- 10 ಜಿಲ್ಲೆಗಳಲ್ಲಿ 20,668 ಚದುರ ಕಿ.ಮೀ. ವ್ಯಾಪ್ತಿಯಲ್ಲಿ ಪರಿಸರ ಸೂಕ್ಮ ಪ್ರದೇಶ
- 39 ತಾಲೂಕುಗಳು 1449 ಗ್ರಾಮಗಳು ಸಂತ್ರಸ್ತವಾಗಲಿವೆ
ಡಾ.ಕೆ.ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚಿಸಲು 2 ತಿಂಗಳೊಳಗೆ ಒಂದು ದಿನ ವಿಶೇಷ ಅಧಿವೇಶನ ಕರೆದು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರ ಸರ್ಕಾರವು ಈ ಸಂಬಂದ 7ನೇ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ರಾಜ್ಯದ ಆಕ್ಷೇಪ ತಿಳಿಸಲು 60 ದಿನ ಕಾಲಾವಕಾಶ ನೀಡಲಾಗಿದೆ. ಆದುದರಿಂದ ಈ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು ಎಂದರು.
ಪರಿಸರ ಸೂಕ್ಷ್ಮ ಪ್ರದೇಶ ಎಂದು ೋಷಣೆ ಮಾಡುವುದರಿಂದ ಈ ಪ್ರದೇಶಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರುವುದರಿಂದ ಜನ ಜೀವನಕ್ಕೆ ತೀವ್ರ ಸಮಸ್ಯೆ ಆಗಲಿದೆ ಎಂದು ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಸೆ.24ರಂದು ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೂ ಅದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಮತ್ತೆ ಅಧಿಸೂಚನೆ ಹೊರಡಿಸಿರುವ ಪತ್ರ ಬರೆದಿದೆ ಎಂದರು.
ಒಂದು ರಾಜ್ಯಕ್ಕೆ ಒಂದು ನ್ಯಾಯ. ಮತ್ತೊಂದು ರಾಜ್ಯಕ್ಕೆ ಇನ್ನೊಂದು ರೀತಿ ನ್ಯಾಯ ಎನ್ನುವಂತೆ ಕೇಂದ್ರ ನಡೆದುಕೊಳ್ಳುವ ಮೂಲಕ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಬಾರದು. ಯಾವ್ಯಾವ ರಾಜ್ಯದಲ್ಲಿ ಏನೇನು ನಡೆದಿದೆ ಎನ್ನುವ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯಲ್ಲಿ 10 ಜಿಲ್ಲೆಗಳಲ್ಲಿ 20,668 ಚದುರ ಕಿ.ಮೀ. ವ್ಯಾಪ್ತಿಯಲ್ಲಿ ಪರಿಸರ ಸೂಕ್ಮ ಪ್ರದೇಶವೆಂದು ೋಷಿಸಲು ಗುರುತಿಸಲಾಗಿದೆ. ಇದರಿಂದಾಗಿ 39 ತಾಲೂಕುಗಳು 1449 ಗ್ರಾಮಗಳು ಸಂತ್ರಸ್ತವಾಗಲಿವೆ. ಈ ವರದಿ ಜಾರಿಗೆ ಬಂದರೆ ಮಲೆನಾಡು ಮತ್ತು ಕರಾವಳಿ ಭಾಗದ ಜನರ ಬದುಕು ದುಸ್ತರವಾಗಲಿದೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ಬಗ್ಗೆಯೇ ಶಾಸಕರು ಗಂಭೀರವಾಗಿ ಮಾತನಾಡಿದ್ದಾರೆ. ಅವರ ಅಭಿಪ್ರಾಯಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲದೆ, ಪ್ರತ್ಯೇಕ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.
*ಕಸ್ತೂರಿ ರಂಗನ್ ವರದಿಯಲ್ಲಿ 10 ಜಿಲ್ಲೆಗಳಲ್ಲಿ 20,668 ಚದುರ ಕಿ.ಮೀ. ವ್ಯಾಪ್ತಿಯಲ್ಲಿ ಪರಿಸರ ಸೂಕ್ಮ ಪ್ರದೇಶವೆಂದು ೋಷಿಸಲು ಗುರುತಿಸಲಾಗಿದೆ. ಇದರಿಂದಾಗಿ 39 ತಾಲೂಕುಗಳು 1449 ಗ್ರಾಮಗಳು ಸಂತ್ರಸ್ತವಾಗಲಿವೆ. ಈ ವರದಿ ಜಾರಿಗೆ ಬಂದರೆ ಮಲೆನಾಡು ಮತ್ತು ಕರಾವಳಿ ಭಾಗದ ಜನರ ಬದುಕು ದುಸ್ತರವಾಗಲಿದೆ