- ಗ್ರೇಡ್ ಬದಲು SSLC ಪರೀಕ್ಷೆಗೆ ಮತ್ತೆ ಅಂಕ ಪದ್ಧತಿ ಅನುಸರಿಸಿ ಎಂದ ಹೈಕೋರ್ಟ್ ಪೀಠ ಮೊದಲಿಗೆ
- ಅಗತ್ಯವಾದ ನಿಯಮ ರೂಪಿಸಬೇಕು, ನಿಯಮಕ್ಕೂ ಮುನ್ನ ಅಂಕ ಪದ್ದತಿ ಬದಲು ಸೂಕ್ತವಲ್ಲ
- ರಾಜ್ಯ ಸರ್ಕಾರದ ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಗ್ರೇಡ್ ಬದಲಿಗೆ ಅಂಕ ನೀಡಲು ನಿರ್ದೇಶಿಸಿ ಹೊರಡಿಸಿರುವ ಆದೇಶ ಮರು ಪರಿಶೀಲಿಸುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿ, ಇತ್ಯರ್ಥ ಪಡಿಸಿದೆ.
ಅಂಕ ಕೊಡಿ ಗ್ರೇಡ್ ಬೇಡ
ನ್ಯಾ.ಇ.ಎಸ್.ಇಂದಿರೇಶ್ ಅವರಿದ್ದ ಪೀಠವು ಪ್ರಸ್ತಕ ಸಾಲಿಗೆ SSLC ಪರೀಕ್ಷೆಗೆ ಮತ್ತೆ ಅಂಕ ಪದ್ಧತಿ ಅನುಸರಿಸಿ ಎಂದು ನಿರ್ದೇಶಿಸಿದೆ. ಸರ್ಕಾರದ ಪರ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಅವರು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸಲ್ಲಿಸಿದ್ದ ಪಿಐಎಲ್ ವಜಾಗೊಂಡಿದೆ.
ಇದು ತೃತೀಯ ಭಾಷೆಗೆ ಸಂಬಂಧಿಸಿದ್ದಾಗಿದೆ. ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಅನುತ್ತೀರ್ಣರಾಗಿದ್ದಾರೆ. ಹೀಗಾಗಿ ಸರ್ಕಾರ ವಿದ್ಯಾರ್ಥಿಗಳ ಹೊರೆ ಕಡಿಮೆ ಮಾಡಲು ಸೂಕ್ತ ತಿದ್ದುಪಡಿಯೊಂದಿಗೆ ನಿಯಮ ರಚಿಸಲು ಕರುಡು ರೂಪಿಸುತ್ತಿದೆ. ಸರ್ಕಾರ ಅಂಕ ನೀಡುವ ಬದಲು ಗ್ರೇಡ್ ಕೊಡುತ್ತಿದೆ ಎಂದು ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಕೋರ್ಟ್ ಹೇಳಿದ್ದೇನು?
ಎಲ್ಲರನ್ನೂ ಪಾಸು ಮಾಡುವ ನಿಮ್ಮ ಉದ್ದೇಶ ಸರಿ ಇರಬಹುದು. ಅದು ಕೇಳಲು ಚೆನ್ನಾಗಿದೆ. ಒಳ್ಳೆಯ ಶಿಕ್ಷಕರನ್ನು ನೇಮಿಸಿ. ಮಕ್ಕಳು ಕನ್ನಡ, ಹಿಂದಿ.. ಯಾವ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದನ್ನು ಕಲಿಯಲಿ ಬಿಡಿ. ವಿದ್ಯಾರ್ಥಿಗಳಿಗೆ ಬೇಸಿಕ್ ವಿಚಾರವೇ ಗೊತ್ತಿಲ್ಲ ಎಂದು ಹೈಕೋರ್ಟ್ ಪೀಠ ಹೇಳಿತು.
ರಾಜ್ಯ ಸರ್ಕಾರವು ಈ ಹಿಂದೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೂ ನಡೆದು ಮುಗಿದಿದೆ. ಕರಡು ನಿಯಮಗಳನ್ನು ಏಪ್ರಿಲ್ 10ರಂದು ಹೊರಡಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆ ಮುಗಿದ ನಂತರ ನಿಯಮ ಬದಲಿಸುವುದು ಕಾನೂನುಬದ್ಧವಲ್ಲ ಎಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಇತ್ಯರ್ಥ ಪಡಿಸ ಅಂಕ ಪದ್ಧತಿಯನ್ನೇ ಮುಂದುವರಿಸಲು ಆದೇಶಿಸಿದೆ.
ರಿಟ್ ಅರ್ಜಿ ಸಲ್ಲಿಸಿದ್ದ ಯುವತಿ
ಸಹನಾ ಆರ್ ನಾಯ್ಕ್ ಎನ್ನುವ ಚಿಕ್ಕಮಗಳೂರಿನ ಯುವತಿ, ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಂಕ ಮುಖ್ಯ ಗ್ರೇಡ್ ಕೊಟ್ಟರೆ ಭವಿಷ್ಯ ಸಮಸ್ಯೆ. ಗ್ರೇಡ್ ಬದಲು ಅಂಕ ಕೊಡುವಂತೆ ನಿರ್ದೇಶನ ಕೊಡುವಂತೆ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಸದ್ಯ ಹೈ ಕೋರ್ಟ್ನ ಈ ಆದೇಶ ಎಲ್ಲ ತೃತೀಯ ಭಾಷೆಗೂ ಅನ್ವಯವಾಗುತ್ತದೆ, (ಏಜೆನ್ಸೀಸ್)