ದ್ವಿತೀಯ ಪಿಯು ಫಲಿತಾಂಶ ಪ್ರಕಟ
- 2025-26ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟ
- ವಾಣಿಜ್ಯ ವಿಭಾಗದಲ್ಲಿ ಅದಿತಿ, ದಿಶಾ 600ಕ್ಕೆ 600 ಅಂಕ
- ಈ ವರ್ಷದ ಫಲಿತಾಂಶದಲ್ಲಿಯೂ ಬಾಲಕಿಯರದ್ದೇ ಮೇಲುಗೈ
ಬೆಂಗಳೂರು: ಇಂದು 2025-26ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಾಖಲೆಯ ಫಲಿತಾಂಶ ಲಭಿಸಿದೆ. 600ಕ್ಕೆ 600 ಅಂಕ ಗಳಿಸುವ ಮೂಲಕ ದಿಶಾ, ಆದಿತಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷ 73.45ರಷ್ಟು ಫಲಿತಾಂಶ
ಕಳೆದ ವರ್ಷಕ್ಕಿಂತ ಈ ವರ್ಷ ದಾಖಲೆಯ ಫಲಿತಾಂಶ ಕಂಡುಬಂದಿದ್ದು, ಶೇ.86ರಷ್ಟು ರಿಸಲ್ಟ್ ಲಭಿಸಿದೆ. ಪರೀಕ್ಷೆಗೆ ಹಾಜರಾದ 7.10 ಲಕ್ಷ ವಿದ್ಯಾರ್ಥಿಗಳ ಪೈಕಿ 6 ಲಕ್ಷ 10 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು 2025ರಲ್ಲಿ 73.45ರಷ್ಟು ಫಲಿತಾಂಶ ದಾಖಲಾಗಿತ್ತು. ಆದರೆ, ಈ ಬಾರಿ 12.50ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಾಗಿರುವುದು ಪೋಷಕರು ಹಾಗೂ ರಾಜ್ಯ ಶಿಕ್ಷಣ ಇಲಾಖೆಗೆ ಖುಷಿ ತಂದಿದೆ.
ವಾಣಿಜ್ಯ ವಿಭಾಗ (ಅಗ್ರ 3)
- ಅದಿತಿ ಎ. ಬಾಪು (ಜೈನ್ ಕಾಲೇಜು, ಬೆಂಗಳೂರು)- 600ಕ್ಕೆ 600
- ದಿಶಾ (ಆಳ್ವಾ ಪಿಯು ಕಾಲೇಜು, ಮೂಡಬಿದಿರೆ) - 600ಕ್ಕೆ 600
- ಧ್ವನಿ ಕುಲಕರ್ಣಿ (ಗೋಗ್ಟೆ ಪಿಯು ಕಾಲೇಜು, ತಿಲಕವಾಡಿ) - 599
ಕಲಾ ವಿಭಾಗ (ಅಗ್ರ 3)
- ಅರ್ಚನಾ ಡಿ.ಎಂ (ಇಂದೂ ಪಿಯು ಕಾಲೇಜು, ಬಳ್ಳಾರಿ)- 598
- ಸಂಗೀತಾ (ಇಂದೂ ಪಿಯು ಕಾಲೇಜು, ಬಳ್ಳಾರಿ)- 598
- ಸೃಷ್ಟಿ (ಎಸ್ಎಂಟಿ ವಿಜೆ ಕಾಲೇಜು, ಕಲಬುರ್ಗಿ) - 598
ವಿಜ್ಞಾನ ವಿಭಾಗ (ಅಗ್ರ 3)
- ಪ್ರಿನ್ಸಿಲ್ಲಾ ಕಾರ್ಡೋಜ (ದಿ ಲರ್ನಿಂಗ್ ಸೆಂಟರ್ ಕಾಲೇಜು, ಮಂಗಳೂರು) - 599
- ಅಭಿರಾಮ್ ವಿ.ಭಟ್ (ವಿವೇಕಾನಂದ ಪಿಯು ಕಾಲೇಜು) - 598
- ಏಂಜೆಲ್ ತಿವಾರಿ (ಬೇಸ್ ಪಿಯು ಕಾಲೇಜು, ಬೆಂಗಳೂರು) - 598
ಜಿಲ್ಲೆಗಳ ಶೇಕಡಾವಾರು ಉತ್ತೀರ್ಣ ಫಲಿತಾಂಶ
1. ಉಡುಪಿ – 96.39% (ಪ್ರಥಮ)
6. ಬೆಂಗಳೂರು ಗ್ರಾಮಾಂತರ – 91.00%
8. ಬೆಂಗಳೂರು ದಕ್ಷಿಣ – 90.55%
9. ಚಿಕ್ಕಬಳ್ಳಾಪುರ – 90.24%
10. ಬೆಂಗಳೂರು ಉತ್ತರ – 90.05%
32. ಯಾದಗಿರಿ – 71.21% (ಕೊನೆ ಸ್ಥಾನ)