ದ್ವಿತೀಯ ಪಿಯು ಫಲಿತಾಂಶ ಪ್ರಕಟ
- 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
- ಕಳೆದ ವರ್ಷಕ್ಕಿಂತ ಈ ವರ್ಷ ದಾಖಲೆಯ ಫಲಿತಾಂಶ
- ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದ ದಿಶಾ
ಬೆಂಗಳೂರು: ಫೆ.18ರಿಂದ ಮಾ.17 ರವರೆಗೆ ನಡೆದಿದ್ದ 2025-26ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಇಂದು https//:karresults.nic.in ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ದಾಖಲೆಯ ಫಲಿತಾಂಶ ಕಂಡುಬಂದಿದ್ದು, ಶೇ.86ರಷ್ಟು ಲಭಿಸಿದೆ. ಪರೀಕ್ಷೆಗೆ ಹಾಜರಾದ 7.10 ಲಕ್ಷ ವಿದ್ಯಾರ್ಥಿಗಳ ಪೈಕಿ 6 ಲಕ್ಷ 10 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2025ರಲ್ಲಿ 73.45ರಷ್ಟು ಫಲಿತಾಂಶ ದಾಖಲಾಗಿತ್ತು. ಆದರೆ, ಈ ಬಾರಿ 12.50ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಾಗಿರುವುದು ಗಮನಾರ್ಹ.
ವಾಣಿಜ್ಯ ಹಾಗೂ ಕಲಾ ವಿಭಾಗ
ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 600ಕ್ಕೆ 600 ಅಂಕಗಳನ್ನು ಗಳಿಸುವ ಮೂಲಕ ತಮ್ಮ ಪೋಷಕರಿಗೆ ಮತ್ತು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇನ್ನು ಅದೇ ವಿಭಾಗದಲ್ಲಿ ರೋಹನ್ 600ಕ್ಕೆ 597 ಅಂಕ ಪಡೆದಿದ್ದಾರೆ. ಇನ್ನು ಕಲಾ ವಿಭಾಗದಲ್ಲಿ ಸಂಗೀತಾ ಮತ್ತು ಅರ್ಚನಾ ಇಬ್ಬರೂ 600ಕ್ಕೆ 598 ಅಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗ
600ಕ್ಕೆ 597 ಪಡೆಯುವ ಮೂಲಕ ವೈಷ್ಣವಿ ಟಾಪರ್ ಆದರೆ, 596 ಅಂಕ ಗಳಿಸಿರುವ ಶ್ರೇಷ್ಠ ಕಾಮತ್ ದ್ವಿತೀಯ ಸ್ಥಾನ ಮತ್ತು ಶ್ರೀಲಯ 593 ಮೂಲಕ ಮೂರನೇ ಸ್ಥಾನ ಗಳಿಸಿದ್ದಾರೆ. ಅವರ ನಂತರದಲ್ಲಿ ಅರ್ಚನಾ 595 ಮತ್ತು ಬೆಂಗಳೂರಿನ ರೋಶನ್ 590 ಅಂಕ ಗಳಿಸಿದ್ದಾರೆ.