Ravindra Muddi 
ರಾಜ್ಯ

"ಸಿಗ್ನಲ್​ ಜಂಪ್​' ಕೃತಿಗೆ ಕಸಾಪ ದತ್ತಿ ಪ್ರಶಸ್ತಿ

ಧಾರವಾಡ: ಪತ್ರಕರ್ತ ರವೀಂದ್ರ ಮುದ್ದಿ ಅವರ "ಸಿಗ್ನಲ್​ ಜಂಪ್​' ಕಥಾ ಸಂಕಲನಕ್ಕೆ 2024ನೇ ಸಾಲಿನ ಪ್ರಕಾಶಕ ಆರ್​.ಎನ್​. ಹಬ್ಬು ದತ್ತಿ ಪ್ರಶಸ್ತಿ ಲಭಿಸಿದೆ. 2024ರ ಜನವರಿಯಿಂದ ಡಿಸೆಂಬರ್​ ಅಂತ್ಯದವರೆಗೆ ಪ್ರಕಟಗೊಂಡ ಕೃತಿಗಳನ್ನು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್​ ಆಯ್ಕೆ ಮಾಡಿದೆ. ವಿವಿಧ ಪ್ರಕಾರದ ಸಾಹಿತ್ಯದ ಪ್ರಶಸ್ತಿಗಾಗಿ ಸುಮಾರು 900 ಕೃತಿಗಳು ಸಲ್ಲಿಕೆಯಾಗಿದ್ದವು. ಸಾಹಿತಿ ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿಯು ಪ್ರಕಾಶಕರಿಗೆ ನೀಡುವ ದತ್ತಿ ಪ್ರಶಸ್ತಿಗಾಗಿ "ಸಿಗ್ನಲ್​ ಜಂಪ್​' ಕೃತಿಯನ್ನು ಆಯ್ಕೆ ಮಾಡಿದೆ. ರವೀಂದ್ರ ಮುದ್ದಿ ರಚಿತ ಕಥಾ ಸಂಕಲನದಲ್ಲಿ ವಿಭಿನ್ನ ಹಾಗೂ ಹೊಸತನದ ಒಟ್ಟು ಕಥೆಗಳಿದ್ದು, ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ.