ಶ್ರೀದಲ್ಲೇ ಕೆರೆಗಳಿಗೆ ಬರಲಿದೆ ಕೆ.ಸಿ.ವ್ಯಾಲಿ ನೀರು KC Valley 
ರಾಜ್ಯ

ಶ್ರೀದಲ್ಲೇ ಕೆರೆಗಳಿಗೆ ಬರಲಿದೆ ಕೆ.ಸಿ.ವ್ಯಾಲಿ ನೀರು KC Valley

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಹೇಳಿಕೆ
ಶ್ರೀನಿವಾಸಪುರ: ಶ್ರೀದಲ್ಲೇ ಕೆ.ಸಿ.ವ್ಯಾಲಿ ನೀರು ಕೆರೆಗಳಿಗೆ ಬರಲಿದೆ. ಈಗಾಗಲೇ ಮುದುವಾಡಿ ಕೆರೆಯ ಆವರಣದಲ್ಲಿ ಕೆ.ಸಿ.ವ್ಯಾಲಿ ನೀರಿನ ಪಂಪ್​ಹೌಸ್​ ಕಾಮಗಾರಿ ಪೂರ್ಣವಾಗುತ್ತಿದೆ. ಗುತ್ತಿಗೆದಾರರಿಗೆ ಸರ್ಕಾರದಿಂದ 100 ಕೋಟಿ ರೂ. ಮಂಜೂರಾಗಿದ್ದು, ಚಳಿಗಾಲದ ಅಧಿವೇಶನ ಮುಗಿದ ನಂತರ ಮುಖ್ಯಮಂತ್ರಿ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ತಿಳಿಸಿದರು. KC Valley
ತಾಲೂಕಿನ ಹೊದಲಿ ಪಂಚಾಯಿತಿ ವ್ಯಾಪ್ತಿಯ ದಾಸರತಿಮ್ಮನಹಳ್ಳಿ, ಮಜರಾ ಕೋಡಿಪಲ್ಲಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಶ್ರೀ ಸೀತಾ&ರಾಮ&ಲಕ್ಷ$್ಮಣ, ಆಂಜನೇಯ ದೇವಾಲಯದಲ್ಲಿ ಆಯೋಜಿಸಿದ್ದ 48 ದಿನಗಳ ಮಂಡಲ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಸೋಮಯಾಜಲಪಲ್ಲಿ, ರೋಣೂರು ಈ ಭಾಗಗಳಲ್ಲಿ ಪಂಪ್​ಹೌಸ್​ ನಿರ್ಮಾಣ ಮಾಡಿಸಿ ಎಲ್ಲ ಕೆರೆಗಳಿಗೂ 2ನೇ ಹಂತದ ಕೆ.ಸಿ. ವ್ಯಾಲಿ ನೀರು ಹರಿಯಲಿದೆ. ಇದರಿಂದ ಅಂತರ್​ ಜಲ ವೃದ್ಧಿಯಾಗುತ್ತದೆ. ರೈತರೂ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿಕೊಂಡು ಬೆಳೆ ಬೆಳೆಯಬಹುದು ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಬೆಂಗಳೂರಿನಿಂದ ಗ್ರಾಮಕ್ಕೆ ಬರುವ ಢಕಾಯಿತಿಗಳನ್ನು ನಂಬಬೇಡಿ. ಹಣದ ಮತ್ತಿನಲ್ಲಿ ಇರುವ ಕೆಲವರು ಜಮೀನು ಕೊಂಡುಕೊಳ್ಳುವುದಕ್ಕೆ ಇಲ್ಲಿಗೆ ವಲಸೆ ಬರುತ್ತಿದ್ದಾರೆ. ಅಂತಹವರ ಮಾತಿಗೆ, ವ್ಯಾಮೋಹಕ್ಕೆ ಮರುಳಾಗಬೇಡಿ. ಜಮೀನು ಮಾರಿದರೆ ಅದರಿಂದ ಬರುವ ಹಣ ಹೆಚ್ಚು ಕಾಲ ಉಳಿಯುವುದಿಲ್ಲ. ಜಮೀನು ಇದ್ದಲ್ಲಿ ವಂಶ ಪಾರಂಪರ್ಯ ದುಡಿದು ತಿನ್ನಬಹುದು ಎಂದರು.
ಗ್ರಾಮದಲ್ಲಿ ವಿಶೇಷವಾಗಿ ವಾಲ್ಮೀಕಿ ಸಮಾಜದ ಮನೆಗಳು ಹೆಚ್ಚು ಇದ್ದು, ಇವರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದರು. ಆ ಸಂದರ್ಭದಲ್ಲಿ ಇಮರಕುಂಟೆ ಚೌಡರೆಡ್ಡಿ ಕಾಳಜಿವಹಿಸಿ ನನ್ನನ್ನು ಗ್ರಾಮಕ್ಕೆ ಕರೆದುಕೊಂಡು ಬಂದು ಅಂದಿನ ಅಧಿಕಾರಾವಧಿಯಲ್ಲಿ ವಸತಿ ಯೋಜನೆ, ಕುಡಿಯುವ ನೀರು, ವಿದ್ಯುತ್​, ರಸ್ತೆ ಸೌಕರ್ಯ ಒದಗಿಸುವಂತೆ ಮಾಡಿದರು ಎಂದು ಮೆಲುಕು ಹಾಕಿದರು.