50 ಇಲಾಖೆಗಳಲ್ಲಿ ಖಾಲಿ ಇರುವ 4,744 ಹುದ್ದೆಗಳ ನೇಮಕಾತಿ
ಬೆಂಗಳೂರು ರಾಜ್ಯದ ವಿವಿಧ 50 ಇಲಾಖೆಗಳಲ್ಲಿ ಖಾಲಿ ಇರುವ 4,744 ಹುದ್ದೆಗಳ ನೇಮಕಾತಿಗೆ ಇದೇ ತಿಂಗಳಿನಲ್ಲಿ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಪದವಿ ಹಾಗೂ ಪಿಯುಸಿ- ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ. ಈ ಹುದ್ದೆಗಳಿಗೆ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆ ಕೂಡ ನಡೆಸಲು ಸಿದ್ಧತೆ ನಡೆದಿದೆ. ಯಾವ ಇಲಾಖೆಯ ಯಾವ ಹುದ್ದೆಗೆಳಿಗೆ ಅರ್ಜಿ ಸಲ್ಲಿಸಬಹುದು ಎಂಬುದರ ವಿವರಗಳನ್ನು ವೆಬ್ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪಠ್ಯಕ್ರಮದ ವಿವರಗಳನ್ನು ಕೂಡ ನೀಡಲಾಗಿದೆ. ಒಮ್ಮೆ ನೋಡಿಕೊಂಡು ಅಧ್ಯಯನ ಆರಂಭಿಸಿ. ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,421 ಹಾಗೂ ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,062 ಇವೆ. ತಾಂತ್ರಿಕ ಹುದ್ದೆಗಳು 261 ಇದ್ದು, ನಂತರದ ದಿನಗಳಲ್ಲಿ ಇನ್ನೂ ಹೊಸ ಇಲಾಖೆ ಮತ್ತು ಹುದ್ದೆಗಳು ಸೇರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.