ಹುಕ್ಕೇರಿ ತಾಲೂಕಿನಲ್ಲಿ ಮತ್ತೆರಡು ಪಬ್ಲಿಕ್ ಶಾಲೆ 
ರಾಜ್ಯ

ಹುಕ್ಕೇರಿ ತಾಲೂಕಿಗೆ ಮತ್ತೆರಡು ಕರ್ನಾಟಕ ಪಬ್ಲಿಕ್ ಶಾಲೆ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಹುಕ್ಕೇರಿ ತಾಲೂಕಿಗೆ ಮತ್ತೆರಡು ಕರ್ನಾಟಕ ಪಬ್ಲಿಕ್ ಶಾಲೆ
  • ಹುಕ್ಕೇರಿ ಇಸ್ಲಾಂಪುರ ಗ್ರಾಮದಲ್ಲಿ ಉದ್ಘಾಟನೆ
  • ಮಕ್ಕಳಿಗೆ ಸಮವಸ್ತ್ರ, ಪುಸ್ತಕ ವಿತರಣೆ
ಹುಕ್ಕೇರಿ ತಾಲೂಕಿಗೆ ಮತ್ತೆರಡು ಕರ್ನಾಟಕ ಪಬ್ಲಿಕ್ ಶಾಲೆ
| ಸಮನ್ವಯಾಧಿಕಾರಿ ಎ.ಎಸ್.ಪದ್ಮನವರ ಮಾಹಿತಿ | ಶಾಲೆಯ ಉದ್ಘಾಟನೆ, ಪ್ರಾರಂಭೋತ್ಸವ
ವಿಜಯವಾಣಿ ಸುದ್ದಿಜಾಲ ದಡ್ಡಿ :
ಸಚಿವ ಸತೀಶ ಜಾರಕಿಹೊಳಿ ಅವರ ಪ್ರಯತ್ನದಿಂದ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಹಾಗೂ ಮಾವನೂರ ಸರ್ಕಾರಿ ಶಾಲೆಗಳು ಉನ್ನತೀಕರಿಸಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್.ಪದ್ಮನವರ ತಿಳಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಮದಲ್ಲಿ ಸೋಮವಾರ ನಡೆದ ಕರ್ನಾಟಕ ಪಬ್ಲಿಕ್ ಶಾಲೆಯ ಉದ್ಘಾಟನೆ,ಹಾಗೂ ಶಾಲಾ ಪ್ರಾರಂಭೋತ್ಸವ ಸಮವಸ್ತ್ರ , ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳು ಯುಕೆಜಿಯಿಂದ ಪಿಯುಸಿ ತನಕ ಶಿಕ್ಷಣವನ್ನು ಒದಗಿಸಲಾಗಿದೆ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಕಲಿಕೆಗಳಲ್ಲಿ ನಡೆಯುತ್ತಿದೆ.ಸರ್ಕಾರ ಈ ಶಾಲೆಗಳನ್ನು ಪ್ರಾರಂಭಿಸಿದ ವಿದ್ಯಾರ್ಥಿಗಳ ಹಾಜರಾತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದ್ದರಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಅವರು ಮನವಿ ಮಾಡಿದರು.
ಸಚಿವ ಸತೀಶ ಜಾರಕಿಹೊಳಿ ಆಪ್ತ ಸಹಾಯಕ ಜಂಗ್ಲಿಸಾಹೇಬ ನಾಯ್ಕ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಸಿಇಟಿ ಮತ್ತು ಟಿಇಟಿ ತೇರ್ಗಡೆಯಾದ ಅರ್ಹ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಉತ್ತಮ ಗುಣಮಟ್ಟದ ಶಿಕ್ಷಣ ಲಭ್ಯವಾಗಿದೆ ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಹಲಕಿ,ಎಸ್‌ಡಿಎಂಸಿ ಅಧ್ಯಕ್ಷ ರಾಜು ಪಾಟೀಲ, ಮುಖ್ಯೋಪಾಧ್ಯಾಯ ಇ.ಬಿ. ಪಾಟೀಲ,ಗೋವಿಂದ ದೀಕ್ಷಿತ, ಬಿ.ಬಿ.ಪಾತನಾಳಿ, ಲಗಮಣ್ಣಾ ಪಣಗುದ್ದಿ, ಎ.ಬಿ. ಕೋಟೆವಾಲೆ ಇತರರಿದ್ದರು.