Dr. Chief Minister Chandru honored for lifetime achievement 
ರಾಜ್ಯ

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗಳು ಪ್ರಕಟ

ಪ್ರಮುಖ ಮುಖ್ಯಾಂಶಗಳು

  • - ಡಾ. ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವ
  • - ಶಿವಾನಂದ ತಗಡೂರು ಸೇರಿ 25 ಮಂದಿಗೆ ವಾರ್ಷಿಕ ಪ್ರಶಸ್ತಿ

ಬೆಂಗಳೂರು:

ಕರ್ನಾಟಕ ನಾಟಕ ಅಕಾಡೆಮಿಯು 2026-27ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ಹಿರಿಯ ಕಲಾವಿದ ಡಾ. ಮುಖ್ಯಮಂತ್ರಿ ಚಂದ್ರು ಭಾಜನರಾಗಿದ್ದಾರೆ.

ರಂಗಸೇವೆಗಾಗಿ ವಿಜಯವಾಣಿ ಪತ್ರಿಕೆಯ ಹಿರಿಯ ವಿಶೇಷ ವರದಿಗಾರ ಶಿವಾನಂದ ತಗಡೂರು ಸೇರಿ 25 ಮಂದಿ ವಾರ್ಷಿಕ ಪ್ರಶಸ್ತಿಗೆ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳಿಗೆ 7 ಮಂದಿ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೀವಮಾನ ಸಾಧನೆ ಪ್ರಶಸ್ತಿಯು 50 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಯು ತಲಾ 25 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಹೊಂದಿದೆ. ದತ್ತಿ ಪ್ರಶಸ್ತಿಗಳು ತಲಾ 15 ಸಾವಿರ ನಗದು ಒಳಗೊಂಡಿವೆ. ಸೆಪ್ಟೆಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಿದ್ದು, ಇನ್ನೂ ಸ್ಥಳ ಹಾಗೂ ದಿನಾಂಕ ನಿಗದಿಯಾಗಿಲ್ಲ ಎಂದು ಅಧ್ಯಕ್ಷರು ತಿಳಿಸಿದರು.

ವಾರ್ಷಿಕ ಪ್ರಶಸ್ತಿ ಪುರಸ್ಕೃತರು:

ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ (ಧಾರವಾಡ), ರಮೇಶ ತಿಪ್ಪಣ್ಣ ಚಿತ್ರಗಾರ (ಇಳಕಲ್ ಬಾಗಲಕೋಟೆ), ದೇವನಹಳ್ಳಿಯ ಆರ್.ರಾಮಕೃಷ್ಣ (ಚನ್ನಯ್ಯ) (ಬೆಂಗಳೂರು ಗ್ರಾಮಾಂತರ), ಅನಸೂಯ ರೇವಣಸಿದ್ದಯ್ಯ ಹೊಸೂರುಮಠ (ಲಕ್ಕುಂಡಿ ಗದಗ), ಅಯ್ಯಣ್ಣ ಸ್ವಾಮಿ ಹಿರೇಮಠ (ಕಲಬುರಗಿ), ಎಚ್.ಎಸ್. ಣಿಯಮ್ಮ (ಸಾಗರ ಶಿವಮೊಗ್ಗ), ಮಲ್ಲಪ್ಪ ಭರಮಪ್ಪ ಕುರಿ (ಕೊಪ್ಪಳ), ಕೆ.ಪಿ.ಸ್ವಾಮಿ (ಮಂಡ್ಯ), ಸುಶೀಲಾ ಹೆಗಡೆ ಮೂರೂರು (ಸಿದ್ಧಾಪುರ ಉತ್ತರ ಕನ್ನಡ), ಎಸ್.ರಾಜಕುಮಾರ್ (ಬೆಂಗಳೂರು ನಗರ), ಡಾ.ಎಂ.ಗಣೇಶ್ ಹೆಗ್ಗೋಡು (ಸಾಗರ ಶಿವಮೊಗ್ಗ), ಪ್ರದೀಪ್ ಚಂದ್ರ ಕುತ್ಪಾಡಿ (ಉಡುಪಿ), ಎನ್.ಟಿ. ಕೃಷ್ಣಪ್ಪ (ಬೆಂಗಳೂರು ನಗರ), ಪುರುಷೋತ್ತಮ ಹಂದ್ಯಾಳ್ (ಬಳ್ಳಾರಿ), ಡಾ. ಎಸ್.ವಿ.ಸುಷ್ಮಾ (ಬೆಂಗಳೂರು ನಗರ), ನಂದ ಹಳೆಮನೆ (ಮೈಸೂರು), ಶ್ರೀನಿವಾಸ್ (ರಾಮನಗರ), ಯಲಹಂಕದ ವೈ.ಎನ್. ಉಮಾ (ಬೆಂಗಳೂರು ನಗರ), ಬೈಲಹೊಂಗಲದ ಗದಿಗೆಯ್ಯ ವಿ. ಹಿರೇಮಠ (ಬೆಳಗಾವಿ), ಕೂಡ್ಲಿಗಿಯ ಟಿ.ಭಾರತಿ (ವಿಜಯನಗರ), ಬಿ. ಸಾವಿತ್ರಮ್ಮ (ದಾವಣಗೆರೆ), ಎಂ.ಸಿ. ಶಿವರುದ್ರಪ್ಪ (ತುಮಕೂರು), ಕೆ.ವೇಣುಗೋಪಾಲ್ ಬೆಂಗಳೂರು ನಗರ ಹಾಗೂ ಮಾಲೂರಿನ ಎನ್.ಎಂ.ಲಕ್ಷ್ಮಯ್ಯ (ಕೋಲಾರ).

ದತ್ತಿನಿಧಿ ಪ್ರಶಸ್ತಿ

ಎಚ್.ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರಕ್ಕೆ ಬಿ.ಜಿ. ಶ್ರೀಧರ (ಬೆಂಗಳೂರು ನಗರ), ಬಿ.ಆರ್.ಅರಿಶಿಣಗೋಡಿ ದತ್ತಿ ಪುರಸ್ಕಾರಕ್ಕೆ ಆಶ್ಪಾಕ ಹುಸೇನ ಹಾ. ಜಾಗೀರದಾರ (ವಿಜಯಪುರ), ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರಕ್ಕೆ ಟಿ. ನರಸೀಪುರದ ಡಾ. ಎಂ. ಚಂದ್ರಪ್ಪ (ಮೈಸೂರು), ಶ್ರೀಮತಿ ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರಕ್ಕೆ ದಯಾನಂದ ಚ ಬೀಳಗಿ (ಗದಗ), ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಕ್ಕೆ ಕುಣಿಗಲ್‌ನ ಗಂಗಾಧರರೆಡ್ಡಿ ವಿ.ಆರ್. (ತುಮಕೂರು), ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರಕ್ಕೆ ವೈ.ಎನ್. ಶಿವಣ್ಣ (ತುಮಕೂರು) ಹಾಗೂ ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರಕ್ಕೆ ಸಾಣೇಹಳ್ಳಿಯ ಚಂದ್ರಮ್ಮ (ಚಿತ್ರದುರ್ಗ).