Kayaka Yogi is a virtuous soul.
ಕುಣಿಗಲ್: ಕುಣಿಗಲ್ ಪಟ್ಟಣದ ಹಟವೇಶ್ವರ ಶಿವಯೋಗಿಗಳ ದೇವಾಲಯದ ಆವರಣದಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮ ದಿನಾಚರಣೆಯನ್ನು ಅಯೋಜಿಸಲಾಗಿತ್ತು. ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಕುಣಿಗಲ್ ಟೌನ್ ವೀರಶೈವ ಸವಾಜದ ಅಧ್ಯಕ್ಷ ವಸಂತ ಕುವಾರ್ ಮಾತನಾಡಿ, ಶಿವಕುವಾರ ಸ್ವಾಮೀಜಿ ಅವರ ಜನ್ಮದಿನದಂದು ಪ್ರತಿ ತಾಯಿಯು ಇಂತಹ ಮಗನನ್ನು ಪಡೆಯಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ಅಂತಹ ಒಂದು ಪುಣ್ಯ ಚೇತನ. ಕರ್ನಾಟಕದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಅವರ ದರ್ಶನ ಭಾಗ್ಯದಿಂದ ನಾವು ಭಗವಂತನನ್ನು ಕಣ್ಣಾರೆ ಕಂಡಿದ್ದೇವೆ ಎಂದರು.
ದೇವಾಲಯದಲ್ಲಿ ಅಭಿಷೇಕ, ಅರ್ಚನೆ ಸೇರಿದಂತೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇದೇ ದಿನಾಂಕದಲ್ಲಿ ಹುಟ್ಟಿದ ಹಲವಾರು ಮಕ್ಕಳಿಗೆ ಹುಟ್ಟುಹಬ್ಬವನ್ನ್ಲು ಆಚರಿಸಿ ಪಾಲಕರು ಸಂಭ್ರಮಿಸಿದರು.